Vettaiyan Trailer: ಪಾಪಿಗಳ ಎನ್‌ಕೌಂಟರ್ ಮಾಡಲು ಖಾಕಿ ತೊಟ್ಟು ಬಂದ ʼತಲೈವಾʼ
Team Udayavani, Oct 2, 2024, 6:56 PM IST
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅಭಿನಯದ ʼವೆಟ್ಟೈಯನ್ʼ (Vettaiyan) ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.
ʼಜೈಲರ್ʼ ಬಳಿಕ ರಜಿನಿಕಾಂತ್ ಖಾಕಿ ತೊಟ್ಟಿರುವ ಅವತಾದಲ್ಲಿ ಕಾಣಿಸಿಕೊಳ್ಳುತ್ತಿರುವ ʼವೆಟ್ಟೈಯನ್ʼ ನಿರೀಕ್ಷೆ ಹೆಚ್ಚಿಸಿದೆ. ಪಾತ್ರವರ್ಗದ ಮೂಲಕ ಸದ್ದು ಮಾಡಿದ್ದ ಸಿನಿಮಾ ಇದೀಗ ಟ್ರೇಲರ್ ಮೂಲಕ ಕುತೂಹಲ ಹೆಚ್ಚಾಗಿಸಿದೆ.
ಟ್ರೇಲರ್‌ನಲ್ಲಿ ಏನಿದೆ?:
ಒಂದು ಊರಿನಲ್ಲಿ ಅನ್ಯಾಯ ನಡೆಯುತ್ತಿರುತ್ತದೆ. ಹೆಣ್ಣು ಮಕ್ಕಳು ನಮಗೆ ಇಲ್ಲಿ ಸುರಕ್ಷತೆ ಇಲ್ಲವೆಂದು ಬೀದಿ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಟ್ಟ ವ್ಯಕ್ತಿಗಳನ್ನು ಎನ್ ಕೌಂಟರ್ ಮಾಡಬೇಕೆಂದು ಹೆಣ್ಣ ಮಗಳು ಧ್ವನಿಗೂಡಿಸಿದ್ದಾಳೆ. ಇದೇ ಸಮಯದಲ್ಲಿ ಅಲ್ಲೊಂದು ಹೆಣ್ಣನ್ನು ಭೀಕರವಾಗಿ ಅತ್ಯಾಚಾರವೆಸಗಿ ಹ*ತ್ಯೆ ಮಾಡಿರುತ್ತಾರೆ.
ಪೊಲೀಸ್ ಇಲಾಖೆ ಮೇಲೆ ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕೆನ್ನುವ ಒತ್ತಡ ಕೇಳಿ ಬರುತ್ತದೆ. ಎನ್ ಕೌಂಟರ್ ಮಾಡಲು ಬರುವ ಸ್ಪೆಷೆಲ್ ಅಧಿಕಾರಿಯಾಗಿ ಇಲ್ಲಿ ರಜಿನಿ ಎಂಟ್ರಿ ಆಗುತ್ತಾರೆ. ಎನ್ ಕೌಂಟರ್ ಮಾಡಲು ಹೋಗುವ ರಜಿನಿಗೆ ಕೃತ್ಯದ ಹಿಂದೆ ಕಾಣದ ಕೈಗಳು ಇರುವುದು ಗೊತ್ತಾಗುತ್ತದೆ. ಇದೇ ಅಂಶವನ್ನು ಇಟ್ಟುಕೊಂಡು ಟ್ರೇಲರ್ ನ್ನು ಕುತೂಹಲ ಹುಟ್ಟುವಂತೆ ತೋರಿಸಲಾಗಿದೆ.
ಸರ್ಕಾರಿ ಅಧಿಕಾರಿಯಾಗಿ ಅಮಿತಾಭ್ ಬಚ್ಚನ್ (Amitabh Bachchan) ಅವರು ಇಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ನ್ಯಾಯಾಧೀಶರಂತೆ ಕಾಣುತ್ತದೆ.ಇನ್ನು ರಾಣಾ ದಗ್ಗುಬಾಟಿ (Rana Daggubati) ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಫಾಹದ್ ಫಾಸಿಲ್ (Fahadh Faasil) ಅವರ ಪಾತ್ರ ಗಮನ ಸೆಳೆದಿದ್ದು, ಕುತೂಹಲಕಾರಿ ಆಗಿ ಮೂಡಿಬಂದಿದೆ.
ರಜಿನಿ ಇಲ್ಲಿ ಪೊಲೀಸ್ ಅಧಿಕಾರಿಯಾಗಿ, ಮಾಸ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಇದೊಂದು ಮಾಫಿಯಾ ಸುತ್ತ ಸಾಗುವ ಕಥೆ ಎನ್ನುವುದು ಟ್ರೇಲರ್ ನೋಡಿದಾಗ ಮೇಲ್ನೊಟಕ್ಕೆ ಗೊತ್ತಾಗುತ್ತದೆ.
ಟಿ.ಜೆ. ಜ್ಞಾನವೇಲ್ (T.J. Gnanavel) ನಿರ್ದೇಶನದ ʼವೆಟ್ಟೈಯನ್ʼ ಇದೇ ಅಕ್ಟೋಬರ್ 10ರಂದು ರಿಲೀಸ್ ಆಗಲಿದೆ. ಸಿನಿಮಾಕ್ಕೆ ಸೆನ್ಸಾರ್ ಬೋರ್ಡ್‌ನಿಂದ ʼಯುಎʼ ಸರ್ಟಿಫಿಕೇಟ್ ಸಿಕ್ಕಿದೆ.
ರಜಿನಿಕಾಂತ್, ಅಮಿತಾಬ್ ಬಚ್ಚನ್, ಫಾಹದ್ ಫಾಸಿಲ್, ರಾಣಾ ದಗ್ಗುಬಾಟಿ ಜತೆ ಸಿನಿಮಾದಲ್ಲಿ ಮಂಜು ವಾರಿಯರ್, ಕಿಶೋರ್, ರಿತಿಕಾ ಸಿಂಗ್, ದುಷಾರ ವಿಜಯನ್, ಜಿಎಂ ಸುಂದರ್, ಅಭಿರಾಮಿ, ರೋಹಿಣಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.