ವಿಜಯ್ ನನ್ನ ಕಣ್ಣ ಮುಂದೆ ಬೆಳೆದ ಹುಡುಗ, ನಾನು ಆತನ ಪ್ರತಿಸ್ಪರ್ಧಿ ಅಲ್ಲ: Rajinikanth


Team Udayavani, Jan 27, 2024, 12:34 PM IST

ವಿಜಯ್ ನನ್ನ ಕಣ್ಣ ಮುಂದೆ ಬೆಳೆದ ಹುಡುಗ, ನಾನು ಆತನ ಪ್ರತಿಸ್ಪರ್ಧಿ ಅಲ್ಲ: Rajinikanth

ಚೆನ್ನೈ: ಕಾಲಿವುಡ್‌ ನಲ್ಲಿ ಸೂಪರ್ಸ್ಟಾರ್ರಜಿನಿಕಾಂತ್ಹಾಗೂ ದಳಪತಿ ಇಬ್ಬರ ಅಭಿಮಾನಿ ವಲಯ ದೊಡ್ಡದಿದೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ ವಾರ್‌ಗಳು ನಡೆಯುತ್ತಿರುತ್ತವೆ. ಈ ವಿಚಾರದ ಬಗ್ಗೆ ʼತಲೈವಾʼ ಮಾತಾನಾಡಿದ್ದಾರೆ.

ರಜಿನಿಕಾಂತ್‌ ಅವರ ಪುತ್ರಿ ಐಶ್ವರ್ಯಾ ನಿರ್ದೇಶನದ ʼಲಾಲ್‌ ಸಲಾಂʼ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ಶುಕ್ರವಾರ(ಜ.26 ರಂದು) ಚೆನ್ನೈನಲ್ಲಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ರಜಿನಿಕಾಂತ್‌ ಮಾತನಾಡಿದ್ದಾರೆ.

ರಜಿನಿಕಾಂತ್‌ ಹಾಗೂ ದಳಪತಿ ವಿಜಯ್‌ ಅವರ ಅಭಿಮಾನಿಗಳಲ್ಲಿ ಆಗಾಗ ಕೆಲವೊಂದು ವಿಚಾರಗಳಿಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿರುತ್ತವೆ. ʼಜೈಲರ್‌ʼ ಆಡಿಯೋ ಸಮಾರಂಭದಲ್ಲಿ ರಜಿನಿಕಾಂತ್ ‘ಕಾಗೆ-ಹದ್ದು’ ಕಥೆಯೊಂದನ್ನು ಹೇಳಿದ್ದರು. ಇದನ್ನು ಬೇಕಂತಲೇ ರಜಿನಿಕಾಂತ್‌ ವಿಜಯ್‌ ಅವರಿಗೆಯೇ ಹೇಳಿದ್ದಾರೆ ಎಂದು ಕೆಲ ಫ್ಯಾನ್ಸ್‌ ಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾಡಿದ್ದರು. 

ಇದನ್ನೂ ಓದಿ: Lal Salaam: “ನನ್ನ ತಂದೆ ಸಂಘಿಯಲ್ಲ..” ಮಗಳ ಮಾತು ಕೇಳಿ ಭಾವುಕರಾದ ರಜಿನಿಕಾಂತ್

ಇದೀಗ ಈ ಬಗ್ಗೆ ರಜಿನಿಕಾಂತ್‌ ಮಾತನಾಡಿದ್ದಾರೆ. “ನಾನು ಹೇಳಿದ ಕಾಗೆ ಮತ್ತು ಹದ್ದಿನ ಕಥೆಯನ್ನು ವಿಭಿನ್ನವಾಗಿ ವ್ಯಾಖ್ಯಾನಿಸಲಾಗಿದೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ. ವಿಜಯ್‌ ನನ್ನ ಕಣ್ಣ ಮುಂದೆ ಬೆಳೆದ ಹುಡುಗ. ‘ಧರ್ಮತಿನ್ ತಲೈವನ್’ ಚಿತ್ರೀಕರಣದ ಸಮಯದಲ್ಲಿ, ವಿಜಯ್ 13 ವರ್ಷ ವಯಸ್ಸಿನವರಾಗಿದ್ದರು. ಶೂಟಿಂಗ್ ಮುಗಿದ ನಂತರ ಎಸ್.ಎ.ಚಂದ್ರಶೇಖರ್ ಅವರು ನನಗೆ ವಿಜಯ್ ನನ್ನು ಪರಿಚಯಿಸಿದರು. ಅವರು ನಟನೆಯಲ್ಲಿ ಆಸಕ್ತಿ ಹೊಂದಿದ್ದರು ಎಂದು ಹೇಳಿದರು. ವಿಜಯ್‌ ನನ್ನು ಮೊದಲು ಓದುವ ಕಡೆ ಗಮನ ಕೊಡಲು ಹೇಳು ಎಂದು ಅವರು ನನ್ನ ಬಳಿ ಹೇಳಿದರು. ಅವನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ನಾನು ಅವನಿಗೆ ಸಲಹೆ ನೀಡಿದ್ದೆ” ಎಂದು ಅಂದಿನ ದಿನಗಳ ಬಗ್ಗೆ ಹೇಳಿದರು.

“ಆ ಬಳಿಕ ವಿಜಯ್‌ ನಟನಾದ. ಇಂದು ಆತ ಉನ್ನತಮಟ್ಟದಲ್ಲಿದ್ದಾನೆ. ಅದಕ್ಕೆ ಕಾರಣ ಆತನ ಶಿಸ್ತು,ಪರಿಶ್ರಮ ಹಾಗೂ ಪ್ರತಿಭೆ. ಮುಂದೆ ಆತ ರಾಜಕೀಯಕ್ಕೆ ಬರಲಿದ್ದಾನೆ. ನಮ್ಮ ನಡುವೆ ಪೈಪೋಟಿ ಇದೆ ಎಂದು ಹೇಳುತ್ತಾರೆ, ಆದರೆ ನಾನು ನನ್ನದೇ ಸ್ಪರ್ಧಿಯೆಂದು ವಿಜಯ್‌ ಹೇಳುತ್ತಾರೆ. ನಾನು ಕೂಡ ಅದನ್ನೇ ಹೇಳುತ್ತೇನೆ. ನಾವು ಪರಸ್ಪರರ  ಪ್ರತಿಸ್ಪರ್ಧಿ ಎಂದು ಹೇಳುವುದು ಅಗೌರವ. ನಮ್ಮ ಅಭಿಮಾನಿಗಳಲ್ಲಿ ನಾನು ಮನವಿ ಮಾಡುತ್ತೇನೆ ದಯವಿಟ್ಟು ನಮ್ಮ‌ ನಡುವೆ ಹೋಲಿಕೆ ಮಾಡಬೇಡಿ” ಎಂದು ಹೇಳಿದ್ದಾರೆ.

ರಜಿನಿಕಾಂತ್‌ ಸದ್ಯ ʼಲಾಲ್ ಸಲಾಂʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಆ ಬಳಿಕ ಟಿಜೆ ಜ್ಞಾನವೇಲ್‌ ಅವರ ʼವೆಟ್ಟಯ್ಯನ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಬಳಿಕ ಲೋಕೇಶ್ ಕನಕರಾಜ್ ಅವರ ‘ತಲೈವರ್ 171’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯ್ ವೆಂಕಟ್ ಪ್ರಭು ಅವರ ‘ಗೋಟ್’ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ.

 

ಟಾಪ್ ನ್ಯೂಸ್

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anushka shetty’s upcoming movie Ghaati first look

Ghaati: ಸ್ವೀಟಿ ಅಲ್ಲ ಘಾಟಿ; ಫ‌ಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ

ಜೀವನ ಪರ್ಯಂತ ವೀಲ್‌ ಚೇರ್‌ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ

ಜೀವನ ಪರ್ಯಂತ ವೀಲ್‌ ಚೇರ್‌ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ

ʼಅಮರನ್‌’ ಫೋನ್‌ ನಂಬರ್‌ ಸೀನ್; ಸಾಯಿಪಲ್ಲವಿ ನಂಬರ್‌ ಎಂದು ವಿದ್ಯಾರ್ಥಿಗೆ ನೂರಾರು ಕಾಲ್

ʼಅಮರನ್‌’ ಫೋನ್‌ ನಂಬರ್‌ ಸೀನ್; ಸಾಯಿಪಲ್ಲವಿ ನಂಬರ್‌ ಎಂದು ವಿದ್ಯಾರ್ಥಿಗೆ ನೂರಾರು ಕಾಲ್ಸ್

Kamal Haasan: ʼಥಗ್‌ ಲೈಫ್‌ʼ ರಿಲೀಸ್‌ ಡೇಟ್‌ ಅನೌನ್ಸ್; ಬರ್ತ್‌ ಡೇಗೆ ಟೀಸರ್‌ ಗಿಫ್ಟ್

Kamal Haasan: ʼಥಗ್‌ ಲೈಫ್‌ʼ ರಿಲೀಸ್‌ ಡೇಟ್‌ ಅನೌನ್ಸ್; ಬರ್ತ್‌ ಡೇಗೆ ಟೀಸರ್‌ ಗಿಫ್ಟ್

12

Nivin Pauly: ಲೈಂಗಿಕ ದೌರ್ಜನ್ಯ ಪ್ರಕರಣ; ʼಪ್ರೇಮಂʼ ನಟ ನಿವಿನ್‌ ಪೌಲಿಗೆ ಕ್ಲೀನ್‌ ಚಿಟ್  

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.