Tollywood: ರಾಮ್‌ಚರಣ್ ʼಗೇಮ್ ಚೇಂಜರ್ʼ ಓಟಿಟಿ ರೈಟ್ಸ್ 105 ಕೋಟಿ ರೂ.ಗೆ ಸೇಲ್- ವರದಿ
Team Udayavani, Mar 21, 2024, 4:54 PM IST
ಹೈದರಾಬಾದ್: ರಾಮ್ ಚರಣ್ ಅವರ ʼಗೇಮ್ ಚೇಂಜರ್ʼ ಸಿನಿಮಾ ಟಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಸಟ್ಟೇರಿದ ದಿನದಿಂದ ಇದುವರೆಗೂ ಒಂದಲ್ಲ ಒಂದು ಕಾರಣದಿಂದ ಸದ್ದು ಮಾಡುತ್ತಿದೆ.
ಶಂಕರ್ – ರಾಮ್ ಚರಣ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದಾಗಿರುವುದರಿಂದ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.
ಇತ್ತೀಚೆಗೆ ಸಿನಿಮಾ ರಿಲೀಸ್ ಗೂ ಮುನ್ನ ಓಟಿಟಿ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗುತ್ತಿದೆ. ಅದರಂತೆ ಅಮೇಜಾನ್ ಪ್ರೈಮ್ ʼಕಾಂತಾರ -1ʼ ಸಿನಿಮಾದ ಓಟಿಟಿ ರೈಟ್ಸ್ ನ್ನು ಪಡೆದುಕೊಂಡಿದೆ. ಇದರೊಂದಿಗೆ ವೆಬ್ ಸಿರೀಸ್ ಗಳ ಹೊಸ ಸೀಸನ್ ಗಳನ್ನು ಹಾಗೂ ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡಿದೆ.
ಇದನ್ನೂ ಓದಿ: SSE-Side B: ಓಟಿಟಿಯಲ್ಲಿ ಸಿಗುತ್ತಿಲ್ಲ ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್ -ಬಿʼ; ಕಾರಣವೇನು?
ʼಗೇಮ್ ಚೇಂಜರ್ʼ ಸಿನಿಮಾದ ಓಟಿಟಿ ರೈಟ್ಸ್ ನ್ನು ಅಮೇಜಾನ್ ಪ್ರೈಮ್ ಖರೀದಿಸಿದೆ. ಚಿತ್ರದ ದಕ್ಷಿಣ ಭಾಷೆಯ ಆವೃತ್ತಿಯ ಓಟಿಟಿ ರೈಟ್ಸ್ ನ್ನು 105 ಕೋಟಿ ರೂ.ಗೆ ಖರೀದಿಸಿದೆ ಎಂದು ವರದಿಯಾಗಿದೆ. ತೆಲುಗು ಚಿತ್ರರಂಗದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಆಗಿದೆ. Zee5 ಚಿತ್ರದ ಹಿಂದಿ OTT ಹಕ್ಕುಗಳನ್ನು ಖರೀದಿಸಬಹುದೆಂದು ಹೇಳಲಾಗಿದೆ.
ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ರಾಜಕೀಯ ಥ್ರಿಲ್ಲರ್ ಸಿನಿಮಾವಾಗಿದ್ದು, ಕಾರ್ತಿಕ್ ಸುಬ್ಬರಾಜ್ ಚಿತ್ರದ ಕಥೆ ಬರೆದಿದ್ದಾರೆ. ರಾಮ್ ಚರಣ್ ಐಎಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಕಿಯಾರಾ ಅಡ್ವಾಣಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ದಿಲ್ ರಾಜು ಮತ್ತು ಸಿರೀಶ್ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಎಸ್‌ಎಸ್ ಥಮನ್ ಸಿನಿಮಾಕ್ಕೆ ಮ್ಯೂಸಿಕ್ ನೀಡಿದ್ದಾರೆ.
ಅಂಜಲಿ, ಸಮುದ್ರಕಣಿ, ಎಸ್‌ಜೆ ಸೂರ್ಯ, ಶ್ರೀಕಾಂತ್, ಸುನೀಲ್, ನವೀನ್ ಚಂದ್ರ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ತೆರೆಗೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.