![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Mar 20, 2024, 3:22 PM IST
ಹೈದರಾಬಾದ್: ರಾಮ್ ಚರಣ್ ವೃತ್ತಿ ಬದುಕಿಗೆ ತಿರುವು ಕೊಟ್ಟ ಸೂಪರ್ ಹಿಟ್ ʼಮಗಧೀರʼ ಸಿನಿಮಾ ಮತ್ತೊಮ್ಮೆ ಥಿಯೇಟರ್ ನಲ್ಲಿ ರಿಲೀಸ್ ಆಗಲು ಸಿದ್ದವಾಗಿದೆ.
ಇತ್ತೀಚೆಗೆ ಒಂದು ಕಾಲದಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳನ್ನು ಎಷ್ಟೋ ವರ್ಷದ ಬಳಿಕ ನಟರ ಹುಟ್ಟುಹಬ್ಬ ಅಥವಾ ವಿಶೇಷ ದಿನದಂದು ರೀ ರಿಲೀಸ್ ಮಾಡುವ ಟ್ರೆಂಡ್ ಚಿತ್ರರಂಗದಲ್ಲಿ ಶುರುವಾಗಿದೆ.
ಪ್ರೇಮಿಗಳ ದಿನದಂದು ʼಪ್ರೇಮಂʼ ಸಿನಿಮಾವನ್ನು ರೀ – ರಿಲೀಸ್ ಮಾಡಲಾಗಿತ್ತು. ಇದರೊಂದಿಗೆ ʼ96ʼ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿತ್ತು. ಇದೀಗ ಈ ಸಾಲಿಗೆ ರಾಮ್ ಚರಣ್ ಅವರ ʼಮಗಧೀರʼ ಸಿನಿಮಾ ಕೂಡ ಸೇರಿದೆ.
ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ 2009 ರಲ್ಲಿ ಬಂದ ʼಮಗಧೀರʼ ಸಿನಿಮಾ ಅಂದಿನ ಕಾಲದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ತೆಲುಗು ಸಿನಿಮಾವಾಗಿ ಹೊರಹೊಮ್ಮಿತ್ತು.
ಇದೇ ಮಾರ್ಚ್ 27 ರಂದು ರಾಮ್ ಚರಣ್ ಅವರ ಹುಟ್ಟುಹಬ್ಬವಿದೆ. ಈ ಸಂದರ್ಭದಲ್ಲಿ ಮಾ.26 ರಂದು ʼಮಗಧೀರʼ ಸಿನಿಮಾ ರೀ ರಿಲೀಸ್ ಆಗಲಿದೆ. ತೆಲಂಗಾಣ ಮತ್ತು ಆಂಧ್ರದಲ್ಲಿ ಸಿನಿಮಾ ಥಿಯೇಟರ್ ಗೆ ಬರಲಿದೆ.
ʼಮಗಧೀರʼ ಚಿತ್ರದಲ್ಲಿ ರಾಮ್ ಚರಣ್, ಕಾಜಲ್ ಅಗರ್ವಾಲ್ ಶ್ರೀಹರಿ, ದೇವ್ ಗಿಲ್, ಸುನಿಲ್ ಮುಂತಾದವರು ನಟಿಸಿದ್ದಾರೆ. ಎಂಎಂ ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ.
ಇದರೊಂದಿಗೆ ಅವರ ಹುಟ್ಟುಹಬ್ಬದಂದು ʼಗೇಮ್ ಚೇಂಜರ್ʼ ಚಿತ್ರದ ಮೊದಲ ಹಾಡು ರಿಲೀಸ್ ಆಗುವ ಸಾಧ್ಯತೆಯಿದೆ.
You seem to have an Ad Blocker on.
To continue reading, please turn it off or whitelist Udayavani.