ಪೋಸ್ಟರ್ ರಿಲೀಸ್ ಮಾಡಿ ʼಶ್ರೀವಲ್ಲಿʼ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ʼPushpa 2ʼ ತಂಡ
ʼದಿ ಗರ್ಲ್ ಫ್ರೆಂಡ್ʼ ಹೊಸ ಪೋಸ್ಟರ್ ರಿಲೀಸ್
Team Udayavani, Apr 5, 2024, 12:11 PM IST
ಹೈದರಾಬಾದ್: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಂದು 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬ ಆಚರಿಸಲು ಅವರು ವಿದೇಶಕ್ಕೆ ತೆರಳಿದ್ದಾರೆ.
ರಶ್ಮಿಕಾ ಸಾಲು ಸಾಲು ಸೌತ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅವರ ಬಾಲಿವುಡ್ ʼಅನಿಮಲ್ʼ ಸಿನಿಮಾ ದೊಡ್ಡ ಹಿಟ್ ಆಗಿದೆ. ಇದೀಗ ಅವರು ಬಹು ನಿರೀಕ್ಷಿತ ʼಪುಷ್ಪ-2ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಹುಟ್ಟುಹಬ್ಬದಂದು ಅವರ ಮುಂದಿನ ಸಿನಿಮಾದ ಹೊಸ ಪೋಸ್ಟರ್ ಗಳನ್ನು ರಿಲೀಸ್ ಮಾಡಲಾಗಿದೆ. ಅಲ್ಲು ಅರ್ಜುನ್ ಅವರ ʼಪುಷ್ಪ-2ʼ ಚಿತ್ರತಂಡ ನಟಿ ರಶ್ಮಿಕಾ ಅವರ ಶ್ರೀವಲ್ಲಿ ಪಾತ್ರದ ಪೋಸ್ಟರ್ ನ್ನು ರಿಲೀಸ್ ಮಾಡಿದ್ದಾರೆ.
ಹಸಿರು ಸೀರೆ ಉಟ್ಟುಕೊಂಡು, ಆಭರಣ ತೊಟ್ಟಿರುವ ಚೆಲುವೆಯಾಗಿ ರಶ್ಮಿಕಾ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನೊಂದೆಡೆ ಅವರ ಮತ್ತೊಂದು ಸಿನಿಮಾ ʼದಿ ಗರ್ಲ್ ಫ್ರೆಂಡ್ʼ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನ್ನು ರಿಲೀಸ್ ಮಾಡಲಾಗಿದೆ. ಹೆಗಲ ಮೇಲೆ ಬ್ಯಾಗ್ ಹಾಕಿಕೊಂಡು ಕಾಲೇಜಿನ ಕಾರಿಡಾರ್ ನಿಂದ ನಡೆದುಕೊಂಡು ಬರುತ್ತಿರುವ ರಶ್ಮಿಕಾ ಈ ಪೋಸ್ಟರ್ ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಹೊಸ ಪೋಸ್ಟರ್ ಮೂಲಕ ನ್ಯಾಷನಲ್ ಕ್ರಶ್ ರಶ್ಮಿಕಾ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಲಾಗಿದೆ.
ಈ ಸಿನಿಮಾವನ್ನು ರಾಹುಲ್ ರವೀಂದ್ರನ್ ಅವರು ನಿರ್ದೇಶನ ಮಾಡಲಿದ್ದಾರೆ. ಪ್ಯಾನ್ ಇಂಡಿಯಾ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.
Wishing the 𝒏𝒂𝒕𝒊𝒐𝒏’𝒔 𝒉𝒆𝒂𝒓𝒕𝒕𝒉𝒓𝒐𝒃 ‘Srivalli’ aka @iamRashmika a very Happy Birthday 🫰🏻#Pushpa2TheRuleTeaser on April 8th 🔥#PushpaMassJaathara 💥#Pushpa2TheRule Grand Release Worldwide on 15th AUG 2024.
Icon Star @alluarjun @aryasukku #FahadhFaasil… pic.twitter.com/AnsbEXZqJT
— Pushpa (@PushpaMovie) April 5, 2024
Her eyes smile before she does. And they speak the words that she won’t 🫰🏻❤️
Introducing #TheGirlfriend 🫰🏻😍
Wishing the National crush, the ever joyous & cheerful @iamRashmika a very Happy Birthday ✨@Dheekshiths @23_rahulr @GeethaArts #AlluAravind @SKNOnline… pic.twitter.com/fmoPiQj1AZ
— Mass Movie Makers (@MassMovieMakers) April 5, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.