ನಿರ್ದೇಶಕನ ಮನೆಯಲ್ಲಿ ಹಣ,ಚಿನ್ನ ದರೋಡೆಗೈದು ರಾಷ್ಟ್ರ ಪ್ರಶಸ್ತಿ ಪದಕ ಹಿಂತಿರುಗಿಸಿದ ಕಳ್ಳರು
ನಿರ್ದೇಶಕನ ಮನೆಯಲ್ಲಿ ಹಣ,ಚಿನ್ನ ದರೋಡೆಗೈದು ರಾಷ್ಟ್ರ ಪ್ರಶಸ್ತಿ ಪದಕ ಹಿಂತಿರುಗಿಸಿದ ಕಳ್ಳರು
Team Udayavani, Feb 13, 2024, 2:46 PM IST
ಚೆನ್ನೈ: ‘ಕಡೈಸಿ ವಿವಸಾಯಿ’ ಮತ್ತು ‘ಕಾಕ ಮುಟೈ’ ಸಿನಿಮಾದ ನಿರ್ದೇಶಕ ಮಣಿಕಂಠನ್ ಅವರ ಮಧುರೈ ನಿವಾಸದಲ್ಲಿ ಕಳ್ಳತನ ನಡೆದಿರುವ ಘಟನೆ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ಕೆಲ ದಿನಗಳ ಹಿಂದೆ ಅವರ ಮಧುರೈನ ಉಸಿಲಂಪಟ್ಟಿ ನಿವಾಸದಲ್ಲಿ ಕಳ್ಳತನ ನಡೆದಿದೆ. ನಿವಾಸಕ್ಕೆ ನುಗ್ಗಿದ ಕಳ್ಳರ ಗುಂಪು ಚಿನ್ನಾಭರಣ ಮತ್ತು ಇತರ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ.
15 ಪವನ್ ಚಿನ್ನಾಭರಣ, 1 ಲಕ್ಷ ರೂಪಾಯಿ ನಗದು ಸೇರಿದಂತೆ ಇತರೆ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಕುರಿತು ಮಣಿಕಂಠನ್ ಅವರು ಉಸಿಲಂಪಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ದೂರು ದಾಖಲಿಸಿದ್ದ ಒಂದು ದಿನದ ಬಳಿಕ ಕಳ್ಳತನ ಆದ ಮನೆಯ ಕಂಪೌಂಡ್ ನಲ್ಲಿ ಪ್ಲ್ಯಾಸ್ಟಿಕ್ ಚೀಲವೊಂದರಲ್ಲಿ ಕದ್ದುಕೊಂಡು ಹೋಗಿದ್ದ ಅವರ ರಾಷ್ಟ್ರ ಪ್ರಶಸ್ತಿಯ ಪದಕಗಳೊಂದಿಗೆ ಕ್ಷಮಾಪಣಾ ಪತ್ರವನ್ನು ಇಡಲಾಗಿತ್ತು.
“ಸರ್, ದಯವಿಟ್ಟು ನಮ್ಮನ್ನು ಕ್ಷಮಿಸಿ, [ನಾವು] ನಿಮ್ಮ ಶ್ರಮದ ವೇತನವನ್ನು ಹಿಂತಿರುಗಿಸುತ್ತಿದ್ದೇವೆ” ಎಂದು ಪತ್ರದಲ್ಲಿ ಬರೆದಿತ್ತು. ಇದನ್ನು ನೋಡಿದ ಮಣಿಕಂಠನ್ ಅವರ ಕುಟುಂಬ ಶಾಕ್ ಆಗಿದೆ.
ಚಿನ್ನಾಭರಣ ಮತ್ತು ನಗದು ಇನ್ನೂ ನಾಪತ್ತೆಯಾಗಿದೆ. ಸದ್ಯ ಪೊಲೀಸ್ ತನಿಖೆ ನಡೆಯುತ್ತಿದೆ.
ಮಣಿಕಂದನ್ ಮತ್ತು ಅವರ ಕುಟುಂಬ ಸದಸ್ಯರು ಪ್ರಸ್ತುತ ಚೆನ್ನೈನಲ್ಲಿ ನೆಲೆಸಿದ್ದಾರೆ. ಅವರ ಮುದ್ದಿನ ಸಾಕು ನಾಯಿ ಉಸಿಲಂಪಟ್ಟಿ ನಿವಾಸದಲ್ಲಿದ್ದು, ನಾಯಿಗೆ ಪ್ರತಿದಿನ ಅವರ ಇಬ್ಬರು ಸ್ನೇಹಿತರು ಆಹಾರ ನೀಡುತ್ತಾರೆ. ಆಹಾರದ ಸಮಯದಲ್ಲಿ, ಅವರ ಸ್ನೇಹಿತರು ಮನೆಯ ಬಾಗಿಲು ತೆರೆದಿರುವುದನ್ನು ನೋಡಿದಾದ ದರೋಡೆ ಆಗಿರುವ ಘಟನೆ ಬೆಳಕಿಗೆ ಬಂದಿದೆ.
‘ಕಾಕ ಮುಟೈ’ ಮೂಲಕ ಮಿಂಚಿದ ಮಣಿಕಂಠನ್ ‘ಕಡೈಸಿ ವಿವಸಾಯಿ’ ಸಿನಿಮಾಕ್ಕಾಗಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.