ʼಸಲಾರ್ʼ ʼಉಗ್ರಂʼ ಸಿನಿಮಾದ ರಿಮೇಕ್..? ಸ್ಪಷ್ಟನೆ ಕೊಟ್ಟು ಮೌನ ಮುರಿದ ಪ್ರಶಾಂತ್ ನೀಲ್
Team Udayavani, Dec 21, 2023, 5:04 PM IST
ಹೈದರಾಬಾದ್: ʼಸಲಾರ್ʼ ಸಿನಿಮಾ ಶುಕ್ರವಾರ(ಡಿ.22 ರಂದು) ವರ್ಲ್ಡ್ ವೈಡ್ ರಿಲೀಸ್ ಆಗಲಿದೆ. ಅಡ್ವಾನ್ಸ್ ಟಿಕೆಟ್ ಬುಕಿಂಗ್ ನಿಂದಲೇ ಸಿನಿಮಾ ಕೋಟಿ ಬ್ಯುಸಿನೆಸ್ ಮಾಡಿದೆ. ಸಾವಿರಾರು ಮಂದಿ ʼಸಲಾರ್ʼ ನ್ನು ಬಿಗ್ ಸ್ಕ್ರೀನ್ ನಲ್ಲಿ ನೋಡಲು ಕಾಯುತ್ತಿದ್ದಾರೆ.
ಹೊಂಬಾಳೆ ಫಿಲ್ಮ್ಸ್ 400 ಕೋಟಿ ಬಜೆಟ್ ಸಿನಿಮಾವನ್ನು ನಿರ್ಮಾಣ ಮಾಡಿದೆ. ʼಸಲಾರ್ʼ ಸಟ್ಟೇರಿದ ದಿನದಿಂದ ಸುದ್ದಿಯಲ್ಲಿದೆ. ಪ್ರಶಾಂತ್ ನೀಲ್ ಅವರ ಮೊದಲ ಸಿನಿಮಾ ʼಉಗ್ರಂʼ ಸಿನಿಮಾವನ್ನು ʼಸಲಾರ್ʼ ಆಗಿ ರಿಮೇಕ್ ಮಾಡಿದ್ದಾರೆ. ʼಕೆಜಿಎಫ್ʼ ನಂತೆಯೇ ಇದೆ ಎಂದು ಕೆಲವರು ಸಿನಿಮಾದ ಬಗ್ಗೆ ಮಾತನಾಡಿದ್ದರು.
ʼಸಲಾರ್ʼ ʼಕೆಜಿಎಫ್ʼ ನಂತೆ ಡಾರ್ಕ್ ಥೀಮ್ ನಲ್ಲಿ ಯಾಕಿದೆ ಎನ್ನುವ ಪ್ರಶ್ನೆಗೆ ಸಂದರ್ಶನವೊಂದರಲ್ಲಿ ನೀಲ್ ಉತ್ತರಿಸಿದ್ದರು. “ಸಲಾರ್ ಕೆಜಿಎಫ್ ನಂತೆ ಡಾರ್ಕ್ ಥೀಮ್ ನಂತೆ ಕಾಣುತ್ತದೆ ಏಕೆಂದರೆ, ನನಗೆ ಒಸಿಡಿ ಇದೆ (ಗೀಳು ಮನೋರೋಗ -ಒಸಿಡಿ -ಒಬ್ಸೆಸಿವ್ ಕಂಪಲ್ಶನ್ ಡಿಸಾರ್ಡರ್) ಹೆಚ್ಚು ಬಣ್ಣಗಳಿರುವ ಯಾವುದನ್ನೂ ನಾನು ಹೆಚ್ಚು ಇಷ್ಟಪಡುವುದಿಲ್ಲ. ಇದು ನನ್ನ ವ್ಯಕ್ತಿತ್ವದ ಪ್ರತಿಬಿಂಬವಾಗಿದ್ದು ತೆರೆಯ ಮೇಲೆ ಬರುತ್ತದೆ” ಎಂದು ಹೇಳಿದ್ದರು.
ʼಉಗ್ರಂʼ ರಿಮೇಕ್ ಸಿನಿಮಾನೇ ʼಸಲಾರ್ʼ ಎನ್ನುವ ಮಾತಿಗೆ ಸಂದರ್ಶನದಲ್ಲಿ ಸ್ವತಃ ಪ್ರಶಾಂತ್ ನೀಲ್ ಅವರು ಉತ್ತರಿಸಿದ್ದಾರೆ.
“ನಾನು ʼಉಗ್ರಂʼ ಸಿನಿಮಾವನ್ನು ಥಿಯೇಟರ್ ಗಾಗಿ ಮಾಡಿದ್ದು, ಸಿನಿಮಾ ಹಾಲ್ ಗಾಗಿ ಆ ಸಿನಿಮಾವನ್ನು ಮಾಡಿದ್ದು. ನಾನು ಒಂದು ದೃಢ ನಿರ್ಧಾರ ಮಾಡಿದ್ದೆ, ಥಿಯೇಟರ್ ಭರ್ತಿಯಾಗಬೇಕೆಂದು. ಇದು ʼಕೆಜಿಎಫ್ʼ ನಿಂದ ಸಾಧ್ಯವಾಯಿತು. ʼಕೆಜಿಎಫ್ʼ ಸಿನಿಮಾ ನೋಡಲು ಜನ ಹರಿದು ಬಂದರು. ಆ ಸಬ್ಜೆಕ್ಟ್ ನ್ನು (ಉಗ್ರಂ) ಜಗತ್ತು ನೋಡಿಲ್ಲ. ಆ ಸಿನಿಮಾ ನೋಡಲು ಜನರು ಹೆಚ್ಚು ಬಂದಿಲ್ಲ ಅಂಥ ನನಗೆ ಅನ್ನಿಸಿತು. ನಾನು ಸಿನಿಮಾವನ್ನು (ಸಲಾರ್) ನ್ನು ಮಾಡಬೇಕೆಂದು ಅಂದುಕೊಂಡು ಮುಂದೆ ಬಂದೆ. ಇದನ್ನು ʼಉಗ್ರಂʼ ರಿಮೇಕ್ ಹೇಳುವ ಬದಲು ಇದನ್ನು ಸ್ಟೋರಿ ರೀ ಟೇಲಿಂಗ್ ಎನ್ನಬೇಕು. ( ಸ್ಟೋರಿ ರೀ ಟೇಲಿಂಗ್) ನಾನು ಸಿನಿಮಾ ಹಾಲ್ ನ್ನು ಭರ್ತಿ ಮಾಡಬೇಕು. ಅದನ್ನು ಡಿ.22 ರಂದು ಮಾಡುತ್ತಿದ್ದೇನೆ. ಏನೇ ಹೇಳಿದರೂ ʼಉಗ್ರಂʼ ನಾನು ಮಾಡಿರುವ ಸಿನಿಮಾ. ಆ ನಿರ್ದಿಷ್ಟ ಚಿತ್ರಕ್ಕಾಗಿ ಥಿಯೇಟರ್‌ಗಳನ್ನು ತುಂಬಿಸುವ ನನ್ನ ಆಳವಾದ ಮಹತ್ವಾಕಾಂಕ್ಷೆಗಳಲ್ಲಿ ಒಂದನ್ನು ಪೂರೈಸಲು ನಾನು ಬಯಸುತ್ತೇನೆ ಮತ್ತು ಅದುವೇ ಸಲಾರ್” ಎಂದು ಹೇಳಿದ್ದಾರೆ.
“ನಾನು ಬಹಳಷ್ಟು ವಿಷಯಗಳನ್ನು ಬದಲಾಯಿಸಿದ್ದೇನೆ. ನನ್ನ ಸ್ಕಿಲ್ ಅಂದಿನಿಂದ ಸುಧಾರಿಸಿದೆ. ಡ್ರಾಮಾದ ಬಗ್ಗೆ ನನ್ನ ತಿಳುವಳಿಕೆಯು ಅಂದಿನಿಂದ ಇಂದಿನವರೆಗೆ ಸುಧಾರಿಸಿದೆ. ನಾನು ಉಗ್ರಂ ಮತ್ತು ಕೆಜಿಎಫ್ ನ್ನು ಮೀರಿ ಬೇರೆ ಏನನ್ನು ಮಾಡಲು ಆಗುವುದಿಲ್ಲ ಎಂದು ಜನ ಭಾವಿಸಿದರೆ ನಾನು ಅದರ ಬಗ್ಗೆ ಕೇರ್ ಮಾಡಲ್ಲ. ನಾನು ʼಸಲಾರ್ʼ ನ್ನು ನನ್ನಗಾಗಿ ಮಾಡುತ್ತಿದ್ದೇನೆ. ಪ್ರಭಾಸ್ ಸರ್ ಮತ್ತು ಪೃಥ್ವಿ ಸರ್ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ. ʼಉಗ್ರಂʼ, ʼಕೆಜಿಎಫ್ʼ ಗಿಂತ ಉತ್ತಮವಾಗಿದೆ ಅಥವಾ ಕಳಪೆಯಾಗಿದ್ದರೂ ನಾನು ಕಥೆಯನ್ನು ಹೇಳುತ್ತೇನೆ. ಸಿನಿಮಾ ಹಾಲ್ ಗೆ ಜನ ಬರುವಂತೆ ಮಾಡುತ್ತೇನೆ” ಎಂದು ಹೇಳಿದ್ದಾರೆ.
ಸಿನಿಮಾದಲ್ಲಿ ಪ್ರಭಾಸ್ ಜೊತೆ ಶ್ರುತಿ ಹಾಸನ್, ಜಗಪತಿ ಬಾಬು, ಟಿನ್ನು ಆನಂದ್, ಬಾಬಿ ಸಿಂಹ, ಈಶ್ವರಿ ರಾವ್, ಶ್ರೀಯಾ ರೆಡ್ಡಿ, ಮೈಮ್ ಗೋಪಿ, ಜಾನ್ ವಿಜಯ್ ಮತ್ತು ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.