Samantha Ruth Prabhu: ನನ್ನ ಸೆಕೆಂಡ್ ಹ್ಯಾಂಡ್ ಅಂದ್ರು!: ಸಮಂತಾ ದುಃಖದ ಮಾತು
Team Udayavani, Nov 27, 2024, 10:41 AM IST
ಕೆಲ ಸಿನಿ ತಾರೆಯರು ತೆರೆಯ ಮೇಲೆ ಚೆನ್ನಾಗಿಯೇ ರಂಜಿಸಿದರೂ, ಒಮ್ಮೊಮ್ಮೆ ಅವರ ವೈಯಕ್ತಿಕ ಜೀವನ ಅನೇಕ ಏರಿಳಿತ, ಕಹಿ ಘಟನೆಗಳಿಂದ ಕೂಡಿರುತ್ತದೆ. ಸದ್ಯ ನಟಿ ಸಮಂತಾ ಅವರದ್ದು ಇದೇ ವ್ಯಥೆಯಾಗಿದೆ.
ನಟ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ನಟಿ ಸಮಂತಾ ಸಾಕಷ್ಟು ದುಃಖಕ್ಕೆ ಒಳಗಾಗಿ, ಮಾನಸಿಕವಾಗಿ ಅನೇಕ ನೋವು ಅನುಭವಿಸಿದ್ದಾರಂತೆ. ಈ ಕುರಿತು ಸ್ವತಃ ಸಮಂತಾ ಅವರೇ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ದುಃಖದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.
“ವಿಚ್ಛೇದನೆ ಪಡೆದ ಬಳಿಕ ಜನ ನನ್ನನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ನನ್ನನ್ನು “ಸೆಕೆಂಡ್ ಹ್ಯಾಂಡ್’, “ಯೂಸ್ಡ್’, “ವೇಸ್ಟೆಡ್ ಲೈಫ್’ ಎಂದೆಲ್ಲಾ ಕೆಲವರು ನಿಂದಿಸಿದ್ದಾರೆ. ಆರಂಭದಲ್ಲಿ ಇದು ಮನಸ್ಸಿಗೆ ಬಹಳ ನೋವನ್ನುಂಟು ಮಾಡಿತ್ತು. ವಿಚ್ಛೇದನ ಆದ ಬಳಿಕ ನಾನು ಮೂಲೆಯಲ್ಲಿ ಕುಳಿತು ಅಳುತ್ತಾ, ಕೊರಗುವವಳಲ್ಲ. ವಿಚ್ಛೇದನ ಆಗಿದೆ, ಇದರಲ್ಲಿ ಮರೆಮಾಚುವುದು ಏನೂ ಇಲ್ಲ. ಇದು ನನ್ನ ಜೀವನದ ಅಂತ್ಯವಲ್ಲ. ಎಲ್ಲಿ ಅಂತ್ಯವಾಗುತ್ತೋ ಅಲ್ಲಿ ಹೊಸ ಆರಂಭ ಇದ್ದೇ ಇರುತ್ತದೆ. ನಾನು ಒಳ್ಳೆಯ ಜನರೊಂದಿಗೆ ಉತ್ತಮ ಕೆಲಸ ಮಾಡುತ್ತಿದ್ದೇನೆ. ಜೀವನದ ಇನ್ನೊಂದು ಘಟ್ಟವನ್ನು ಎದುರು ನೋಡುತ್ತಿದ್ದೇನೆ’ ಎಂದು ತಮ್ಮ ಜೀವನದ ಬಗ್ಗೆ ಮಾತನಾಡಿದ್ದಾರೆ ನಟಿ ಸಮಂತಾ.
ಸಮಂತಾ ಹಾಗೂ ನಾಗ ಚೈತನ್ಯ ಅವರು 2010ರಲ್ಲಿ ಭೇಟಿಯಾಗಿ ನಂತರ ಕೆಲ ವರ್ಷ ಡೇಟಿಂಗ್ ನಡೆಸಿದ್ದರು. 2017ರಲ್ಲಿ ಮದುವೆಯಾದ ಈ ಜೋಡಿ, 2021ರಲ್ಲಿ ಹಲವು ಭಿನ್ನಾಭಿಪ್ರಾಯಗಳ ಕಾರಣ ವಿಚ್ಛೇದನೆ ಪಡೆದುಕೊಂಡಿತ್ತು. ಸದ್ಯ ನಾಗ್ ಚೈತನ್ಯ ನಟಿ ಶೋಭಿತಾ ದುಲಿಪಾಲ್ ಅವರನ್ನು ವಿವಾಹವಾಗುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Keerthy Suresh: ಮದುವೆ ಸುದ್ದಿ ಬೆನ್ನಲ್ಲೇ ಆಂಟೋನಿ ಜತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್
Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್ ಟೈಮ್ ಎಷ್ಟು?
Pushpa 2: ಕಿಸಿಕ್ ಎಂದು ಕುಣಿದ ಶ್ರೀಲೀಲಾ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.