![Kollywood: ಬರ್ತ್ ಡೇಗೆ ʼಮದರಾಸಿʼಯಾಗಿ ಮಾಸ್ ಅವತಾರದಲ್ಲಿ ಮಿಂಚಿದ ಶಿವಕಾರ್ತಿಕೇಯನ್](https://www.udayavani.com/wp-content/uploads/2025/02/7-20-415x249.jpg)
![Kollywood: ಬರ್ತ್ ಡೇಗೆ ʼಮದರಾಸಿʼಯಾಗಿ ಮಾಸ್ ಅವತಾರದಲ್ಲಿ ಮಿಂಚಿದ ಶಿವಕಾರ್ತಿಕೇಯನ್](https://www.udayavani.com/wp-content/uploads/2025/02/7-20-415x249.jpg)
Team Udayavani, Jan 29, 2025, 11:59 AM IST
ಮುಂಬಯಿ: ಬಾಲಿವುಡ್‌ನ ಕಿಂಗ್ ಖಾನ್ ನಟ ಶಾರುಖ್ ಖಾನ್ (Shah Rukh Khan) ʼಡಂಕಿʼ ಬಳಿಕ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ತಯಾರಿ ಜೋರಾಗಿ ನಡೆಯುತ್ತಿದೆ.
ʼಪಠಾಣ್ʼ, ʼಜವಾನ್ʼ ಹಾಗೂ ʼಡಂಕಿʼ ಮೂಲಕ ಹ್ಯಾಟ್ರಿಕ್ ಹಿಟ್ ಕೊಟ್ಟು ಕಂಬ್ಯಾಕ್ ಮಾಡಿರುವ ಶಾರುಖ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸೌತ್ ನಟರಿಗೆ ಕೊಟ್ಟಿರುವ ಸಲಹೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಶಾರುಖ್ ಖಾನ್ ಸೌತ್ ನಟರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಅತ್ಯಂತ ಪ್ರೀತಿಯಿಂದಲೇ ಸೌತ್ ಕಲಾವಿದರನ್ನು ಶಾರುಖ್ ಮಾತನಾಡಿಸುತ್ತಾರೆ.
ಇತ್ತೀಚೆಗೆ ಶಾರುಖ್ ಖಾನ್ ದುಬೈನ ಗ್ಲೋಬಲ್ ವಿಲೇಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಇವೆಂಟ್‌ನಲ್ಲಿ ದಕ್ಷಿಣ ಸೂಪರ ಸ್ಟಾರ್ ನಟರಿಗೆ ಶಾರುಖ್ ಖಾನ್ ಒಂದು ಸಲಹೆ ಕೊಟ್ಟಿದ್ದಾರೆ. ಅವರು ಆಡಿರುವ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಲ್ಲಿಗೆ ದಕ್ಷಿಣ ಭಾರತದಿಂದ ಬಂದವರು ಎಷ್ಟು ಮಂದಿ ಇದ್ದಾರೆ. ನನಗೆ ತೆಲಂಗಾಣ, ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿ ತುಂಬಾ ಜನ ಸ್ನೇಹಿತರಿದ್ದಾರೆ. ಅಲ್ಲು ಅರ್ಜುನ್, ಪ್ರಭಾಸ್, ರಾಮ್ ಚರಣ್, ಯಶ್, ಮಹೇಶ್ ಬಾಬು, ದಳಪತಿ ವಿಜಯ್, ರಜನಿಕಾಂತ್, ಕಮಲ್ ಹಾಸನ್ ಎಲ್ಲರೂ ನನ್ನ ಸ್ನೇಹಿತರು. ಅವರಲ್ಲಿ ನನ್ನದೊಂದು ಮನವಿ ಇದೆ. ಅಷ್ಟು ವೇಗವಾಗಿ ಡ್ಯಾನ್ಸ್ ಮಾಡಬಾರದು. ನನಗೆ ಅವರೊಂದಿಗೆ ಪೈಪೋಟಿ ಮಾಡುವುದಕ್ಕೆ ಬಹಳ ಕಷ್ಟ ಆಗುತ್ತದೆ” ಎಂದು ಶಾರುಖ್ ಸಲಹೆ ಕೊಟ್ಟಿದ್ದಾರೆ.
Shah Rukh Khan said “Allu Arjun, Mahesh Babu, Prabhas, Ram Charan, Thalapathy Vijay, Yash, Rajinikanth sir, Kamal Haasan sir are my close friends from South India” 🫶 @iamsrk pic.twitter.com/cMoYfkzqjW
— sohom (@AwaaraHoon) January 28, 2025
ಯಶ್ ಅವರ ಜತೆ ಶಾರುಖ್ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಈ ಹಿಂದೆ ಶಾರುಖ್ ಅವರು ಯಶ್ ಅವರ ʼಟಾಕ್ಸಿಕ್ʼ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರವನ್ನು ಮಾಡಲಿದ್ದಾರೆ ಎನ್ನಲಾಗಿತ್ತು. ಶಾರುಖ್ ಅವರು ʼಟಾಕ್ಸಿಕ್ʼ ಸಿನಿಮಾವನ್ನು ನೋಡಬೇಕೆಂದು ಈ ಹಿಂದೆ ಅಭಿಪ್ರಾಯ ಹಂಚಿಕೊಂಡಿದ್ದರು.
ಮುಂದೆ ಶಾರುಖ್ ಖಾನ್ ʼಕಿಂಗ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Kollywood: ಬರ್ತ್ ಡೇಗೆ ʼಮದರಾಸಿʼಯಾಗಿ ಮಾಸ್ ಅವತಾರದಲ್ಲಿ ಮಿಂಚಿದ ಶಿವಕಾರ್ತಿಕೇಯನ್
Remark Sparks: ನಾನು ಹೈದರಾಬಾದಿನವಳು ಎಂದ ರಶ್ಮಿಕಾಗೆ ನೆಟ್ಟಿಗರ ಕ್ಲಾಸ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ
Kannappa Movie: ಶಿವ ಶಿವ ಎಂದ ʼಕಣ್ಣಪ್ಪʼ
Kaup: ಇದು 118 ಸ್ತಂಭಗಳ ಬೃಹತ್ ದೇಗುಲ!
Kollywood: ಬರ್ತ್ ಡೇಗೆ ʼಮದರಾಸಿʼಯಾಗಿ ಮಾಸ್ ಅವತಾರದಲ್ಲಿ ಮಿಂಚಿದ ಶಿವಕಾರ್ತಿಕೇಯನ್
Davanagere: 115 ರೂ. ಕೇಳಿದ್ದಕ್ಕೆ ಬೇಕರಿ ಮಾಲೀಕನಿಗೆ ಚಾಕುವಿನಿಂದ ಇರಿದ ವ್ಯಕ್ತಿ
Sullia: ಯಕ್ಷಗಾನಕ್ಕೆ ರಾಜ್ಯದ ಕಲೆ ಸ್ಥಾನಮಾನ ಘೋಷಣೆ ಮಾಡಬೇಕು
Mahakumbh Mela-No Traffic jam;ಯುವಕರ ಸಾಹಸಯಾತ್ರೆ-ಗಂಗಾನದಿ ಮೂಲಕ ಕುಂಭಮೇಳಕ್ಕೆ ಆಗಮನ!
You seem to have an Ad Blocker on.
To continue reading, please turn it off or whitelist Udayavani.