

Team Udayavani, Feb 6, 2024, 4:02 PM IST
ಮುಂಬಯಿ: ಶಾರುಖ್ ಖಾನ್ – ಯಶ್ ಇಬ್ಬರು ಜೊತೆಯಾಗಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವರದಿಯೊಂದು ಕಳೆದ ಕೆಲ ದಿನಗಳ ಹಿಂದೆ ಹರಿದಾಡಿತ್ತು. ಈ ಸಂಬಂಧ ಇದೀಗ ಮತ್ತೊಂದು ಮಾತು ಸಿನಿವಲಯದಲ್ಲಿ ಹರಿದಾಡುತ್ತಿದೆ.
ʼಪಠಾಣ್ʼ, ʼಜವಾನ್ʼ ಹಾಗೂ ʼಡಂಕಿʼ ಸಿನಿಮಾದ ಮೂಲಕ ಶಾರುಖ್ ಖಾನ್ ಬಿಟೌನ್ ನಲ್ಲಿ ಮತ್ತೆ ರಾರಾಜಿಸಿದ್ದಾರೆ. ಅವರ ಮುಂದಿನ ಸಿನಿಮಾ ಯಾವುದೆನ್ನುವ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇತ್ತೀಚೆಗೆ ನಟ ಯಶ್ ಹಾಗೂ ಶಾರುಖ್ ಖಾನ್ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.
ಕಿಂಗ್ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡಲು ಯಶ್ ತಮ್ಮ ಆಸಕ್ತಿಯ ಬಗ್ಗೆ ಮಾತನಾಡಿದ್ದಾರೆ. ಸ್ಕ್ರಿಪ್ಟ್ ಪರಿಪೂರ್ಣವಾಗಿರಬೇಕು ಎನ್ನುವ ಷರತ್ತನ್ನು ಹಾಕಿದ್ದಾರೆ ಎಂದು ಮೂಲವೊಂದು ತಿಳಿಸಿರುವುದಾಗಿ ʼಹಿಂದೂಸ್ತಾನ್ ಟೈಮ್ಸ್ʼ ವರದಿ ಮಾಡಿತ್ತು.
ಯಶ್ ಹಾಗೂ ಶಾರುಖ್ ಖಾನ್ ಜೊತೆಯಾಗಿ ನಟಿಸಲು ಒಪ್ಪಿದ್ದಾರೆ. ಆದರೆ ತಮ್ಮಅಪಾರ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಸಿನಿಮಾವಿರಬೇಕು. ಹಾಗಾಗಿ ಇಬ್ಬರು ಈ ಬಗ್ಗೆ ಆತುರದ ನಿರ್ಧಾರವನ್ನು ಕೈಗೊಳ್ಳದೆ ನಿಧಾನವಾಗಿ ಯೋಚಿಸಲಿದ್ದಾರೆ. ಇದು ಉತ್ಸಾಹದಿಂದ ಮಾಡಲಾದ ಯೋಜನೆಗಿಂತ ಉತ್ತಮವಾಗಿ ರೂಪಿಸಲ್ಪಟ್ಟ ಯೋಜನೆಯಾಗಬೇಕೆಂದು ಇಬ್ಬರು ಬಯಸುತ್ತಾರೆ ಎಂದು ಮೂಲವೊಂದು ಹೇಳಿರುವುದಾಗಿ ವರದಿ ತಿಳಿಸಿತ್ತು.
ಈ ಮಾತು ಚರ್ಚೆಯಲ್ಲಿರುವಾಗಲೇ ಇದೀಗ ಶಾರುಖ್ ಖಾನ್ ಅವರು ಯಶ್ ಅವರ ಬಹು ನಿರೀಕ್ಷಿತ ʼಟಾಕ್ಸಿಕ್ʼ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾತೊಂದು ಹರಿದಾಡಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ʼಟಾಕ್ಸಿಕ್ʼ ಸಿನಿಮಾದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಶಾರುಖ್ ಖಾನ್ ಶೀಘ್ರದಲ್ಲಿ ತನ್ನ ನಿರ್ಧಾರವನ್ನು ತಿಳಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಮೂರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಬಳಿಕ ಶಾರುಖ್ ಖಾನ್ ಅವರ ಬೇಡಿಕೆ ಹೆಚ್ಚಾಗಿದೆ. ರಾಜ್ ಮತ್ತು ಡಿಕೆ, ಫರಾ ಖಾನ್, ಕಬೀರ್ ಖಾನ್ ಮತ್ತು ಸಿದ್ಧಾರ್ಥ್ ಆನಂದ್.. ಹೀಗೆ ನಾನಾ ನಿರ್ದೇಶಕರು ಶಾರುಖ್ ಅವರಿಗೆ ಆಫರ್ ನೀಡಿದ್ದಾರೆ. ಇದುವರೆಗೆ ಶಾರುಖ್ ತನ್ನ ಮುಂದಿನ ಪ್ರಾಜೆಕ್ಟ್ ಕುರಿತು ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಮೂಲಗಳ ಪ್ರಕಾರ ಶಾರುಖ್ ಸುಜೋಯ್ ಘೋಷ್ ಅವರ ಸಿನಿಮಾದಲ್ಲಿ ತನ್ನ ಮಗಳು ಸುಹಾನಾ ಅವರ ಜೊತೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಶಾರುಖ್ ನಟಿಸಲು ಆಫರ್ ಬರುವುದು ಇದೇ ಮೊದಲಲ್ಲ, ಲೋಕೇಶ್ ಕನಕರಾಜ್ – ರಜಿನಿಕಾಂತ್ ಅವರ ಸಿನಿಮಾದಲ್ಲಿ ನಟಿಸಲು ಶಾರುಖ್ ಅವರ ಜೊತೆ ಮಾತುಕತೆ ನಡೆದಿತ್ತು.
ತೆಲುಗು ಗೊತ್ತಿಲ್ಲದ ನಾಯಕಿಯರನ್ನು ಬೆಂಬಲಿಸುತ್ತೇವೆ – ವಿವಾದ ಎಬ್ಬಿಸಿದ ನಿರ್ಮಾಪಕನ ಹೇಳಿಕೆ
Tollywood: ಅಲ್ಲು ಅರ್ಜುನ್ಗೆ ಅಟ್ಲಿ ಆ್ಯಕ್ಷನ್ ಕಟ್: ಶ್ರೀದೇವಿ ಪುತ್ರಿ ನಾಯಕಿ?
Tollywood: ರಾತ್ರೋರಾತ್ರಿ ಖ್ಯಾತ ಟಾಲಿವುಡ್ ನಟ ಪೊಲೀಸ್ ವಶಕ್ಕೆ
Rashmika Mandanna: ರಶ್ಮಿಕಾ ಮುಟ್ಟಿದ್ದೆಲ್ಲ ಚಿನ್ನ; ಹ್ಯಾಟ್ರಿಕ್ ಹಿಟ್ ಕಂಡ ಶ್ರೀವಲ್ಲಿ
Kollywood: ಬರ್ತ್ ಡೇಗೆ ʼಮದರಾಸಿʼಯಾಗಿ ಮಾಸ್ ಅವತಾರದಲ್ಲಿ ಮಿಂಚಿದ ಶಿವಕಾರ್ತಿಕೇಯನ್
Udupi: ಗೀತಾರ್ಥ ಚಿಂತನೆ-191: “ಡಿಸಿಶನ್ ಮೇಕರ್ ನೀನಲ್ಲ’ ಎಂಬ ಶ್ರೀಕೃಷ್ಣ
Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
You seem to have an Ad Blocker on.
To continue reading, please turn it off or whitelist Udayavani.