Captain Miller Movie: ಕ್ಯಾಪ್ಟನ್ ಮಿಲ್ಲರ್ ಹಾಡಿಗೆ ಶಿವಣ್ಣ ಹೆಜ್ಜೆ
Team Udayavani, Jan 7, 2024, 1:30 PM IST
ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಡಬಲ್ ಮಾಡೋದಿಕ್ಕೆ ಬರುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು “ಕ್ಯಾಪ್ಟನ್ ಮಿಲ್ಲರ್’.
ಕನ್ನಡಿಗರು ಕೂಡ ಕಾತುರದ ಕಣ್ಣುಗಳಿಂದ ಈ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ತಮಿಳು ನಟ ಧನುಷ್ ನಾಯಕನಾಗಿ ನಟಿಸಿರುವ “ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಕನ್ನಡದ ನಟ ಶಿವರಾಜಕುಮಾರ್ ಕೂಡ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಎರಡು ಹಾಡುಗಳ ಮೂಲಕ ಗಮನ ಸೆಳೆದಿರುವ “ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಮೂರನೇ ಹಾಡು ಇತ್ತೀಚೆಗೆಗಷ್ಟೇ ಬಿಡುಗಡೆಯಾಗಿದೆ. ಇನ್ನು ಬಹು ಭಾಷೆಯಲ್ಲಿ ಈ ಹಾಡು ರಿಲೀಸ್ ಆಗಿದ್ದು, ಕನ್ನಡದಲ್ಲಿ ಪ್ರಮೋದ್ ಜೋಯಿಸ್ “ಕ್ಯಾಪ್ಟನ್ ಮಿಲ್ಲರ್’ ಹಾಡಿಗೆ ಸಾಹಿತ್ಯ ಬರೆದಿದ್ದು, ದರ್ಶನ್ ನಾರಾಯಣ್ ಹಾಗೂ ಶೆಂಬಾಗರಾಜ್ ಧನುಶ್ ಧ್ವನಿಯಾಗಿದ್ದಾರೆ.
ಜಿ. ವಿ. ಪ್ರಕಾಶ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ “ಈರಪ್ಪನು…’ ಎಂಬ ಸಾಹಿತ್ಯದ ಈ ಹಾಡಿಗೆ ನಟರಾದ ಶಿವರಾಜಕುಮಾರ್ ಮತ್ತು ಧನುಶ್ ಜೋಡಿಯಾಗಿ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದ್ದಾರೆ.
“ಕ್ಯಾಪ್ಟನ್ ಮಿಲ್ಲರ್’ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ತಮಿಳು, ತೆಲುಗು, ಕನ್ನಡ, ಹಿಂದಿ ಹೀಗೆ ಎಲ್ಲ ಭಾಷೆಗಳಲ್ಲೂ ಸಿನಿಮಾ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ಸಿನಿಮಾವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಧನುಷ್ ಜೋಡಿಯಾಗಿ ಪ್ರಿಯಾಂಕಾ ಮೋಹನನ್ ನಟಿಸಿದ್ದಾರೆ.
ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತೆರೆದುಕೊಳ್ಳುವ ಕಥೆ ಎಂದು ಹೇಳಲಾಗುತ್ತಿದೆ. ನಾಯಕ ನಟ ಧನುಷ್ ಉದ್ದ ಕೂದಲು, ಗಡ್ಡ ಮೀಸೆ ಬಿಟ್ಟು ವಿಭಿನ್ನವಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ನಟ ಶಿವರಾಜಕುಮಾರ್ ಕೂಡ ಮತ್ತೂಂದು ವಿಭಿನ್ನ ಗೆಟಪ್‌ನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈಗಾಗಲೇ “ಕ್ಯಾಪ್ಟನ್ ಮಿಲ್ಲರ್’ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ “ಯು/ಎ’ ಸರ್ಟಿಫಿಕೇಟ್ ಸಿಕ್ಕಿದ್ದು, ಸಿನಿಮಾ ಇದೇ ಜನವರಿ 12ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Amaran: ರಿಲೀಸ್ ಆದ ಮೂರೇ ದಿನದಲ್ಲಿ ʼಅಮರನ್ʼ ಸಿನಿಮಾದ ಹೆಚ್‌ಡಿ ಪ್ರಿಂಟ್ ಲೀಕ್
Chennai ಪುಸ್ತಕ ಮಾರುವ ನೆಪದಲ್ಲಿ ಖ್ಯಾತ ನಟಿಯ ಕೈಯಲ್ಲಿದ್ದ ಹಣ ಕಸಿದು ಪರಾರಿಯಾದ 8ರ ಬಾಲಕ
Devara OTT Release: ʼದೇವರʼ ಓಟಿಟಿ ಎಂಟ್ರಿಗೆ ಡೇಟ್ ಫಿಕ್ಸ್? ಈ ದಿನವೇ ರಿಲೀಸ್?
Actress Sreeleela: ಮೆಗಾ ಕುಟುಂಬದ ಸೊಸೆಯಾಗಲಿದ್ದಾರಾ ಕನ್ನಡದ ಶ್ರೀಲೀಲಾ? ಏನಿದು ಸುದ್ದಿ?
MUST WATCH
ಹೊಸ ಸೇರ್ಪಡೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.