SK25: ಶಿವಕಾರ್ತಿಕೇಯನ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸುಧಾ ಕೊಂಗರ
Team Udayavani, Jul 24, 2024, 7:11 PM IST
ಚೆನ್ನೈ: ಕಾಲಿವುಡ್ ನಟ ಶಿವಕಾರ್ತಿಕೇಯನ್ (Sivakarthikeyan) ʼಅಮರನ್ʼ (Amaran) ಮೂಲಕ ಮೋಡಿ ಮಾಡಲು ಸಜ್ಜಾಗಿದ್ದಾರೆ. ಇದೇ ವರ್ಷ ಸಿನಿಮಾ ತೆರೆಗೆ ಬರಲಿದ್ದು, ಅವರ ಅಭಿಮಾನಿಗಳು ಚಿತ್ರವನ್ನು ನೋಡಲು ಕಾಯುತ್ತಿದ್ದಾರೆ.
ನಟ ಶಿವಕಾರ್ತಿಕೇಯನ್ ಅವರ 25ನೇ ಸಿನಿಮಾದ ಬಗ್ಗೆ ದೊಡ್ಡ ಅಪ್ಡೇಟ್ ವೊಂದು ಹೊರಬಿದ್ದಿದೆ. ʼಸೂರರೈ ಪೊಟ್ರುʼ ಸಿನಿಮಾದ ನಿರ್ದೇಶಕಿ ಸುಧಾ ಕೊಂಗರ (Sudha Kongara) ಶಿವಕಾರ್ತಿಕೇಯನ್ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಕಾಲಿವುಡ್ ನಲ್ಲಿ ಹರಿದಾಡಿದೆ.
ಮೂಲಗಳ ಪ್ರಕಾರ ಸುಧಾ ಅವರು ಈ ಸಿನಿಮಾವನ್ನು ಸೂರ್ಯ (Actor Suriya) ಅವರೊಂದಿಗಿನ ಸಿನಿಮಾವನ್ನು ಮಾಡಿದ ಬಳಿಕ ಶಿವಕಾರ್ತಿಕೇಯನ್ ಅವರ ಪ್ರಾಜೆಕ್ಟ್ ಕೈಹಾಕಲಿದ್ದಾರೆ ಎನ್ನಲಾಗಿದೆ.
ಆದರೆ ಸೂರ್ಯ ಅಭಿನಯದ ʼಪುರಾಣನೂರುʼ ಕಾರಣಾಂತರಗಳಿಂದ ಮುಂದೂಡಿಕೆ ಆಗಿದೆ ಎನ್ನಲಾಗಿದ್ದು, ಸುಧಾ ಆ ಪ್ರಾಜೆಕ್ಟ್ ಬದಿಗಿಟ್ಟು ಶಿವಕಾರ್ತಿಕೇಯನ್ ಅಥವಾ ಧನುಷ್ ಅವರೊಂದಿಗೆ ಹೊಸ ಸಿನಿಮಾವನ್ನು ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಕೆಲ ಮೂಲಗಳ ಪ್ರಕಾರ ಸೂರ್ಯ ಅವರು ನಟಿಸಬೇಕಿದ್ದ ಚಿತ್ರದಲ್ಲೇ ಅವರ ಬದಲಿಗೆ ಶಿವಕಾರ್ತಿಕೇಯನ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಇತ್ತೀಚೆಗೆ ಸುಧಾ ಅಕ್ಷಯ್ ಕುಮಾರ್ ಅವರೊಂದಿಗೆ ʼಸರ್ಫಿರಾʼ ಸಿನಿಮಾವನ್ನು ಮಾಡಿದ್ದರು. ಇದು ಸುಧಾ ಅವರ ʼಸೂರರೈ ಪೊಟ್ರುʼ ಸಿನಿಮಾದ ರಿಮೇಕ್ ಆಗಿತ್ತು. ಆದರೆ ಬಾಕ್ಸ್ ಆಫೀಸ್ ನಲ್ಲಿ ಅಷ್ಟಾಗಿ ಸದ್ದು ಮಾಡಿಲ್ಲ.
ಶಿವಕಾರ್ತಿಕೇಯನ್ ಸದ್ಯ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಅವರ ʼಅಮರನ್ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಶಿವ ಆರೂರ್ ಮತ್ತು ರಾಹುಲ್ ಸಿಂಗ್ ಅವರ ʼಇಂಡಿಯಾಸ್ ಮೋಸ್ಟ್ ಫಿಯರ್ ಲೆಸ್: ಟ್ರೂ ಸ್ಟೋರೀಸ್ ಆಫ್ ಮಾಡರ್ನ್ ಮಿಲಿಟರಿʼ ಎಂಬ ಪುಸ್ತಕವನ್ನು ಆಧರಿಸಿದೆ. ಹುತಾತ್ಮ ಭಾರತೀಯ ಸೇನಾ ಮೇಜರ್ ಮುಕುಂದ್ ವರದರಾಜನ್ ಅವರ ಜೀವನಗಾಥೆಯನ್ನು ಒಳಗೊಂಡಿದೆ.
ಅಕ್ಟೋಬರ್ 31ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಇದಲ್ಲದೆ ಶಿವಕಾರ್ತಿಕೇಯನ್ ಎಆರ್ ಮುರುಗದಾಸ್ ಅವರ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ತಾತ್ಕಾಲಿಕವಾಗಿ ʼಎಸ್ ಕೆ23ʼ ಎಂದು ಟೈಟಲ್ ಇಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Video: ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ
MUST WATCH
ಹೊಸ ಸೇರ್ಪಡೆ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.