Sreeleela; ಬ್ರೇಕ್ ಕೆ ಬಾದ್ ಎಂಟ್ರಿ… ರವಿತೇಜ ಚಿತ್ರದಲ್ಲಿ ಶ್ರೀಲೀಲಾ
Team Udayavani, Jun 1, 2024, 2:23 PM IST
“ಕಿಸ್’ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಬಿಝಿ ನಟಿಯಾಗಿರೋದು ನಿಮಗೆ ಗೊತ್ತೇ ಇದೆ. ಅದರಲ್ಲೂ “ಗುಂಟೂರು ಖಾರಂ’ ಸಿನಿಮಾದ ಬಳಿಕ ಶ್ರೀಲೀಲಾ ಬೇಡಿಕೆ ಕೂಡಾ ಹೆಚ್ಚಾಗಿದೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗದೇ ಹೋದರೂ ಶ್ರೀಲೀಲಾ ಡ್ಯಾನ್ಸ್, ಅವರ ಬೋಲ್ಡ್ ಸ್ಟೆಪ್ಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದರಿಂದ ಬರುವ ಆಫರ್‌ಗಳು ಕೂಡಾ ಹೆಚ್ಚಾಗಿವೆ. ಆದರೆ, ಶ್ರೀಲೀಲಾ ಮಾತ್ರ ಈಗ ಚೂಸಿಯಾಗಿದ್ದಾರೆ. ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದೇ ಅಳೆದು ತೂಗಿ ಒಪ್ಪಿಕೊಳ್ಳುತ್ತಿದ್ದಾರೆ.
ಅಂದಹಾಗೆ, ಇತ್ತೀಚೆಗೆ ಬಿಡುಗಡೆಯಾಗಿರುವ “ಟ್ವಿಲ್ಲು ಸ್ಕ್ವೇರ್’ ಸಿನಿಮಾದಿಂದಲೂ ಶ್ರೀಲೀಲಾಗೆ ಬಂದಿತ್ತಂತೆ. ಆದರೆ, ಸಿಕ್ಕಾಪಟ್ಟೆ ರೊಮ್ಯಾಂಟಿಕ್ ದೃಶ್ಯಗಳಿರುವುದರಿಂದ ಶ್ರೀಲೀಲಾ ಅದನ್ನು ಒಪ್ಪಿಕೊಂಡಿಲ್ಲ. ಸ್ವಲ್ಪ ದಿನ ಬ್ರೇಕ್ ಪಡೆದಿದ್ದ ಶ್ರೀಲೀಲಾ ಈಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅದು ರವಿತೇಜ ನಟನೆಯ ಹೊಸ ಸಿನಿಮಾ ಎನ್ನಲಾಗಿದೆ. ಈಗಾಗಲೇ ಶ್ರೀಲೀಲಾ “ಧಮಾಕಾ’ ಸಿನಿಮಾದಲ್ಲಿ ರವಿತೇಜ ಜೊತೆ ನಟಿಸಿದ್ದಾರೆ.
ಇನ್ನು ಶ್ರೀಲೀಲಾ ಅವರದ್ದು ಅತ್ಯಂತ ಸುಶಿಕ್ಷಿತ ಕುಟುಂಬ. ಶ್ರೀಲೀಲಾ ಅವರ ತಂದೆ ಉದ್ಯಮಿಯಾದರೆ, ತಾಯಿ ವೃತ್ತಿಯಲ್ಲಿ ವೈದ್ಯೆ (ಗೈನೋಕಾಲಜಿಸ್ಟ್). ಇನ್ನು ವಿದೇಶದಲ್ಲಿರುವ ಇಬ್ಬರು ಅಣ್ಣಂದಿರಲ್ಲಿ ಒಬ್ಬರು ವೈದ್ಯಕೀಯ ವೃತ್ತಿಯಲ್ಲಿ ಮತ್ತೂಬ್ಬರು ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಶ್ರೀಲೀಲಾ ಕೂಡ ಮೆಡಿಕಲ್ ಶಿಕ್ಷಣವನ್ನು ಪಡೆಯುತ್ತಿದ್ದು, ಡಾಕ್ಟರ್ ಆಗುವ ಮೊದಲೇ ಸಿಕ್ಕ ಅವಕಾಶ ಅವರನ್ನು ಆ್ಯಕ್ಟರ್ ಆಗಿ ಮಾಡಿದೆ. ಸದ್ಯ ಶ್ರೀಲೀಲಾ ಎಂಬಿಬಿಎಸ್ ಪರೀಕ್ಷೆ ಬರೆಯುವಲ್ಲಿ ಬಿಝಿಯಾಗಿದ್ದರಿಂದ ಸಿನಿಮಾದಿಂದ ಬ್ರೆಕ್ ಪಡೆದಿದ್ದರು ಎನ್ನಲಾಗಿದೆ. “ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿದ್ದು, ಪವನ್ ಕಲ್ಯಾಣ್ ಈ ಸಿನಿಮಾದ ನಾಯಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amaran: ರಿಲೀಸ್ ಆದ ಮೂರೇ ದಿನದಲ್ಲಿ ʼಅಮರನ್ʼ ಸಿನಿಮಾದ ಹೆಚ್‌ಡಿ ಪ್ರಿಂಟ್ ಲೀಕ್
Chennai ಪುಸ್ತಕ ಮಾರುವ ನೆಪದಲ್ಲಿ ಖ್ಯಾತ ನಟಿಯ ಕೈಯಲ್ಲಿದ್ದ ಹಣ ಕಸಿದು ಪರಾರಿಯಾದ 8ರ ಬಾಲಕ
Devara OTT Release: ʼದೇವರʼ ಓಟಿಟಿ ಎಂಟ್ರಿಗೆ ಡೇಟ್ ಫಿಕ್ಸ್? ಈ ದಿನವೇ ರಿಲೀಸ್?
Actress Sreeleela: ಮೆಗಾ ಕುಟುಂಬದ ಸೊಸೆಯಾಗಲಿದ್ದಾರಾ ಕನ್ನಡದ ಶ್ರೀಲೀಲಾ? ಏನಿದು ಸುದ್ದಿ?
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.