Video: ರಾಮ್‌ಚರಣ್‌ಗೆ ʼಇಡ್ಲಿ ವಡಾʼ ಎಂದಿದ್ದಕ್ಕೆ ಶಾರುಖ್ ಮೇಲೆ ಗರಂ ಆದ ಫ್ಯಾನ್ಸ್
Team Udayavani, Mar 5, 2024, 12:22 PM IST
ಹೈದರಾಬಾದ್: ಜಾಮ್ ನಗರದಲ್ಲಿ ಅಂಬಾನಿ ಪುತ್ರ ಅನಂತ್ ಅವರ ಪ್ರೀ ವೆಡ್ಡಿಂಗ್ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಈ ಸಮಾರಂಭದಲ್ಲಿ ದೇಶ – ವಿದೇಶದ ಖ್ಯಾತ ಸೆಲೆಬ್ರಿಟಿಗಳು ಭಾಗಿಯಾಗಿ ಸಾಂಸ್ಕೃತಿಕ ಸಂಜೆಗೆ ಮೆರುಗು ನೀಡಿದ್ದಾರೆ.
ಇಡೀ ಸಮಾರಂಭದಲ್ಲಿ ಸದ್ದು ಮಾಡಿದ್ದು ಪಾಪ್ ಗಾಯಕಿ ರಿಹಾನಾ ಅವರ ಕಾರ್ಯಕ್ರಮ ಹಾಗೂ ಬಿಟೌನ್ ಖಾನ್ ಗಳ ʼನಾಟು ನಾಟುʼ ನೃತ್ಯ. ʼನಾಟು ನಾಟುʼ ಹಾಡಿಗೆ ಶಾರುಖ್ ಖಾನ್, ಸಲ್ಮಾನ್ ಹಾಗೂ ಆಮಿರ್ ಖಾನ್ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಶಾರುಖ್ ಖಾನ್ ರಾಮ್ ಚರಣ್ ಅವರನ್ನು ವೇದಿಕೆಗೆ ಕರೆದಿದ್ದಾರೆ.
ಆದರೆ ರಾಮ್ ಚರಣ್ ಅವರನ್ನು ಶಾರುಖ್ ಖಾನ್ ವೇದಿಕೆಗೆ ಕರೆಯುವಾಗ ʼಇಡ್ಲಿ ವಡಾ ಎಲ್ಲಿದ್ದೀಯಾ ನೀನುʼ ಎಂದು ಕರೆದು ವೇದಿಕೆಗೆ ಆಹ್ವಾನಿಸಿದ್ದಾರೆ. ಇದು ಖ್ಯಾತ ನಟನಿಗೆ ಶಾರುಖ್ ಅವರು ತೋರಿಸಿದ ಅಗೌರವ ಎಂದು ರಾಮ್ ಚರಣ್ ಪತ್ನಿ ಉಪಸನಾ ಅವರು ಹೇಳಿದ್ದಾರೆ.
ರಾಮ್ ಚರಣ್ ಪತ್ನಿ ಉಪಾಸನಾಗೆ ಮೇಕಪ್ ಆರ್ಟಿಸ್ಟ್ ಆಗಿರುವ ಜೆಬಾ ಹಾಸನ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ರಾಮ್ ಚರಣ್ ಅವರನ್ನು ಶಾರುಖ್ ಖಾನ್ ಇಡ್ಲಿ ಸಾಂಬಾರ್ ಎಂದು ಕರೆದ ಬಳಿಕ ನಾನು ಹೊರ ನಡೆದೆ. ಇದು ರಾಮ್ ಚರಣ್ ಅವರಿಗೆ ತೋರಿಸಿದ ಅಗೌರವ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. “ಶಾರುಖ್ ತಮಾಷೆಗಾಗಿ ಹೀಗೆ ಕರೆದರೂ, ಈ ರೀತಿ ಕರೆದಿರುವುದು ತಪ್ಪೆಂದು” ಒಬ್ಬರು ಬರೆದುಕೊಂಡಿದ್ದಾರೆ. ದಕ್ಷಿಣ ಭಾರತದ ಬಗ್ಗೆ ಶಾರುಖ್ ಅವರಿಗೆ ಎಂತಹ ಮನಸ್ಥಿತಿ ಇದೆ ಎಂದು ಇದರಲ್ಲೇ ಗೊತ್ತಾಗುತ್ತದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಆದರೆ ಶಾರುಖ್ ಖಾನ್ ಯಾರಿಗೂ ಅವಮಾನ ಮಾಡಿಲ್ಲ. ಅವರು ತನ್ನ ʼಒನ್ ಟು ಕಾ 4ʼ ಸಿನಿಮಾದ ಡೈಲಾಗ್ ನ್ನು ಬದಲಾಯಿಸಿ ರಾಮ್ ಚರಣ್ ಅವರನ್ನು ಹಾಗೆಯೇ ಕರೆದಿದ್ದಾರೆ ಎಂದು ಕೆಲವರು ಶಾರುಖ್ ಪರ ಕಮೆಂಟ್ ಮಾಡಿದ್ದಾರೆ.
ʼಒನ್ ಟು ಕಾ 4ʼ ಸಿನಿಮಾದ ಸೀನ್ ವೊಂದರಲ್ಲಿ ದಕ್ಷಿಣದಲ್ಲಿ ಫೇಮಸ್ ಆಗಿರುವ ವಿಷಯಗಳ ಬಗ್ಗೆ ಮಾತನಾಡುತ್ತಾ. ಇಡ್ಲಿ, ವಡೆ, ರಜನಿಕಾಂತ್, ವೆಂಕಟೇಶ್, ನಾಗಾರ್ಜುನ ಎಂದು ಶಾರುಖ್ ಹೇಳುತ್ತಾರೆ.
ಇದೇ ಡೈಲಾಗ್ ನ್ನು ಅಂಬಾನಿ ಪ್ರೀ ವೆಡ್ಡಿಂಗ್ ವೇದಿಕೆಯಲ್ಲಿ ರಾಮ್‌ಚರಣ್ ಅವರನ್ನು ಕರೆಯುವಾಗ ಬಳಸಿದ್ದಾರೆ. ಸಿನಿಮಾ ಡೈಲಾಗ್‌ನಲ್ಲಿ ಇದ್ದ ರಜನಿಕಾಂತ್ ಹೆಸರು ತೆಗೆದು ರಾಮ್ ಚರಣ್ ಹೆಸರು ಸೇರಿಸಿ ಶಾರುಖ್ ಹೇಳಿದ್ದರು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ರಾಮ್ ಚರಣ್ ಬಿಟೌನ್ ಸ್ಟಾರ್ ಗಳಾದ ಶಾರುಖ್ ಹಾಗೂ ಸಲ್ಮಾನ್ ಇಬ್ಬರೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
Context in this scene is very clear that @iamsrk elevated Rajinikanth as one of the face of South Cinema at that time
Now he used the same dialogue for @AlwaysRamCharan to elevate him as face of South cinema
The message is clear just hail #RamCharan 🔥 pic.twitter.com/OR80QVvWnE
— Ravikumar JSP (@RavikumarJSP) March 4, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.