
SSMB 29: ಮಹೇಶ್ ಬಾಬು- ರಾಜಮೌಳಿ ಸಿನಿಮಾಕ್ಕೆ 1000 ಕೋಟಿ ಬಜೆಟ್? ಶೂಟಿಂಗ್ ಯಾವಾಗ ಶುರು?
Team Udayavani, Oct 29, 2024, 12:41 PM IST

ಹೈದರಾಬಾದ್: ಸೂಪರ್ ಹಿಟ್ ನಿರ್ದೇಶಕ ಎಸ್ ಎಸ್ ರಾಜಮೌಳಿ (SS Rajamouli) ಹಾಗೂ ಟಾಲಿವುಡ್ (Tollywood) ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು (Mahesh Babu) ಕಾಂಬಿನೇಷನ್‌ನಲ್ಲಿ ಬರಲಿರುವ ಸಿನಿಮಾದ ಬಗ್ಗೆ ಬಿಗ್ ಅಪ್ಡೇಟ್ ವೊಂದು ಹೊರಬಿದ್ದಿದೆ.
ಮಹೇಶ್ ಬಾಬು ಅವರ 29ನೇ ಚಿತ್ರ ಇದಾದ ಕಾರಣ ಸಿನಿಮಾಕ್ಕೆ ತಾತ್ಕಾಲಿಕವಾಗಿ ʼSSMB29ʼ ಟೈಟಲ್ ಇಡಲಾಗಿದೆ. ಚಿತ್ರೀಕರಣ ಯಾವಾಗ ಆರಂಭವಾಗುತ್ತದೆ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಸಿನಿಮಾದ ಕಥೆಯನ್ನು ಅಭಿವೃದ್ದಿ ಪಡಿಸಲು ಎರಡು ವರ್ಷ ಬೇಕಾಯಿತು ಎಂದು ಎಸ್ ಎಸ್ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಈ ಹಿಂದೆ ಹೇಳಿದ್ದರು.
ಇದೀಗ ʼSSMB29ʼ ಸಿನಿಮಾದ ಸ್ಕ್ರಿಪ್ಟ್ ಅಂತಿಮವಾಗಿದ್ದು,ಎಲ್ಲವೂ ಅಂದುಕೊಂಡಂತೆ ಆದರೆ 2025ರ ಜನವರಿ ತಿಂಗಳಿನಲ್ಲಿ ಸಿನಿಮಾ ಸೆಟ್ಟೇರಲಿದೆ. ಸದ್ಯ ನಿರ್ದೇಶಕರು ಸೂಕ್ತವಾದ ಲೋಕೇಷನ್ ಹುಡುಕಾಟದಲ್ಲಿ ನಿರತರಾಗಿದ್ದಾರೆ ಎಂದುʼ ಗುಲ್ಟೆʼ ವರದಿ ಮಾಡಿದೆ.
ಸಿನಿಮಾ 900-1000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ ಎಂದು ವರದಿ ಆಗಿದೆ.
ಅಡ್ವೆಂಚರ್ ಜಂಗಲ್, ಸಾಹಸಮಯ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ಸಿನಿಮಾದಲ್ಲಿ ಮಹೇಶ್ ಬಾಬು ಅವರ ಪಾತ್ರವು ರಾಮಾಯಣದ ಹನುಮಂತನಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ.
“ಇದೊಂದು ವಿಶ್ವ ಪರ್ಯಟನೆಯುಳ್ಳ ಸಾಹಸಮಯವದ ಸಿನಿಮಾ, ಈ ಸಿನಿಮಾ ಪ್ರತಿಯೊಬ್ಬ ಪ್ರೇಕ್ಷಕರನ್ನು ಸೆಳೆಯಲಿದೆ. ಇದು ಜೇಮ್ಸ್ ಬಾಂಡ್ ಅಥವಾ ಇಂಡಿಯಾನ ಜೋನ್ಸ್ ಸಾಹಸದ ಹಾಗೆ ಭಾರತೀಯ ಶೈಲಿಯಲ್ಲಿ ಮೂಡಿಬರುವ ಚಿತ್ರ. ಥಿಯೇಟರ್ ನಲ್ಲಿ ಈ ಸಿನಿಮಾ ಎಲ್ಲರನ್ನೂ ರೋಮಾಂಚನಗೊಳಿಸಲಿದೆ” ಎಂದು ರಾಜಮಾಳಿ ಈ ಹಿಂದೆ ಹೇಳಿದ್ದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary: ಕನ್ನಡಿಗರಿಗೆ, ಯಶ್ ಅಭಿಮಾನಿಗಳಿಗೆ ಅವಮಾನ ಮಾಡಿಲ್ಲ: ಪುಷ್ಪ 2 ವಿತರಕ

Nayanthara: ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್ ಸ್ಟಾರ್?

ಶೋಭಿತಾ ಜತೆ ಮದುವೆ ಹಿನ್ನೆಲೆ ಮಾಜಿ ಪತ್ನಿ ಜತೆಗಿನ ಕೊನೆಯ ಫೋಟೋ ಡಿಲೀಟ್ ಮಾಡಿದ ನಾಗಚೈತನ್ಯ

Allu Arjun: ʼಪುಷ್ಪ-2ʼಗಾಗಿ ಇದುವರೆಗೆ ಯಾರು ಕೇಳದ್ದಷ್ಟು ಸಂಭಾವನೆ ಕೇಳಿದ ಅಲ್ಲು ಅರ್ಜುನ್?

Jani Master: ಜೈಲಿನಿಂದ ಹೊರಬಂದು ʼಸತ್ಯʼ ಎಂದಿಗೂ ನಶಿಸುವುದಿಲ್ಲ ಎಂದ ಜಾನಿ ಮಾಸ್ಟರ್
MUST WATCH
ಹೊಸ ಸೇರ್ಪಡೆ

Tourism: ಗೋವಾ – ಲಕ್ಷ ದ್ವೀಪಕ್ಕೆ ಶೀಘ್ರ ನೇರ ಫ್ಲೈಟ್!

ಮಹಾರಾಷ್ಟ ಚುನಾವಣೆ ಕಾರಣಕ್ಕೆ ಬಿಜೆಪಿಯಿಂದ ಗೊಂದಲ ಸೃಷ್ಟಿ: ಕಾಂಗ್ರೆಸ್ ನಾಯಕರ ತಿರುಗೇಟು

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Bajpe: 3 ಅಸೆಂಬ್ಲಿ ಕ್ಷೇತ್ರಗಳಿಗೆ ಇನ್ನು ಫಲ್ಗುಣಿಯೇ ಜೀವನದಿ!

Mangaluru: ಪ್ಲಾಸ್ಟಿಕ್‌ಗಿದೆ ಪರ್ಯಾಯ, ಮನಸು ಬೇಕಷ್ಟೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.