Bijili Ramesh: ಕುಡಿತದ ಚಟದಿಂದ ಅನಾರೋಗ್ಯ; ಖ್ಯಾತ ಕಾಲಿವುಡ್ ನಟ ನಿಧನ
Team Udayavani, Aug 27, 2024, 12:34 PM IST
ಚೆನ್ನೈ: ಕಾಲಿವುಡ್ ನಟ (Kollywood Actor) ಬಿಜಿಲಿ ರಮೇಶ್ (Bijili Ramesh) ಮಂಗಳವಾರ(ಆ.27ರಂದು) ನಿಧನರಾಗಿದ್ದಾರೆ.
ಕಳೆದ ಕೆಲ ಸಮಯದಿಂದ ಲಿವರ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ 46 ವರ್ಷದ ರಮೇಶ್ ಮಂಗಳವಾರ ಬೆಳಗ್ಗೆ ಚೆನ್ನೈನಲ್ಲಿ ನಿಧನರಾಗಿದ್ದಾರೆ.
ತಮಿಳು ಚಿತ್ರರಂಗದಲ್ಲಿ ರಮೇಶ್:
ಚಿತ್ರರಂಗಕ್ಕೆ ಕಾಲಿಡುವ ಮುನ್ನ ಯೂಟ್ಯೂಬ್ ನಲ್ಲಿ ಪ್ರ್ಯಾಂಕ್ ವಿಡಿಯೋಗಳನ್ನು ಮಾಡಿ ಜನಪ್ರಿಯರಾಗಿದ್ದ ಅವರು ಆ ಬಳಿಕ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ 2018 ರಲ್ಲಿ ನಯನತಾರಾ ಅಭಿನಯಿಸಿದ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ʼಕೋಲಮಾವು ಕೋಕಿಲಾʼ ಚಿತ್ರದ ಪ್ರಮೋಷನಲ್ ಹಾಡೊಂದರಲ್ಲಿ ರಮೇಶ್ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಅವರಿಗೆ ತಮಿಳು ಚಿತ್ರರಂಗದಲ್ಲಿ ಅವಕಾಶದ ಬಾಗಿಲು ತೆರೆದಿತ್ತು.
ʼನಟ್ಪೆ ತುನೈʼ, ʼಆದೈʼ, ʼಪೊನ್ಮಗಲ್ ವಂದಾಲ್ʼ, ʼಕೋಮಾಲಿʼ ಯಂತಹ ಸಿನಿಮಾದಲ್ಲಿನ ಅವರ ಹಾಸ್ಯ ಪಾತ್ರದ ಅಭಿನಯಕ್ಕೆ ಪ್ರೇಕ್ಷಕರು ಮನಸೋತಿದ್ದರು.
ಸೂಪರ್ ಸ್ಟಾರ್ ರಜಿನಿಕಾಂತ್ ಅವರ ದೊಡ್ಡ ಅಭಿಮಾನಿಯಾಗಿದ್ದ ಅವರು ಒಂದು ಸಲಿಯಾದರೂ ಅವರೊಂದಿಗೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು.
ಅತಿಯಾದ ಕುಡಿತ ಚಟ.. ಬಣ್ಣದ ಲೋಕದಲ್ಲಿ ಮಿಂಚಿದ್ದ ರಮೇಶ್ ನಿಜ ಜೀವನದಲ್ಲಿ ಕುಡಿತದ ಚಟಕ್ಕೆ ದಾಸರಾಗಿದ್ದರು. ಇದರಿಂದ ಅವರ ಆರೋಗ್ಯ ಹದಗೆಡಲು ಪ್ರಾರಂಭವಾಗಿತ್ತು. ಮದ್ಯಪಾನದಿಂದ ಆರೋಗ್ಯ ಹಾಳಾದ ಕಾರಣ ಅವರು ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಅತಿಯಾದ ಕುಡಿತದಿಂದಾಗಿ ಅವರ ಲಿವರ್ ಗೆ ಹಾನಿಯಾಗಿತ್ತು.
ಅನೇಕರು ಅವರ ಆರ್ಥಿಕ ಸಂಕಷ್ಟಕ್ಕೆ ಮಿಡಿದು ಧನಸಹಾಯವನ್ನು ಮಾಡಿದ್ದರು. ನಟನ ನಿಧನಕ್ಕೆ ಚಿತ್ರರಂಗದ ಆಪ್ತರು ಹಾಗೂ ಗಣ್ಯರು ಕಂಬನಿ ಮಿಡಿದಿದ್ದಾರೆ.
ಚೆನ್ನೈನ ಎಂಜಿಆರ್ ನಗರದಲ್ಲಿರುವ ರುದ್ರಭೂಮಿಯಲ್ಲಿ ಸಂಜೆ 5 ಗಂಟೆಗೆ ಅವರ ಅಂತಿಮ ಸಂಸ್ಕಾರ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amaran: ರಿಲೀಸ್ ಆದ ಮೂರೇ ದಿನದಲ್ಲಿ ʼಅಮರನ್ʼ ಸಿನಿಮಾದ ಹೆಚ್‌ಡಿ ಪ್ರಿಂಟ್ ಲೀಕ್
Chennai ಪುಸ್ತಕ ಮಾರುವ ನೆಪದಲ್ಲಿ ಖ್ಯಾತ ನಟಿಯ ಕೈಯಲ್ಲಿದ್ದ ಹಣ ಕಸಿದು ಪರಾರಿಯಾದ 8ರ ಬಾಲಕ
Devara OTT Release: ʼದೇವರʼ ಓಟಿಟಿ ಎಂಟ್ರಿಗೆ ಡೇಟ್ ಫಿಕ್ಸ್? ಈ ದಿನವೇ ರಿಲೀಸ್?
Actress Sreeleela: ಮೆಗಾ ಕುಟುಂಬದ ಸೊಸೆಯಾಗಲಿದ್ದಾರಾ ಕನ್ನಡದ ಶ್ರೀಲೀಲಾ? ಏನಿದು ಸುದ್ದಿ?
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.