TN State Film Awards: ಹೆಚ್ಚು ಪ್ರಶಸ್ತಿ ಗೆದ್ದ ʼಥಾನಿ ಒರುವನ್ʼ; ಇಲ್ಲಿದೆ ಫುಲ್ ಲಿಸ್ಟ್
Team Udayavani, Mar 5, 2024, 3:44 PM IST
ಚೆನ್ನೈ: ಸಿನಿಮಾರಂಗಕ್ಕೆ ಕೊಡಮಾಡುವ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿಯೂ ಒಂದು. ತಮಿಳುನಾಡು ಸರ್ಕಾರವು 2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯನ್ನು ಅನೌನ್ಸ್ ಮಾಡಿದೆ.
ಮಾರ್ಚ್ 6, 2024 ರಂದು ಟಿಎನ್ ರಾಜರತ್ನಂ ಕಲೈ ಅರಂಗಂನಲ್ಲಿ ಪ್ರಶಸ್ತಿ ಕಾರ್ಯಕ್ರಮ ನಡೆಯಲಿದೆ. ವಾರ್ತಾ ಮತ್ತು ಪ್ರಚಾರ ಸಚಿವ ಎಂ.ಪಿ.ಸಮಿನಾಥನ್ ವಿಜೇತರಿಗೆ ಪ್ರಶಸ್ತಿ ವಿತರಿಸಲಿದ್ದಾರೆ.
ʼಇರುಧಿ ಸುಟ್ರುʼ ಎಂಬ ಸ್ಪೋರ್ಟ್ಸ್ ಡ್ರಾಮಾ ಸಿನಿಮಾದ ಅಭಿನಯಕ್ಕಾಗಿ ಆರ್.ಮಾಧವನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಒಲಿದು ಬಂದಿದೆ. ʼ36 ವಯತಿನಿಲೆʼ ಸಿನಿಮಾದಲ್ಲಿನ ಅಭಿನಯಕ್ಕಾಗಿ ಜ್ಯೋತಿಕಾ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಒಲಿದಿದೆ.
ಇಲ್ಲಿದೆ ಸಂಪೂರ್ಣ ಪಟ್ಟಿ:
ಅತ್ಯುತ್ತಮ ಚಿತ್ರ: ಥಾನಿ ಒರುವನ್
ಅತ್ಯುತ್ತಮ ಚಿತ್ರ (ದ್ವಿತೀಯ ಬಹುಮಾನ): ಪಸಂಗ 2
ಅತ್ಯುತ್ತಮ ಚಿತ್ರ (ಮೂರನೇ ಬಹುಮಾನ): ಪ್ರಭಾ
ಅತ್ಯುತ್ತಮ ಚಿತ್ರ: (ವಿಶೇಷ ಬಹುಮಾನ): ಇರುಧಿ ಸುಟ್ರು
ಮಹಿಳಾ ಸಬಲೀಕರಣದ ಕುರಿತ ಅತ್ಯುತ್ತಮ ಚಲನಚಿತ್ರ: (ವಿಶೇಷ ಬಹುಮಾನ): 36 ವಯತಿನಿಲೆ
ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು: ಅತ್ಯುತ್ತಮ ನಟರು, ನಟಿಯರು ಮತ್ತು ತಂತ್ರಜ್ಞರು:
ಅತ್ಯುತ್ತಮ ನಟ: ಆರ್. ಮಾಧವನ್ (ಇರುಧಿ ಸುಟ್ರು)
ಅತ್ಯುತ್ತಮ ನಟಿ: ಜ್ಯೋತಿಕಾ (36 ವಯತಿನಿಲೆ)
ಅತ್ಯುತ್ತಮ ನಟ: ವಿಶೇಷ ಪ್ರಶಸ್ತಿ : ಗೌತಮ್ ಕಾರ್ತಿಕ್ (ವೈ ರಾಜಾ ವೈ)
ಅತ್ಯುತ್ತಮ ನಟಿ: ವಿಶೇಷ ಬಹುಮಾನ: ರಿತಿಕಾ ಸಿಂಗ್ (ಇರುಧಿ ಸುಟ್ರು)
ಅತ್ಯುತ್ತಮ ವಿಲನ್: ಅರವಿಂದ್ ಸ್ವಾಮಿ (ಥಾನಿ ಒರುವನ್)
ಅತ್ಯುತ್ತಮ ಹಾಸ್ಯ ನಟ: ಸಿಂಗಂಪುಲಿ (ಅಂಜುಕ್ಕು ಒನ್ನು)
ಅತ್ಯುತ್ತಮ ಹಾಸ್ಯ ನಟಿ: ದೇವದರ್ಶಿನಿ (ತಿರುಟ್ಟು ಕಲ್ಯಾಣಂ, 36 ವಯತಿನಿಲೆ)
ಅತ್ಯುತ್ತಮ ಪೋಷಕ ನಟ: ತಲೈವಾಸಲ್ ವಿಜಯ್ (ಅಪೂರ್ವ ಮಹಾನ್)
ಅತ್ಯುತ್ತಮ ಪೋಷಕ ನಟಿ: ಗೌತಮಿ (ಪಾಪನಾಸಂ)
ಅತ್ಯುತ್ತಮ ನಿರ್ದೇಶಕಿ: ಸುಧಾ ಕೊಂಗರ (ಇರುಧಿ ಸುಟ್ರು)
ಅತ್ಯುತ್ತಮ ಸ್ಟೋರಿ ರೈಟರ್: ಮೋಹನ್ ರಾಜ (ಥಾನಿ ಒರುವನ್)
ಅತ್ಯುತ್ತಮ ಸಂಭಾಷಣೆ ಬರಹಗಾರ: ಆರ್ ಸರವಣನ್ (ಕತ್ತುಕುಟ್ಟಿ)
ಅತ್ಯುತ್ತಮ ಸಂಗೀತ ನಿರ್ದೇಶಕ: ಗಿಬ್ರಾನ್ (ಉತ್ತಮ ವಿಲನ್, ಪಾಪನಾಸಂ)
ಅತ್ಯುತ್ತಮ ಗೀತರಚನೆಕಾರ : ವಿವೇಕ್ (36 ವಯತಿನಿಲೆ)
ಅತ್ಯುತ್ತಮ ಹಿನ್ನೆಲೆ ಗಾಯಕ: ಗಾನ ಬಾಲ (ವೈ ರಾಜಾ ವೈ)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಕಲ್ಪನಾ ರಾಘವೇಂದ್ರ (36 ವಯತಿನಿಲೆ)
ಅತ್ಯುತ್ತಮ ಛಾಯಾಗ್ರಾಹಕ: ರಾಮ್‌ಜಿ (ಥಾನಿ ಒರುವನ್)
ಅತ್ಯುತ್ತಮ ಸೌಂಡ್ ಡಿಸೈನರ್: ಎಎಲ್ ತುಕಾರಾಂ, ಜೆ ಮಹೇಶ್ವರನ್ (ಠಕ್ಕ ಠಕ್ಕ)
ಅತ್ಯುತ್ತಮ ಸಂಪಾದಕ: ಗೋಪಿ ಕೃಷ್ಣ (ಥಾನಿ ಒರುವನ್)
ಅತ್ಯುತ್ತಮ ಕಲಾ ನಿರ್ದೇಶಕ: ಪ್ರಭಾಹರನ್ (ಪಸಂಗ 2)
ಅತ್ಯುತ್ತಮ ಸಾಹಸ ಸಂಯೋಜಕ: ಟಿ ರಮೇಶ್ (ಉತ್ತಮ ವಿಲನ್)
ಅತ್ಯುತ್ತಮ ನೃತ್ಯ ಸಂಯೋಜಕಿ: ಬೃಂದಾ (ಥಾನಿ ಒರುವನ್)
ಅತ್ಯುತ್ತಮ ಮೇಕಪ್: ಶಬರಿ ಗಿರೀಶನ್ (36 ವಯತಿನಿಲೆ, ಇರುಧಿ ಸುಟ್ರು)
ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್ : ವಾಸುಕಿ ಭಾಸ್ಕರ್ (ಮಾಯಾ)
ಅತ್ಯುತ್ತಮ ಬಾಲ ಕಲಾವಿದೆ: ಮಾಸ್ಟರ್ ನಿಶೇಶ್, ಬೇಬಿ ವೈಷ್ಣವಿ (ಪಸಂಗ 2)
ಅತ್ಯುತ್ತಮ ಡಬ್ಬಿಂಗ್ ಕಲಾವಿದ: (ಪುರುಷ) – ಗೌತಮ್ ಕುಮಾರ್ (36 ವಯತಿನಿಲೆ)
ಅತ್ಯುತ್ತಮ ಡಬ್ಬಿಂಗ್ ಕಲಾವಿದೆ (ಮಹಿಳೆ): ಆರ್ ಉಮಾ ಮಹೇಶ್ವರಿ (ಇರುಧಿ ಸುಟ್ರು)
ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು 1967 ರಲ್ಲಿ ಪ್ರಾರಂಭಿಸಲಾಯಿತು. 2008 ರಲ್ಲಿ ಕಾರ್ಯಕ್ರಮ ನಿಂತಿತ್ತು. ಇದಾದ ಬಳಿಕ 2009 ಮತ್ತು 2014 ರ ನಡುವೆ ಬಿಡುಗಡೆಯಾದ ಚಲನಚಿತ್ರಗಳನ್ನು ಗುರುತಿಸಿ 2017 ರಲ್ಲಿ ಪ್ರಶಸ್ತಿಗಳನ್ನು ಮರುಸ್ಥಾಪಿಸಲಾಯಿತು. ಹಾಗಾಗಿ, ಈ ವರ್ಷ 2015 -16 ರಲ್ಲಿ ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೀವನ ಪರ್ಯಂತ ವೀಲ್ ಚೇರ್‌ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ
ʼಅಮರನ್’ ಫೋನ್ ನಂಬರ್ ಸೀನ್; ಸಾಯಿಪಲ್ಲವಿ ನಂಬರ್ ಎಂದು ವಿದ್ಯಾರ್ಥಿಗೆ ನೂರಾರು ಕಾಲ್ಸ್
Kamal Haasan: ʼಥಗ್ ಲೈಫ್ʼ ರಿಲೀಸ್ ಡೇಟ್ ಅನೌನ್ಸ್; ಬರ್ತ್ ಡೇಗೆ ಟೀಸರ್ ಗಿಫ್ಟ್
Nivin Pauly: ಲೈಂಗಿಕ ದೌರ್ಜನ್ಯ ಪ್ರಕರಣ; ʼಪ್ರೇಮಂʼ ನಟ ನಿವಿನ್ ಪೌಲಿಗೆ ಕ್ಲೀನ್ ಚಿಟ್
BʼTown: ʼಪುಷ್ಪ-2ʼಗೆ ದಾರಿ ಬಿಟ್ಟ ವಿಕ್ಕಿ ಕೌಶಲ್ ʼಛಾವಾʼ; ರಿಲೀಸ್ ಡೇಟ್ ಮುಂದೂಡಿಕೆ?
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.