ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ನಟಿ ಸಮಂತಾ ಬಳಿ ಕ್ಷಮೆ ಕೇಳಿ ಹೇಳಿಕೆ ಹಿಂಪಡೆದ ಸಚಿವೆ
Team Udayavani, Oct 3, 2024, 10:36 AM IST
ಹೈದರಾಬಾದ್: ತೆಲುಗು ನಟ ಅಕ್ಕಿನೇನಿ ನಾಗ ಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು ಅವರ ವಿಚ್ಛೇದನಕ್ಕೆ ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ (KTR) ಅವರೇ ಕಾರಣವೆಂದು ಸಚಿವೆ ಕೊಂಡಾ ಸುರೇಖಾ ಬುಧವಾರ ಆರೋಪ ಮಾಡಿದ್ದು ಇದಾದ ಒಂದು ದಿನದ ಬಳಿಕ ತನ್ನ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದಾರೆ.
ಬುಧವಾರ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವೆ ಕೊಂಡಾ ಸುರೇಖಾ, ನಾಗ ಚೈತನ್ಯ ಮತ್ತು ನಟಿ ಸಮಂತಾ ಜೀವನದಲ್ಲಿ ಹುಳಿ ಹಿಂಡಿದ್ದೆ ಕೆಟಿಆರ್ ಅಷ್ಟು ಮಾತ್ರವಲ್ಲದೆ ಸಮಂತಾ, ನಾಗಚೈತನ್ಯ ಮಾತ್ರವಲ್ಲದೆ ಟಾಲಿವುಡ್ ನ ಹಲವು ನಟಿಯರ ಫೋನ್ ಟ್ರ್ಯಾಪ್ ಮಾಡಿ ಅವರನ್ನು ಡ್ರಗ್ಸ್ ದಂಧೆಗೆ ಬಳಸಿ ಅವರ ಬಾಳನ್ನು ಹಾಳು ಮಾಡಿದ್ದಾನೆ ಎಂದು ಸಚಿವೆ ಆರೋಪಿಸಿದ್ದರು.
ನನ್ನ ಹೆಸರನ್ನು ರಾಜಕೀಯದಿಂದ ದೂರವಿಡಿ ಎಂದ ಸಮಂತಾ:
ಇತ್ತ ಕೊಂಡಾ ಸುರೇಖಾ ಅವರ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ನಟಿ ಸಮಂತಾ ಪ್ರತಿಕ್ರಿಯೆ ನೀಡಿ ಸಚಿವೆ ಹೇಳಿಕೆ ವಿರುದ್ಧ ಕಿಡಿಕಾರಿದ್ದು ನನ್ನ ಹೆಸರನ್ನು ರಾಜಕೀಯಕ್ಕೆ ತರಬೇಡಿ ಎಂದು ಹೇಳಿಕೊಂಡಿದ್ದರು ಇದಾದ ಬೆನ್ನಲ್ಲೇ ಸಚಿವೆ ನಟಿ ಸಮಂತಾ ಬಳಿ ಕ್ಷಮೆ ಕೇಳಿ ತನ್ನ ಹೇಳಿಕೆಯನ್ನು ಹಿಂಪಡೆದಿದ್ದಾರೆ ಅಲ್ಲದೆ ಈ ಕುರಿತು ಟ್ವೀಟ್ ಮಾಡಿದ ಸಚಿವೆ ನನ್ನ ಹೇಳಿಕೆಯಿಂದ ನಟಿ ಸಮಂತಾ ಅವರಿಗೆ ನೋವಾಗಿದ್ದರೆ ಈ ಕೂಡಲೇ ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ, ಅಲ್ಲದೆ ನನ್ನ ಉದ್ದೇಶ ಯಾರ ಮನಸ್ಸನ್ನು ನೋಯಿಸುವುದು ಆಗಿರಲಿಲ್ಲ ಬದಲಾಗಿ ಒಬ್ಬ ನಾಯಕ ಓರ್ವ ಮಹಿಯನ್ನು ಯಾವ ಮಟ್ಟದಲ್ಲಿ ನೋಡುತಿದ್ದಾನೆ ಎಂಬುದನ್ನು ಗೊತ್ತುಪಡಿಸುವುದು ಆಗಿತ್ತು ಹೊರತು ನಿಮ್ಮ ಭಾವನೆಗೆ ಧಕ್ಕೆ ತರುವುದು ಆಗಿರಲಿಲ್ಲ ಅಲ್ಲದೆ ನೀವು ಸ್ವಾವಲಂಬಿಯಾಗಿ ಬೆಳೆದು ಬಂದ ರೀತಿಯ ಬಗ್ಗೆ ನನಗೆ ಅಭಿಮಾನ ಮಾತ್ರವಲ್ಲ ಅದು ಆದರ್ಶವೂ ಆಗಿದೆ. ಎಂದು ಬರೆದುಕೊಂಡಿದ್ದಾರೆ.
నా వ్యాఖ్యల ఉద్దేశం మహిళల పట్ల ఒక నాయకుడి చిన్నచూపు ధోరణిని ప్రశ్నించడమే కానీ మీ @Samanthaprabhu2 మనోభావాలను దెబ్బతీయడం కాదు.
స్వయం శక్తితో మీరు ఎదిగిన తీరు నాకు కేవలం అభిమానం మాత్రమే కాదు.. ఆదర్శం కూడా..
— Konda surekha (@iamkondasurekha) October 2, 2024
ಸಚಿವೆ ವಿರುದ್ಧ ಕೆಟಿಆರ್ ಲೀಗಲ್ ನೋಟಿಸ್:
ಇನ್ನು ಸಮಂತಾ ಮತ್ತು ನಟ ನಾಗ ಚೈತನ್ಯ ಬೇರೆಯಾಗಲು ನಾನೇ ಕರಣ ಎಂದು ಸಚಿವೆ ಕೊಂಡಾ ಸುರೇಖಾ ಹೇಳಿರುವುದು ರಾಜಕೀಯ ಪ್ರೇರಿತ, ಅಲ್ಲದೆ ರಾಜಕೀಯದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಸಚಿವೆ ಈ ಮಟ್ಟಕ್ಕೆ ಇಳಿಯಬಾರದಾಗಿತ್ತು, ಇನ್ನೊಬ್ಬರ ಭಾವನೆಗಳಿಗೆ ಧಕ್ಕೆ ತಂದು ತಾನು ಸಂತೋಷದಿಂದ ಇರಲು ಸಚಿವೆ ಈ ರೀತಿ ಹೇಳಿಕೆ ನೀಡಿದ್ದಾರೆ, ಅಲ್ಲದೆ ನನ್ನ ಮೇಲೆ ಮಾಡಿರುವ ಆರೋಪಗಳಿಗೆ ಸಚಿವೆ ಬಳಿ ಸಾಕ್ಷಿ ಇದೆಯೇ, ಒಂದು ವೇಳೆ ಸಾಕ್ಷಾಧಾರ ಇದ್ದಲ್ಲಿ ಅದನ್ನು ಎಲ್ಲರ ಗಮನಕ್ಕೆ ತರಲಿ, ಅದನ್ನು ಬಿಟ್ಟು ಸುಖಾಸುಮ್ಮನೆ ಸುಳ್ಳು ಆರೋಪಗಳನ್ನು ಮಾಡುವುದು ಸರಿಯಲ್ಲ, ಹಾಗಾಗಿ ಈ ಕೂಡಲೇಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಇಲ್ಲದಿದ್ದಲ್ಲಿ ಸಚಿವೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Marco: ಕೋಟಿ ಕೋಟಿ ಗಳಿಕೆ ಕಾಣುತ್ತಿರುವ ʼಮಾರ್ಕೊʼಗೆ ಪೈರಸಿ ಕಾಟ; ಹೆಚ್ ಡಿ ಪ್ರಿಂಟ್ ಲೀಕ್
ಕೋಮಾದಲ್ಲಿದ್ದ ನನ್ನ ಮಗನ ನೆನಪಿನ ಶಕ್ತಿ ಮರಳಲು ದಳಪತಿ ವಿಜಯ್ ಕಾರಣವೆಂದ ಖ್ಯಾತ ನಟ
Mollywood: 13 ವರ್ಷದ ಬಳಿಕ ರೀ- ರಿಲೀಸ್ ಆಗಲಿದೆ ಸೂಪರ್ ಹಿಟ್ ʼಉಸ್ತಾದ್ ಹೊಟೇಲ್ʼ
Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.