GOAT Trailer: ‘ಗೋಟ್ʼ ಟ್ರೇಲರ್‌ನಲ್ಲಿ ʼಗಾಂಧಿʼಯಾಗಿ ಸಖತ್ ಸ್ಟಂಟ್ ಮಾಡಿದ ದಳಪತಿ ವಿಜಯ್
Team Udayavani, Aug 17, 2024, 5:54 PM IST
ಚೆನ್ನೈ: ಚೆನ್ನೈ: ಕಾಲಿವುಡ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಅವರ ಬಹುನಿರೀಕ್ಷಿತ ಸಿನಿಮಾ ʼದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ʼ (The Greatest of All Time) ಸಿನಿಮಾದ ಟ್ರೇಲರ್ ಶನಿವಾರ(ಆ.17ರಂದು) ರಿಲೀಸ್ ಆಗಿದೆ.
ದಳಪತಿ ಸಿನಿಮಾ ವೃತ್ತಿ ಬದುಕಿಗೆ ಇನ್ನೇನು ಕೆಲವೇ ವರ್ಷಗಳಲ್ಲಿ ವಿದಾಯ ಹೇಳುತ್ತಾರೆ ಎನ್ನುವ ಮಾತಿನ ನಡುವೆ ಅನೌನ್ಸ್ ಆದ ʼಗೋಟ್ʼ ಸಿನಿಮಾ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹೆಚ್ಚಿಸಿದೆ.
ಸಿನಿಮಾದಲ್ಲಿ ವಿಜಯ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ವಿಭಿನ್ನ ಪೋಸ್ಟರ್‌ಗಳಿಂದ ಸದ್ದು ಮಾಡಿರುವ ʼಗೋಟ್ʼ ಟ್ರೇಲರ್ ರಿಲೀಸ್ ಮಾಡಿ ಪ್ರೇಕ್ಷಕರ ಗಮನ ಸೆಳೆದಿದೆ.
ಇದನ್ನೂ ಓದಿ: Fauji Movie: ಪ್ರಭಾಸ್ ʼಫೌಜಿʼ ಮುಹೂರ್ತಕ್ಕೆ ಸಾಥ್ ಕೊಟ್ಟ ನೀಲ್; ಫಸ್ಟ್ ಲುಕ್ ಔಟ್
ಟ್ರೇಲರ್ ನಲ್ಲಿ ಏನಿದೆ?: ʼಗಾಂಧಿʼ ಎನ್ನುವಾತ (ದಳಪತಿ ವಿಜಯ್) ವಿಧ್ವಂಸಕ ಕೃತ್ಯಗಳನ್ನು ತಡೆಯುವ ಸ್ಪೈ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾನೆ. ನಿವೃತ್ತಿಯಾದ ತನ್ನ ತಂದೆಯ ಜತೆ ಸೇರಿಕೊಂಡು, ಕುಟುಂಬಕ್ಕೆ ಬರುವ ಅಪಾಯವನ್ನು ತಪ್ಪಿಸಿ, ಕೊಟ್ಟ ಟಾಸ್ಕ್ ಪೂರ್ತಿ ಮಾಡುವ ಸಾಹಸಕ್ಕೆ ಮುಂದಾಗುವುದನ್ನು ತೋರಿಸಲಾಗಿದೆ.
ʼಗಾಂಧಿʼ ಇಲ್ಲಿ ಅಪಾಯವನ್ನು ತಡೆಯುವ ಹೀರೋ ಆಗುವುದರ ಜತೆಗೆ ಕುಟುಂಬವನ್ನು ರಕ್ಷಿಸುವ ಧೀರನಾಗಿಯೂ ಕಾಣಿಸಿಕೊಂಡಿದ್ದಾರೆ. ವಿದೇಶದಲ್ಲಿ ಸಿನಿಮಾ ಶೂಟ್ ಆಗಿದ್ದು, ಆ್ಯಕ್ಷನ್ ದೃಶ್ಯಾವಳಿಗಳು ಅದ್ಧೂರಿಯಾಗಿ ಮೂಡಿಬಂದಿದೆ.
ಮೇಲ್ನೋಟಕ್ಕೆ ಇದೊಂದು ಸ್ಪೈ ಏಜೆಂಟ್ ಸಾಹಸದ ಕಥೆಯ ಸಿನಿಮಾವಾಗಿ ಕಾಣುತ್ತದೆ. ವಿಜಯ್ ಹೊರತುಪಡಿಸಿದರೆ ಜಯರಾಮ್ ಅವರು ಟ್ರೇಲರ್‌ನಲ್ಲಿ ಮಿಂಚಿದ್ದಾರೆ.
ವೆಂಕಟ್ ಪ್ರಭು ನಿರ್ದೇಶನದ ಈ ಸಿನಿಮಾದಲ್ಲಿ ವಿಜಯ್ ಜೊತೆ ಮೀನಾಕ್ಷಿ ಚೌಧರಿ, ಯೋಗಿ ಬಾಬು, ಜಯರಾಮ್, ಪ್ರಭುದೇವ, ಲೈಲಾ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಬಹುನಿರೀಕ್ಷಿತ ʼಗ್ರೇಟೆಸ್ಟ್ ಆಫ್ ಆಲ್ ಟೈಮ್ʼ ಚಿತ್ರ ಸೆ.5 ರಂದು ವರ್ಲ್ಡ್ ವೈಡ್ ತೆರೆ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amaran: ರಿಲೀಸ್ ಆದ ಮೂರೇ ದಿನದಲ್ಲಿ ʼಅಮರನ್ʼ ಸಿನಿಮಾದ ಹೆಚ್‌ಡಿ ಪ್ರಿಂಟ್ ಲೀಕ್
Chennai ಪುಸ್ತಕ ಮಾರುವ ನೆಪದಲ್ಲಿ ಖ್ಯಾತ ನಟಿಯ ಕೈಯಲ್ಲಿದ್ದ ಹಣ ಕಸಿದು ಪರಾರಿಯಾದ 8ರ ಬಾಲಕ
Devara OTT Release: ʼದೇವರʼ ಓಟಿಟಿ ಎಂಟ್ರಿಗೆ ಡೇಟ್ ಫಿಕ್ಸ್? ಈ ದಿನವೇ ರಿಲೀಸ್?
Actress Sreeleela: ಮೆಗಾ ಕುಟುಂಬದ ಸೊಸೆಯಾಗಲಿದ್ದಾರಾ ಕನ್ನಡದ ಶ್ರೀಲೀಲಾ? ಏನಿದು ಸುದ್ದಿ?
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.