Kollywood: ಚುನಾವಣೆ ಬಳಿಕವೇ ವಿಕ್ರಮ್‌ ʼತಂಗಲಾನ್‌ʼ ರಿಲೀಸ್; ಕಾರಣವೇನು?

Team Udayavani, Feb 17, 2024, 4:35 PM IST

9

ಚೆನ್ನೈ: ಚಿಯಾನ್‌ ವಿಕ್ರಮ್ ವೃತ್ತಿ ಬದುಕಿನ ಬಹು ನಿರೀಕ್ಷಿತ ಸಿನಿಮಾ ʼ ತಂಗಲಾನ್ʼ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗೆ ರಿಲೀಸ್‌ ಆಗಿರುತ್ತಿತ್ತು. ಆದರೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಿಂದ ಸಿನಿಮಾ ರಿಲೀಸ್‌ ಡೇಟ್‌ ಮುಂದೂಡಿಕೆ ಆಗಿತ್ತು.

ಖ್ಯಾತ ನಿರ್ದೇಶಕ ಪಾ.ರಂಜಿತ್ ನಿರ್ದೇಶನದ ʼತಂಗಲಾನ್‌ʼ ಸಿನಿಮಾಕ್ಕಾಗಿ ವಿಕ್ರಮ್‌ ಸಾಕಷ್ಟು ತಯಾರಿ ಮಾಡಿಕೊಂಡು ಶ್ರಮವಹಿಸಿದ್ದಾರೆ. ಕಥೆ ಮಾತ್ರವಲ್ಲದೆ, ತಾಂತ್ರಿಕ ವಿಭಾಗದಿಂದಲೂ ʼತಂಗಲಾನ್‌ʼ ಸಾಕಷ್ಟು ಸದ್ದು ಮಾಡುವ ನಿಟ್ಟಿನಲ್ಲಿ ಒಂದಷ್ಟು ಸಮಯವನ್ನು ಅದಾಕ್ಕಾಗಿಯೇ ಮೀಸಲಿಟ್ಟಿದೆ.

ಇದೇ ವರ್ಷದ ಜನವರಿ 26 ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ  ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಿಂದ ರಿಲೀಸ್‌ ಡೇಟ್‌ ಮುಂದೂಡಿಕೆ ಆಗಿತ್ತು. ಈಗಾಗಲೇ ಒಂದೇ ಒಂದು ಟೀಸರ್‌ ಝಲಕ್‌ ನಿಂದ ಹೈಪ್‌ ಹೆಚ್ಚಿಸಿರುವ ʼತಂಗಲಾನ್‌ʼ ಸಿನಿಮಾದ ಹೊಸ ರಿಲೀಸ್‌ ಡೇಟ್‌ ಬಗ್ಗೆ ಚರ್ಚೆ ಆರಂಭಗೊಂಡಿದೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಿನಿಮಾದ ನಿರ್ಮಾಣ ಸಂಸ್ಥೆ ಸ್ಟುಡಿಯೋ ಗ್ರೀನ್‌ನ ಸಿಇಒ ಧನಂಜಯನ್ ʼತಂಗಲಾನ್‌ʼ ರಿಲೀಸ್‌ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.

“2024 ರ ಚುನಾವಣೆ ಬಳಿಕವೇ ಬಹು ನಿರೀಕ್ಷಿತ ʼತಂಗಲಾನ್‌ʼ ಸಿನಿಮಾವನ್ನು ರಿಲೀಸ್‌ ಮಾಡುವ ಯೋಜನೆ ಇದೆ. ಇನ್ನು ಕೆಲ ತಿಂಗಳುಗಳ ಕಾಲ ಜನರ ಸಂಪೂರ್ಣ ಗಮನ ಚುನಾವಣೆಯ ಮೇಲಿರುತ್ತದೆ. ಚುನಾವಣೆಯ ನಂತರ ಸಿನಿಮಾ ಬಿಡುಗಡೆ ಮಾಡುವುದು ಸುರಕ್ಷಿತ ಎನ್ನುವುದು ಚಿತ್ರತಂಡದ ಯೋಜನೆ. ಹೀಗೆ ಮಾಡಿದರೆ ಸಿನಿಮಾದ ಪ್ರಚಾರಕ್ಕೆ ಇನ್ನಷ್ಟು ಸಮಯ ಸಿಗುತ್ತದೆ” ಎಂದು ಧನಂಜಯನ್‌ ಹೇಳಿದ್ದಾರೆ.

“ಸಿನಿಮಾದ ರೀ-ರೆಕಾರ್ಡಿಂಗ್ ಮತ್ತು ಡಬ್ಬಿಂಗ್ ಕೆಲಸಗಳು ಮುಗಿದಿವೆ. ಈಗಲೇ ಪ್ರಚಾರ ಆರಂಭಿಸಿದರೆ ಯೋಜಿಸಿದಂತೆ ಏಪ್ರಿಲ್ 2024 ರಲ್ಲಿ ಚಿತ್ರವನ್ನು ಬಿಡುಗಡೆ ಮಾಡಬಹುದು. ಆದರೆ ಚುನಾವಣೆ ಸಿನಿಮಾದ ಬಾಕ್ಸ್‌ ಆಫೀಸ್‌ ಗಳಿಕೆ ಮೇಲೆ ಪರಿಣಾಮ ಬೀರಬಹುದು” ಎಂದು ಅವರು ಹೇಳಿದ್ದಾರೆ.

ವಿಕ್ರಮ್ ಜೊತೆಗೆ ಚಿತ್ರದಲ್ಲಿ ಪಾರ್ವತಿ ತಿರುವೋತ್ತು, ಪಶುಪತಿ, ಮಾಳವಿಕಾ ಮೋಹನನ್, ಡೇನಿಯಲ್ ಕ್ಯಾಲ್ಟಗಿರೋನ್, ಹರಿಕೃಷ್ಣನ್ ಅನ್ಬುದುರೈ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

12

Actress Sakunthala: ಹೃದಯಾಘಾತದಿಂದ ಬಹುಭಾಷಾ ನಟಿ ʼಸಿ.ಐ.ಡಿ. ಶಕುಂತಲಾʼ ನಿಧನ

Poonam Kaur:  ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ನಟಿ ಪೂನಂ ಗಂಭೀರ ಆರೋಪ

Poonam Kaur: ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ನಟಿ ಪೂನಂ ಗಂಭೀರ ಆರೋಪ

Raghu Thatha: ಓಟಿಟಿಯಲ್ಲಿ ರಿಲೀಸ್‌ ಆದ 24 ಗಂಟೆಯಲ್ಲೇ ಹೊಸ ದಾಖಲೆ ಬರೆದ ʼರಘು ತಾತʼ

Raghu Thatha: ಓಟಿಟಿಯಲ್ಲಿ ರಿಲೀಸ್‌ ಆದ 24 ಗಂಟೆಯಲ್ಲೇ ಹೊಸ ದಾಖಲೆ ಬರೆದ ʼರಘು ತಾತʼ

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.