Thangalaan Movie: ನಟ ಯಶ್ ಅವರಿಗೆ ಸ್ಪೆಷೆಲ್ ಶೋ ಆಯೋಜಿಸಲಿದೆ ʼತಂಗಲಾನ್ʼ ಚಿತ್ರತಂಡ
Team Udayavani, Aug 5, 2024, 4:38 PM IST
ಚೆನ್ನೈ: ಚಿಯಾನ್ ವಿಕ್ರಮ್ (Actor Vikram) ವೃತ್ತಿ ಬದುಕಿನ ಬಹು ನಿರೀಕ್ಷಿತ ಸಿನಿಮಾ ʼತಂಗಲಾನ್ʼ(Thangalaan) ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.
ʼಕೆಜಿಎಫ್ʼ(KGF) ಅಖಾಡದಲ್ಲಿದ್ದ ಪೂರ್ವಜರ ಕಥೆ ಇದು ಎನ್ನಲಾಗುತ್ತಿದ್ದು, ಬಿಟ್ರಿಷ್ ಅಧಿಕಾರಿಯೊಬ್ಬ ಸ್ಥಳೀಯ ಬುಡಕಟ್ಟು ಜನಾಂಗದೊಂದಿಗೆ ʼಕೆಜಿಎಫ್ʼ ಚಿನ್ನವನ್ನು ಹುಡುಕುವ ದೃಶ್ಯವನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.
ಟ್ರೇಲರ್ ನೋಡಿದ ಬಳಿಕ ಪ್ರೇಕ್ಷಕರಿಗೆ ಈ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಇದೇ ಆಗಸ್ಟ್ 15 ರಂದು ಸಿನಿಮಾ ಪ್ಯಾನ್ ಇಂಡಿಯಾ ಭಾಷೆಯಲ್ಲಿ ರಿಲೀಸ್ ಆಗಲಿದೆ. ಸಿನಿಮಾ ಪ್ರಚಾರದಲ್ಲಿರುವ ಚಿತ್ರತಂಡ ಕೊಚ್ಚಿ, ಬೆಂಗಳೂರು ಮತ್ತು ಮುಂಬೈ ಮುಂತಾದ ಪಯಣ ಬೆಳೆಸಿ ಪ್ರಚಾರವನ್ನು ಕೈಗೊಳ್ಳಲಿದೆ.
ಸೋಮವಾರ (ಆಗಸ್ಟ್ 5 ರಂದು) ಚಿತ್ರದ ಆಡಿಯೋ ಲಾಂಚ್ ಚೆನ್ನೈನ ಟ್ರೇಡ್ ಸೆಂಟರ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಪ್ರಶಾಂತ್ ನೀಲ್ – ಯಶ್ ಅವರ ʼಕೆಜಿಎಫ್ʼ ಸಿನಿಮಾ ವರ್ಲ್ಡ್ ವೈಡ್ ಮೋಡಿ ಮಾಡಿದ್ದು ಗೊತ್ತೇ ಇದೆ. ʼತಂಗಲಾನ್ʼ ನಲ್ಲಿ ʼಕೆಜಿಎಫ್ʼ ಸ್ಥಳದ ಹಿನ್ನೆಲೆಯ ಕಥೆ ಇರಲಿದೆ ಎನ್ನಲಾಗಿದ್ದು, ʼತಂಗಲಾನ್ʼ ಸಿನಿಮಾವನ್ನು ನೋಡಲು ಚಿತ್ರತಂಡ ನಟ ಯಶ್ ಅವರಿಗೆ ವಿಶೇಷ ಶೋ ಆಯೋಜಿಸಲಿದೆ ಎಂದು ವರದಿಯಾಗಿದೆ.
‘ಕೆಜಿಎಫ್’ ನಟ ಯಶ್ ಅವರಿಗೆ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸುವ ಬಗ್ಗೆ ಚಿತ್ರತಂಡ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.
ಪ್ಯಾನ್ ಇಂಡಿಯಾ ಸಿನಿಮಾವನ್ನು ಖ್ಯಾತ ನಿರ್ದೇಶಕ ಪಾ ರಂಜಿತ್ (Pa Ranjith) ನಿರ್ದೇಶನ ಮಾಡಿದ್ದು, ವಿಕ್ರಮ್ ಜೊತೆ ಪಾರ್ವತಿ ತಿರುವೋತ್ತು, ಮಾಳವಿಕಾ ಮೋಹನನ್, ಪಶುಪತಿ ಮತ್ತು ಇತರರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.