South Actor: ಆ ಸಿನಿಮಾದ ಬಳಿಕ ಪ್ರಭಾಸ್‌ಗೆ 5000 ಮದುವೆ ಪ್ರಸ್ತಾಪಗಳು ಬಂದಿತ್ತಂತೆ!
Team Udayavani, Apr 5, 2024, 5:37 PM IST
ಹೈದರಾಬಾದ್: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ʼಸಲಾರ್ʼ ಸಿನಿಮಾ ಹಿಟ್ ಬಳಿಕ ಮತ್ತೆ ಗೆಲುವಿನ ಹಳಿಗೇರಿದ್ದಾರೆ. ಇದೀಗ ಅವರು ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಪ್ರಭಾಸ್ ಅವರ ಸಿನಿ ಕೆರಿಯರ್ ಉತ್ತುಂಗಕ್ಕೇರಿದಂತೆ ಅವರ ಲವ್ ಲೈಫ್ ಬಗ್ಗೆಯೂ ಅನೇಕ ಬಾರಿ ಸಿನಿವಲಯದಲ್ಲಿ ಸುದ್ದಿಗಳು ಹರಿದಾಡಿದೆ. ಸ್ಟಾರ್ ನಟಿಯರೊಂದಿಗೆ ಅವರು ಡೇಟ್ ಮಾಡಿದ್ದಾರೆ ಎನ್ನುವ ಗಾಸಿಪ್ ಗಳು ಟಾಲಿವುಡ್ ನಲ್ಲಿ ಹರಿದಾಡಿತ್ತು.
ಪ್ರಭಾಸ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಾಡಿದ್ದು ರಾಜಮೌಳಿ ಅವರ ʼಬಾಹುಬಲಿʼ ಸಿನಿಮಾವೆಂದರೆ ತಪ್ಪಾಗದು. ಈ ಸಿನಿಮಾದ ಬಳಿಕ ಪ್ರಭಾಸ್ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಅನೇಕ ಯುವತಿಯರು ಪ್ರಭಾಸ್ ಅವರ ಅಭಿಮಾನಿಯಾಗಿ ಅವರನ್ನು ಇಷ್ಟಪಡಲು ಶುರು ಮಾಡಿದ್ದರು.
“ಬಾಹುಬಲಿ ಸಿನಿಮಾದ ಬಳಿಕ ನನಗೆ 5000 ಮದುವೆ ಪ್ರಸ್ತಾಪಗಳು ಬಂದಿದ್ದವು. ಈ ವೇಳೆ ನಾನು ಬಹಳ ಗೊಂದಲಕ್ಕೆ ಒಳಗಾಗಿದ್ದೆ. ನನ್ನ ತಾಯಿ ಬಯಸಿದಂತೆ ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ. ಖಂಡಿತಾ ಲವ್ ಮ್ಯಾರೇಜ್ ಆಗುತ್ತೇನೆ” ಎಂದು ಪ್ರಭಾಸ್ ʼರಾಧೆ ಶ್ಯಾಮ್ʼ ಸಿನಿಮಾದ ಪ್ರಚಾರದ ವೇಳೆ ಹೇಳಿಕೊಂಡಿದ್ದರು.
ಪ್ರಭಾಸ್ ಅನುಷ್ಕಾ ಶೆಟ್ಟಿ ಜೊತೆ ʼಬಾಹುಬಲಿʼ ಬಳಿಕ ಡೇಟಿಂಗ್ ನಲ್ಲಿದ್ದರು ಎನ್ನಲಾಗಿತ್ತು. ಇದಾದ ಬಳಿಕ ʼಆದಿಪುರುಷ್ʼ ಸಿನಿಮಾದ ವೇಳೆ ನಟಿ ಕೃತಿ ಸನೋನ್ ಜೊತೆ ರಿಲೇಷನ್ ಶಿಪ್ ನಲ್ಲಿದ್ದರು ಎನ್ನಲಾಗಿತ್ತು. ಆದರೆ ಇದು ಗಾಸಿಪ್ ಗಷ್ಟೇ ಸೀಮಿತವಾಗಿತ್ತು.
ಪ್ರಭಾಸ್ ಮುಂದೆ ನಾಗ್ ಅಶ್ವಿನ್ ಅವರ ʼಕಲ್ಕಿ 2898 ADʼ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಕೂಡ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನು ಮಂಜೂರು
Marco: ಕೋಟಿ ಕೋಟಿ ಗಳಿಕೆ ಕಾಣುತ್ತಿರುವ ʼಮಾರ್ಕೊʼಗೆ ಪೈರಸಿ ಕಾಟ; ಹೆಚ್ ಡಿ ಪ್ರಿಂಟ್ ಲೀಕ್
ಕೋಮಾದಲ್ಲಿದ್ದ ನನ್ನ ಮಗನ ನೆನಪಿನ ಶಕ್ತಿ ಮರಳಲು ದಳಪತಿ ವಿಜಯ್ ಕಾರಣವೆಂದ ಖ್ಯಾತ ನಟ
Mollywood: 13 ವರ್ಷದ ಬಳಿಕ ರೀ- ರಿಲೀಸ್ ಆಗಲಿದೆ ಸೂಪರ್ ಹಿಟ್ ʼಉಸ್ತಾದ್ ಹೊಟೇಲ್ʼ
Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.