ಹುಡುಗರು ಸಿದ್ಧರಿಲ್ಲ, ಅಂಕಲ್ಸ್ ಆದ್ರೂ ಓಕೆ: ನನ್ನ ತಾಯಿಗೆ 2ನೇ ಮದುವೆ ಮಾಡಬೇಕೆಂದ ನಟಿ
Team Udayavani, Mar 27, 2024, 5:52 PM IST
ಹೈದರಾಬಾದ್: ಟಾಲಿವುಡ್ ಸಿನಿರಂಗದಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡಿರುವ ಸುರೇಖಾ ವಾಣಿ ಅವರ ಬಗ್ಗೆ ಪ್ರತ್ಯೇಕವಾಗಿ ಪರಿಚಯ ಮಾಡಿಕೊಡಬೇಕಿಲ್ಲ. ಹತ್ತಾರು ಸಿನಿಮಾದಲ್ಲಿ ನಾನಾ ಪಾತ್ರಗಳನ್ನು ಮಾಡಿ ಸೈ ಎನ್ನಿಸಿರುವ ಸುರೇಖಾ ವಾಣಿ ಇತ್ತೀಚೆಗಿನ ದಿನಗಳಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಕಮ್ಮಿಯಾಗಿದೆ.
ಸುರೇಖಾ ವಾಣಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ತಮ್ಮ ಮಗಳು ಸುಪ್ರೀತಾ ಜೊತೆ ರೀಲ್ಸ್ ಗಳನ್ನು ಹಂಚಿಕೊಳ್ಳುತ್ತಾರೆ. ಪ್ರವಾಸಿ ತಾಣಕ್ಕೆ ಹೋಗುತ್ತಾ ತಮ್ಮ ಲೈಫ್ ನ್ನು ಎಂಜಾಯ್ ಮಾಡುತ್ತಿದ್ದಾರೆ.
ಸುರೇಖಾ ವಾಣಿ ಅವರ ವಿವಾಹ ಕಿರುತೆರೆ ನಿರ್ದೇಶಕ ಸುರೇಶ್ ತೇಜಾ ಜೊತೆ ಆಗಿತ್ತು. ಆದರೆ ದೀರ್ಘಕಾಲದ ಅನಾರೋಗ್ಯದಿಂದ 2019 ಸುರೇಶ್ ತೇಜಾ ಕೊನೆಯುಸಿರೆಳೆದರು. ಆ ಬಳಿಕ ಮಗಳು ಸುಪ್ರೀತಾ ಜೊತೆಯೇ ಸುರೇಖಾ ದಿನ ಸಾಗಿಸುತ್ತಿದ್ದಾರೆ.
ಪತಿಯ ನಿಧನದ ಬಳಿಕ ಸುರೇಖಾ ಅವರ ಎರಡನೇ ಮದುವೆಯ ಬಗ್ಗೆ ಅನೇಕ ಬಾರಿ ಸುದ್ದಿಗಳು ಹರಿದಾಡಿದೆ. ಆದರೆ ಅದ್ಯಾವುದಕ್ಕೂ ಸುರೇಖಾ ತಲೆಕೆಡಿಸಿಕೊಂಡಿಲ್ಲ. ತಾಯಿಗೆ ಎರಡನೇ ಮದುವೆ ಮಾಡಿಸಬೇಕೆಂದು ಆಗಾಗ ಹೇಳುವ ಸುಪ್ರೀತಾ ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಹೇಳಿರುವುದು ವೈರಲ್ ಆಗಿದೆ.
ಸುರೇಖಾ ಮಗಳು ಸುಪ್ರೀತಾ ಬಿಗ್ ಬಾಸ್ ಖ್ಯಾತಿಯ ಅಮರ್ ದೀಪ್ ಚೌಧರಿ ಜೊತೆಗಿನ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಆ ಮೂಲಕ ಟಾಲಿವುಡ್ ಗೆ ಎಂಟ್ರಿ ಆಗಲಿದ್ದಾರೆ. ಇತ್ತೀಚೆಗೆ ʼದಾವತ್ʼ ಎನ್ನುವ ತೆಲುಗು ಕಾರ್ಯಕ್ರಮದಲ್ಲಿ ಸುಪ್ರೀತಾ ಅವರು ಭಾಗಿಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅವರು, ತನ್ನ ತಾಯಿಗೆ ಎರಡನೇ ಮದುವೆ ಮಾಡಿಸಬೇಕೆಂಬ ಇಂಗಿತವನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. “ತಂದೆ ತೀರಿಕೊಂಡ ಬಳಿಕ ತನ್ನ ತಾಯಿಗೆ ಎರಡನೇ ಮದುವೆ ಆಗುವಂತೆ ಅನೇಕರು ಹೇಳಿದ್ದಾರೆ. ಆದರೆ ತಾಯಿ ಇದಕ್ಕೆ ಒಪ್ಪಿಲ್ಲ. ನನ್ನ ತಾಯಿಯನ್ನು ಮದುವೆ ಆಗಲು ಹುಡುಗರು ಸಿದ್ಧರಿಲ್ಲ. ಅಂಕಲ್ ಆದರೂ ಸರಿ ಆಕೆಯನ್ನು ಚೆನ್ನಾಗಿ ನೋಡಿಕೊಂಡು, ಆಕೆಗೆ ಕಷ್ಟ ನೀಡದವರಾಗಿದ್ದರೆ ಸಾಕು. ಮದುವೆ ಮಾಡಿಸುತ್ತೇನೆ” ಎಂದು ಹೇಳಿದ್ದಾರೆ.
ತಾನು ಈ ಹಿಂದೆ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೆ. ಆದರೆ ಆತ ಸ್ಲಿವ್ ಲೆಸ್ ಹಾಕಬೇಡ. ಲಿಪ್ ಸ್ಟಿಕ್ ಹಾಕಬೇಡ, ನೇಲ್ ಪಾಲಿಶ್ ಮಾಡ್ಬೇಡ ಎಂದು ನಿರ್ಬಂಧವನ್ನು ಹಾಕಿದ್ದರು. ಇದನ್ನು ಸಹಿಸದೆ ಬ್ರೇಕಪ್ ಆಯಿತು.
ನಟಿಯಾಗಿ ಒಳ್ಳೆಯ ಹೆಸರು ಮಾಡುವ ಆಸೆಯಿದೆ. ವಿಜಯ್ ದೇವರಕೊಂಡ ಅಂದರೆ ಇಷ್ಟ. ಅವರೊಂದಿಗೆ ಸಿನಿಮಾ ಮಾಡುವ ಆಸೆಯಿದೆ ಎಂದಿದ್ದಾರೆ.
ಇನ್ನು ತಮ್ಮ ಮದುವೆ ಬಗ್ಗೆ ಮಾತನಾಡಿರುವ ಅವರು, ಲವ್ ಮ್ಯಾರೇಜ್ ಆದರೂ, ಆರೇಂಜ್ ಮ್ಯಾರೇಜ್ ಆದರೂ ಸರಿ ಅಮ್ಮ ಹೇಳಿದವರನ್ನು ನಾನು ಮದುವೆ ಆಗುತ್ತೇನೆ. ಅದಕ್ಕೆ ಇನ್ನು ಸಾಕಷ್ಟು ಸಮಯವಿದೆ ನೋಡೋಣ ಎಂದು ಉತ್ತರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.