SSMB29: ಮಹೇಶ್ – ಪ್ರಭಾಸ್ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್ ನೀಡಲಿದ್ದಾರೆ ಹಿರಿಯ ನಟ
Team Udayavani, Jul 8, 2024, 4:15 PM IST
ಹೈದರಾಬಾದ್: ರಾಜಮೌಳಿ – ಮಹೇಶ್ ಬಾಬು ಕಾಂಬಿನೇಷನ್ನಲ್ಲಿ ಬರಲಿರುವ ಪ್ಯಾನ್ ಇಂಡಿಯಾ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಚಿತ್ರದ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ʼSSMB29ʼ ಅನೌನ್ಸ್ ಆದ ದಿನದಿಂದ ಸುದ್ದಿಯಲ್ಲಿದೆ. ʼಆರ್ ಆರ್ ಆರ್ʼ ಬಳಿಕ ರಾಜಮೌಳಿ ಅವರು ಕೈಗೆತ್ತಿಕೊಂಡಿರುವ ಮತ್ತೊಂದು ಮೆಗಾ ಬಜೆಟ್ ವುಳ್ಳ ಸಿನಿಮಾ ಇದಾಗಿದ್ದು, ಮಹೇಶ್ ಬಾಬು 29ನೇ ಚಿತ್ರ ಇದಾದ ಕಾರಣ ಸಿನಿಮಾಕ್ಕೆ ತಾತ್ಕಾಲಿಕವಾಗಿ ʼSSMB29ʼ ಟೈಟಲ್ ಇಡಲಾಗಿದೆ.
ಅಡ್ವೆಂಚರ್ ಜಂಗಲ್, ಸಾಹಸಮಯ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ಸಿನಿಮಾದಲ್ಲಿ ಮಹೇಶ್ ಬಾಬು ಅವರ ಪಾತ್ರವು ರಾಮಾಯಣದ ಹನುಮಂತನಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಈ ಸಿನಿಮಾದಲ್ಲಿ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ವಿಲನ್ ಆಗಿ ನಟಿಸಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿತ್ತು. ಈ ಸುದ್ದಿ ಚರ್ಚೆಯಲ್ಲಿರುವಾಗಲೇ ಸಿನಿಮಾ ಬಗ್ಗೆ ಮತ್ತೊಂದು ಅಪ್ಡೇಟ್ ಹೊರಬಿದ್ದಿದೆ.
ರಾಜಮೌಳಿ ತನ್ನ ಪ್ರತಿ ಸಿನಿಮಾವನ್ನು ಶುರು ಮಾಡುವ ಮುನ್ನ ಸಾಕಷ್ಟು ತಯಾರಿಯನ್ನು ನಡೆಸಿಕೊಳ್ಳುತ್ತಾರೆ. ಅನೇಕ ವರ್ಕ್ ಶಾಪ್ ಗಳನ್ನು ಮಾಡುತ್ತಾರೆ. ಇದೀಗ ಈ ಸಿನಿಮಾಕ್ಕೂ ರಾಜಮೌಳಿ ವರ್ಕ್ ಶಾಪ್ ನಡೆಸಲಿದ್ದು, ಇದಕ್ಕಾಗಿ ಖ್ಯಾತ ಕಾಲಿವುಡ್ ನಟ ನಾಸರ್ ಅವರೊಂದಿಗೆ ರಾಜಮೌಳಿ ವರ್ಕ್ ಶಾಪ್ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ನಾಸರ್ ರಂಗಭೂಮಿ ಕಲಾವಿದರಾಗಿದ್ದು, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಅನುಭವ ಹೊಂದಿರುವುದರಿಂದ ಅವರ ನೇತೃತ್ವದಲ್ಲಿ ವರ್ಕ್ ಶಾಪ್ ವೊಂದನ್ನು ನಡೆಸಲಿದ್ದು, ಇದರಲ್ಲಿ ಮಹೇಶ್ ಬಾಬು ಸೇರಿದಂತೆ ಇತರೆ ಕಲಾವಿದರು ಭಾಗಿಯಾಗಲಿದ್ದಾರೆ. ಈ ಕಲಾವಿದರಿಗೆ ನಾಸರ್ ಅವರು ಕೆಲವೊಂದಿಷ್ಟು ಸಲಹೆ ಹಾಗೂ ನಟನಾ ಅನುಭವದ ಬಗ್ಗೆ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ.
ನಾಸರ್ ಹಾಗೂ ಮಹೇಶ್ ಬಾಬು ಜೊತೆಯಾಗಿ ʼಅತ್ತಾಡು, ʼಪೋಕಿರಿʼ, ʼದೂಕುಡುʼ, ʼಆಗಡುʼ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಸರ್ ರಾಜಮೌಳಿ ಅವರ ʼಬಾಹುಬಲಿʼ ಸಿನಿಮಾದಲ್ಲಿ ಬಿಜ್ಜಳ ದೇವನಾಗಿ ನಟಿಸಿದ್ದರು.
ವಿಜಯೇಂದ್ರ ಪ್ರಸಾದ್ ಈ ಸಿನಿಮಾಕ್ಕೆ ಸ್ಕ್ರಿಪ್ಟ್ ಬರೆದಿದ್ದು, ಬಹುದೊಡ್ಡ ಪ್ರಾಜೆಕ್ಟ್ ಶೀಘ್ರದಲ್ಲಿ ಶುರುವಾಗುವ ಸಾಧ್ಯತೆಯಿದೆ.
“ಇದೊಂದು ವಿಶ್ವ ಪರ್ಯಟನೆಯುಳ್ಳ ಸಾಹಸಮಯವದ ಸಿನಿಮಾ, ಈ ಸಿನಿಮಾ ಪ್ರತಿಯೊಬ್ಬ ಪ್ರೇಕ್ಷಕರನ್ನು ಸೆಳೆಯಲಿದೆ. ಇದು ಜೇಮ್ಸ್ ಬಾಂಡ್ ಅಥವಾ ಇಂಡಿಯಾನ ಜೋನ್ಸ್ ಸಾಹಸದ ಹಾಗೆ ಭಾರತೀಯ ಶೈಲಿಯಲ್ಲಿ ಮೂಡಿಬರುವ ಚಿತ್ರ. ಥಿಯೇಟರ್ ನಲ್ಲಿ ಈ ಸಿನಿಮಾ ಎಲ್ಲರನ್ನೂ ರೋಮಾಂಚನಗೊಳಿಸಲಿದೆ” ಎಂದು ರಾಜಮಾಳಿ ಈ ಹಿಂದೆ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gayathri: ಟಾಲಿವುಡ್ ಖ್ಯಾತ ನಟ ರಾಜೇಂದ್ರ ಪ್ರಸಾದ್ ಪುತ್ರಿ ಹೃದಯಾಘಾತದಿಂದ ನಿಧನ
Kerala: ಮಲಯಾಳಂ ಚಿತ್ರರಂಗದ ಜನಪ್ರಿಯ ವಿಲನ್ ನಟ “ಕೀರಿಕ್ಕಡನ್ ಜೋಸ್” ವಿಧಿವಶ
Jani Master: ಅತ್ಯಾಚಾರ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್ಗೆ ಷರತ್ತುಬದ್ಧ ಜಾಮೀನು
Indian 3: ʼಇಂಡಿಯನ್ -2ʼ ನಿಂದ ಅಪಾರ ನಷ್ಟ; ಮೂರನೇ ಭಾಗ ನೇರವಾಗಿ ಓಟಿಟಿಯಲ್ಲಿ ರಿಲೀಸ್?
Tollywood: ಸಮಂತಾ – ನಾಗ ಚೈತನ್ಯ ಬಗ್ಗೆ ಸಚಿವೆ ಸುರೇಖಾ ಹೇಳಿಕೆಗೆ ಇಡೀ ಟಾಲಿವುಡ್ ಆಕ್ರೋಶ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!
ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್
Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !
Bigg Boss Kannada11: ಬಿಗ್ ಬಾಸ್ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?
Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.