Jr NTR: 2031ರವರೆಗೆ ಯಂಗ್ ಟೈಗರ್ ಫುಲ್ ಬ್ಯುಸಿ..2 ಹೊಸ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್
Team Udayavani, Jul 31, 2024, 6:28 PM IST
ಹೈದರಾಬಾದ್: ʼಆರ್ ಆರ್ ಆರ್ʼ (RRR) ಬಳಿಕ ಜೂ.ಎನ್ ಟಿಆರ್ (Jr NTR) ಅವರಿಗೆ ಬೇಡಿಕೆ ಹೆಚ್ಚಾಗಿದೆ. ಟಾಲಿವುಡ್ ಮಾತ್ರವಲ್ಲದೆ, ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.
ಜೂ.ಎನ್‌ಟಿಆರ್ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ʼದೇವರʼ (Devara: Part One) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವರ್ಷ ಈ ಸಿನಿಮಾ ರಿಲೀಸ್ ಆಗಲಿದೆ. ಇದರೊಂದಿಗೆ ಹೃತಿಕ್ ರೋಷನ್ ಅವರ ʼವಾರ್-2ʼ(War -2) ಸಿನಿಮಾದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.
ಈ ಎರಡು ಸಿನಿಮಾದ ಬಳಿಕ ಜೂ.ಎನ್ ಟಿಆರ್ ಪ್ರಶಾಂತ್ ನೀಲ್(Prashanth Neel) ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾಕ್ಕೆ ಸದ್ಯಕ್ಕೆ ʼಡ್ರ್ಯಾಗನ್ʼ ಎಂದು ಟೈಟಲ್ ಇಡಲಾಗಿದೆ.
ಇದೀಗ ಜೂ.ಎನ್ ಟಿಆರ್ ʼಹಾಯ್ ನನ್ನಾʼ ಖ್ಯಾತಿಯ ಶೌರ್ಯುವ್ (Shouryuv) ಅವರೊಂದಿಗೆ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
“ಶೌರ್ಯುವ್ ಅವರು ಹೇಳಿದ ಸಬ್ಜೆಕ್ಟ್ ಜೂ.ಎನ್ ಟಿಆರ್ ಅವರಿಗೆ ಇಷ್ಟವಾಗಿದೆ. ಅವರು ಚಿತ್ರದ ಸ್ಕ್ರೀನ್ ಪ್ಲೇ ಸ್ವಲ್ಪ ಸುಧಾರಣೆ ಆಗಬೇಕೆಂದು” ಹೇಳಿರುವುದಾಗಿ ವರದಿ ತಿಳಿಸಿದೆ.
“ಜೂ.ಎನ್ ಟಿಆರ್ ʼವಾರ್ -2ʼ, ʼದೇವರ-2ʼ ಹಾಗೂ ಡ್ರ್ಯಾಗನ್ ಶೂಟ್ ಮುಗಿಸಿದ ಬಳಿಕ, 2026ರ ಆರಂಭದಲ್ಲಿ ಶೌರ್ಯುವ್ ಅವರ ಸಿನಿಮಾಕ್ಕೆ ಕೈಹಾಕಲಿದ್ದಾರೆ. ಇದೊಂದು ಹೈ ಆಕ್ಟೇನ್ ಆ್ಯಕ್ಷನ್ ಸಿನಿಮಾವಾಗಲಿದೆ. ಎರಡು ಪಾರ್ಟ್‌ಗಳಲ್ಲಿ ತೆರೆಗೆ ತರುವ ಪ್ಲ್ಯಾನ್ ಇದೆ” ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
“ಸಿನಿಮಾದ ಮೊದಲ ಭಾಗ 2028 ರಲ್ಲಿ ಹಾಗೂ ಸೀಕ್ವೆಲ್ 2031ರಲ್ಲಿ ಬರುವ ಸಾಧ್ಯತೆಯಿದೆ” ಎಂದು ವರದಿ ತಿಳಿಸಿದೆ.
ಇದು ಮಾತ್ರವಲ್ಲದೆ ಯಂಗ್ ಟೈಗರ್ ತಮಿಳು, ತೆಲುಗು, ಕನ್ನಡ ಅಥವಾ ಹಿಂದಿ ಭಾಷೆಯ ಕೆಲ ಸ್ಕ್ರಿಪ್ಟ್ ಗಳನ್ನು ಓದುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.
Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.