ಗಾನಕೋಗಿಲೆ ಎಂ.ಎಸ್.ಸುಬ್ಬುಲಕ್ಷ್ಮಿ ಪಾತ್ರಕ್ಕೆ ಬಣ್ಣ ಹಚ್ಚುತ್ತಾರಾ ಈ ಸೌತ್ ಬೆಡಗಿಯರು?
Team Udayavani, May 22, 2024, 3:33 PM IST
ಬೆಂಗಳೂರು/ಚೆನ್ನೈ: ಒಬ್ಬ ಶ್ರೇಷ್ಠ ವ್ಯಕ್ತಿಯ ಜೀವನಗಾಥೆಯ ಕುರಿತು ಕೃತಿ ಅಥವಾ ಸಿನಿಮಾಗಳು ಬರುವುದು ಹೊಸದೇನಲ್ಲ. ಚಿತ್ರರಂಗದಲ್ಲಿ ಕೆಲ ಬಯೋಪಿಕ್ ಸೂಪರ್ ಹಿಟ್ ಆಗಿದೆ. ಶ್ರೇಷ್ಠ ವ್ಯಕ್ತಿಯ ಜೀವನದ ಸವಾಲು, ಸಾಧನೆ ಹಾಗೂ ಸಂಕಷ್ಟವನ್ನು ದೊಡ್ಡ ಪರದೆಯಲ್ಲಿ ದೃಶ್ಯ ರೂಪದಲ್ಲಿ ತರುವ ಪ್ರಯತ್ನ ಚಿತ್ರರಂಗ ಆಗುತ್ತಿರುತ್ತದೆ.
ಇತ್ತೀಚೆಗಷ್ಟೇ ಸಂಗೀತ ದಿಗ್ಗಜ ಇಳಯರಾಜ ಬಯೋಪಿಕ್ ಅನೌನ್ಸ್ ಆಗಿದೆ. ಇದರಲ್ಲಿ ನಟ ಧನುಷ್ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಪ್ರಧಾನಿ ಮೋದಿ ಅವರ ಬಯೋಪಿಕ್ ಸೆಟ್ಟೇರಲಿದೆ ಎನ್ನುವ ಸುದ್ದಿಯೊಂದು ದಕ್ಷಿಣ ಸಿನಿರಂಗದಲ್ಲಿ ಹರಿದಾಡಿದೆ. ನರೇಂದ್ರ ಮೋದಿಯವರ ಜೀವನಾಧಾರಿತ ಚಿತ್ರದಲ್ಲಿ ಸತ್ಯರಾಜ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇದೀಗ ಮತ್ತೊಂದು ಬಯೋಪಿಕ್ ಬಗ್ಗೆ ಸುದ್ದಿ ಹರಿದಾಡಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಗಾಥೆಯ ಕಥೆ ಸಿನಿಮಾವಾಗಿ ಬರಲಿದೆ.
ಬೆಂಗಳೂರು ಮೂಲದ ಪ್ರೊಡಕ್ಷನ್ ಹೌಸ್ ಮತ್ತು ಪ್ರಸಿದ್ಧ ನಿರ್ದೇಶಕರ ತಂಡವು ಈಗಾಗಲೇ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸವನ್ನು ಪ್ರಾರಂಭಿಸಿದೆ ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ಈ ಹಿಂದೆಯೇ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಕುರಿತಾದ ಸಿನಿಮಾ ಬರಲಿದೆ ಎನ್ನುವ ಮಾತುಗಳು ಹರಿದಾಡಿತ್ತು. ಆದರೆ ಅದರ ಬಗ್ಗೆ ಮತ್ಯಾವ ಅಪ್ಡೇಟ್ಸ್ ಹೊರಬಿದ್ದಿರಲಿಲ್ಲ.
ಇದೀಗ ಚಿತ್ರತಂಡ ಸುಬ್ಬುಲಕ್ಷ್ಮಿ ಅವರ ಪಾತ್ರವನ್ನು ಮಾಡುವ ಕಲಾವಿದರ ಹುಡುಕಾಟದಲ್ಲಿ ನಿರತರಾಗಿದೆ. ದಕ್ಷಿಣ ಭಾರತದಲ್ಲಿ ಸದ್ಯ ಯಶಸ್ಸಿನ ಹಾದಿಯಲ್ಲಿರುವ ನಟಿ ನಯನತಾರಾ, ತ್ರಿಶಾ ಕೃಷ್ಣನ್ ಮತ್ತು ರಶ್ಮಿಕಾ ಮಂದಣ್ಣ ಅವರ ಹೆಸರು ಮುಂಚೂಣಿಯಲ್ಲಿದೆ. ಇದಲ್ಲದೆ ʼಮಹಾನಟಿʼ ಪಾತ್ರವನ್ನು ಮಾಡಿರುವ ಕೀರ್ತಿ ಸುರೇಶ್ ಕೂಡ ಸುಬ್ಬುಲಕ್ಷ್ಮಿ ಅವರ ಪಾತ್ರವನ್ನು ಮಾಡುವ ಲಿಸ್ಟ್ ನಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಸ್ಕ್ರಿಪ್ಟ್ ಕೆಲಸ ಅಂತಿಮ ಹಂತದಲ್ಲಿದೆ. ಸುಬ್ಬುಲಕ್ಷ್ಮಿ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವುದನ್ನು ಚಿತ್ರತಂಡ ನಿರ್ಧರಿಸಲಿದೆ. ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಲು ಯೋಜಿಸಲಾಗಿದೆ ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ಆದರೆ ಪ್ರೂಡಕ್ಷನ್ ಸಂಸ್ಥೆ ಇನ್ನಷ್ಟೇ ಅಧಿಕೃತವಾಗಿ ಚಿತ್ರದ ಬಗ್ಗೆ ಮಾಹಿತಿ ನೀಡಿಬೇಕಿದೆ.
ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ ಅವರು ಎಂ.ಎಸ್.ಸುಬ್ಬುಲಕ್ಷ್ಮಿ ಎಂದೇ ಖ್ಯಾತಿ ಆದವರು. ಶಾಸ್ತ್ರೀಯ ಸಂಗೀತ ಗಾಯಕಿ ಮತ್ತು ನಟಿಯೂ ಆಗಿಯೂ ಗುರುತಿಸಿಕೊಂಡಿದ್ದ ಅವರು 10ನೇ ವಯಸ್ಸಿನಲ್ಲೇ ಗಾಯನಕ್ಕೆ ಕಾಲಿಟ್ಟಿದ್ದರು.
1938 ರಲ್ಲಿ ʼಸೇವಾಸದನ್ʼ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ʼಸಾವಿತ್ರಿʼ ಮತ್ತು ʼಮೀರಾʼ ಸಿನಿಮಾದಲ್ಲಿ ನಟಿಸಿದ್ದರು.
ʼಸುಪ್ರಭಾತಂʼ, ʼಕುರೈ ಒನ್ರುಮ್ ಇಲ್ಲೈʼ, ʼಭಜಗೋವಿಂದಂʼ, ʼವಿಷ್ಣು ಸಹಸ್ರನಾಮʼ, ʼಹನುಮಾನ್ ಚಾಲೀಸಾʼ, ಹಾಗೂ ಇತರೆ ಪ್ರಮುಖ ಭಕ್ತಿಗೀತೆಗಳನ್ನು ಹಾಡಿದ್ದರು.
‘ಭಾರತರತ್ನ’ವನ್ನು ಶಾಸ್ತ್ರೀಯ ಸಂಗೀತಕ್ಕೆ ಮೊದಲಾಗಿ ಪಡೆದವರು ಸುಬ್ಬುಲಕ್ಷ್ಮಿ. 2004 ರಲ್ಲಿ ತನ್ನ 88ನೇ ವಯಸ್ಸಿನಲ್ಲಿ ಅವರು ನಿಧನರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.