OTT Release: ರಜಿನಿಕಾಂತ್ ʼವೆಟ್ಟೈಯನ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Team Udayavani, Oct 31, 2024, 12:40 PM IST
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅಭಿನಯದ ʼವೆಟ್ಟೈಯನ್ʼ (Vettaiyan) ಸಿನಿಮಾ ಥಿಯೇಟರ್‌ನಲ್ಲಿ ಭರ್ಜರಿ ಪ್ರದರ್ಶನ ಕಂಡ ಬಳಿಕ ಇದೀಗ ಓಟಿಟಿಯಲ್ಲಿ ಕಮಾಲ್ ಮಾಡಲು ಡೇಟ್ ಫಿಕ್ಸ್ ಆಗಿದೆ.
ʼಜೈಲರ್ʼ ಸಿನಿಮಾದ ಬಳಿಕ ʼತಲೈವಾʼ ಮತ್ತೆ ಖಾಕಿ ತೊಟ್ಟು ಮಿಂಚಿದ್ದಾರೆ. ಎನ್ ಕೌಂಟರ್ ಸ್ಪೆಷೆಲಿಸ್ಟ್ ಆಗಿ ರಜಿನಿ ಪಾಪಿಗಳನ್ನು ಬೆನ್ನಟ್ಟಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು ರಜಿನಿ ಅವರ ಖದರ್ ಹಾಗೂ ಫಾಹದ್, ಅಮಿತಾಭ್ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.
ಅ.10 ರಂದು ಥಿಯೇಟರ್‌ಗೆ ಕಾಲಿಟ್ಟ ʼವೆಟ್ಟೈಯನ್ʼ ಥಿಯೇಟರ್‌ನಲ್ಲಿ ಕೆಲ ವಾರ ಭರ್ಜರಿ ಪ್ರದರ್ಶನ ಕಂಡಿದೆ. ಇದೀಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಸಿನಿಮಾದ ಓಟಿಟಿ ರಿಲೀಸ್ ಡೇಟ್ ರಿವೀಲ್ ಮಾಡಿದ್ದು, ರಜಿನಿ ಅಭಿಮಾನಿಗಳಿಗೆ ಬೆಳಕಿನ ಹಬ್ಬಕ್ಕೆ ಸ್ಪೆಷೆಲ್ ಕೊಡುಗೆ ನೀಡಿದೆ.
ಇದೇ ನವೆಂಬರ್ 8ರಿಂದ ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸ್ಟ್ರೀಮ್ ಆಗಲಿದೆ.
ಟಿಜೆ ಜ್ಞಾನವೇಲ್ ನಿರ್ದೇಶನದಲ್ಲಿ ಬಂದ ʼವೆಟ್ಟೈಯನ್ʼ ವರ್ಲ್ಡ್ ವೈಡ್ 250 ಕೋಟಿ ರೂ. ಗಳಿಕೆ ಕಂಡಿತು. ʼವೆಟ್ಟೈಯನ್ʼ ಸಿನಿಮಾ ಪ್ರೀಕ್ವೆಲ್ ಆಗಿ ತೆರೆ ಕಾಣಲಿದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
View this post on Instagram
ರಜಿನಿಕಾಂತ್, ಅಮಿತಾಬ್ ಬಚ್ಚನ್, ಫಾಹದ್ ಫಾಸಿಲ್, ರಾಣಾ ದಗ್ಗುಬಾಟಿ ಜತೆ ಸಿನಿಮಾದಲ್ಲಿ ಮಂಜು ವಾರಿಯರ್, ಕಿಶೋರ್, ರಿತಿಕಾ ಸಿಂಗ್, ದುಶಾರ ವಿಜಯನ್, ಜಿಎಂ ಸುಂದರ್, ಅಭಿರಾಮಿ, ರೋಹಿಣಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2025ರ ಸಿನಿಮಾ, ಸಿರೀಸ್, ಶೋಗಳನ್ನು ಅನೌನ್ಸ್ ಮಾಡಿದ ನೆಟ್‌ಫ್ಲಿಕ್ಸ್ – ಇಲ್ಲಿದೆ ಪಟ್ಟಿ
ರಿಷಬ್ ʼKantara Chapter 1ʼ ವಾರ್ ಸೀಕ್ವೆನ್ಸ್ ಶೂಟ್‌ಗೆ 500ಕ್ಕೂ ಹೆಚ್ಚು ಫೈಟರ್ಸ್
Panaji: ನೇಣುಬಿಗಿದ ಸ್ಥಿತಿಯಲ್ಲಿ “ಕಬಾಲಿ’ ನಿರ್ಮಾಪಕನ ಮೃತದೇಹ ಪತ್ತೆ
ಬೆಂಗಳೂರಿನಲ್ಲಿ ʼಟಾಕ್ಸಿಕ್ʼ ಶೂಟ್: ಒಂದೇ ಫ್ರೇಮ್‌ನಲ್ಲಿ ಕಾಣಿಸಲಿದ್ದಾರೆ ನಾಲ್ವರು ನಟಿಯರು
Kannappa: ವಿಷ್ಣು ಮಂಚು ʼಕಣ್ಣಪ್ಪʼ ಚಿತ್ರಕ್ಕೆ ʼರುದ್ರʼನಾದ ಪ್ರಭಾಸ್; ಫಸ್ಟ್ ಲುಕ್ ಔಟ್