Vettaiyan: ಈ ದಿನ ಓಟಿಟಿಗೆ ಬರಲಿದೆ ರಜಿನಿ ʼವೆಟ್ಟೈಯನ್ʼ?; ಇದುವರೆಗಿನ ಗಳಿಕೆ ಎಷ್ಟು?
Team Udayavani, Oct 21, 2024, 2:39 PM IST
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅಭಿನಯದ ʼವೆಟ್ಟೈಯನ್ʼ (Vettaiyan) ಸಿನಿಮಾಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರಜಿನಿಕಾಂತ್ ಅವರನ್ನು ಖಾಕಿ ಅವತಾರದಲ್ಲಿ ನೋಡಿ ʼತಲೈವಾʼ ಫ್ಯಾನ್ಸ್ ಗಳು ಖುಷ್ ಆಗಿದ್ದಾರೆ. ಅ.10 ರಂದು ಥಿಯೇಟರ್‌ಗೆ ಕಾಲಿಟ್ಟ ʼವೆಟ್ಟೈಯನ್ʼ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಈ ನಡುವೆ ಸಿನಿಮಾದ ಓಟಿಟಿ ರಿಲೀಸ್ ಬಗ್ಗೆ ಚರ್ಚೆ ಶುರುವಾಗಿದೆ.
ಕ್ರೈಮ್ ಇನ್ವೆಸ್ಟಿಗೇಷನ್ ಡ್ರಾಮಾ ʼವೆಟ್ಟೈಯನ್ʼ ಸಿನಿಮಾ ಸದ್ಯ ಇಂಡಿಯನ್ ಬಾಕ್ಸ್ ಆಫೀಸ್‌ನಲ್ಲಿ 134 ಕೋಟಿ ಗಳಿಸಿದೆ. ದಿನಕಳೆಯುತ್ತಿದ್ದಂತೆ ಸಿನಿಮಾದ ಗಳಿಕೆ ಕೂಡ ಹೆಚ್ಚಾಗುತ್ತಿದೆ.
ಈ ನಡುವೆ ʼವೆಟ್ಟೈಯನ್ʼ ಓಟಿಟಿ ರಿಲೀಸ್ ಬಗ್ಗೆ ಮಾತು ಶುರುವಾಗಿದೆ. ಈಗಾಗಲೇ ದುಬಾರಿ ಮೊತ್ತಕ್ಕೆ ಅಮೇಜಾನ್ ಪ್ರೈಮ್ ಸಿನಿಮಾದ ಓಟಿಟಿ ರೈಟ್ಸ್ ಖರೀದಿಸಿದೆ. ಮೂಲಗಳ ಪ್ರಕಾರ ಸಿನಿಮಾ ರಿಲೀಸ್ ಆಗಿ 4 ವಾರದ ಬಳಿಕ ಓಟಿಟಿಗೆ ʼ ವೆಟ್ಟೈಯನ್ʼ ಬರಲಿದೆ ಎನ್ನಲಾಗಿದೆ.
ನವೆಂಬರ್ 7 ಅಥವಾ 9ಕ್ಕೆ ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ ಎಂದು ವರದಿಯಾಗಿದೆ. ಚಿತ್ರತಂಡ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.
ಇನ್ನೊಂದೆಡೆ ಪೊಲೀಸ್ ಎನ್ ಕೌಂಟರ್ ಸುತ್ತ ಸಾಗುವ ʼ ವೆಟ್ಟೈಯನ್ʼ ಪ್ರೀಕ್ವೆಲ್ ಬರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಪೊಲೀಸ್ ಎನ್‌ಕೌಂಟರ್ ಹತ್ಯೆಯ ವಿಷಯದಿಂದ ಆಳವಾಗಿ ಪ್ರೇರಿತವಾಗಿದ್ದೇನೆ. ಇದರ ಬಗ್ಗೆ ಪ್ರೀಕ್ವೆಲ್‌ನಲ್ಲಿ ಇನ್ನಷ್ಟು ಅನ್ವೇಷಿಸಲು ಬಯಸುತ್ತೇನೆ ಎಂದು ನಿರ್ದೇಶಕ ಜ್ಞಾನವೇಲ್ ಇತ್ತೀಚೆಗೆ ಮಾಧ್ಯಮದವರ ಜತೆ ಮಾತನಾಡುತ್ತಾ ಹೇಳಿದ್ದರು.
ರಜಿನಿಕಾಂತ್, ಅಮಿತಾಬ್ ಬಚ್ಚನ್, ಫಾಹದ್ ಫಾಸಿಲ್, ರಾಣಾ ದಗ್ಗುಬಾಟಿ ಜತೆ ಸಿನಿಮಾದಲ್ಲಿ ಮಂಜು ವಾರಿಯರ್, ಕಿಶೋರ್, ರಿತಿಕಾ ಸಿಂಗ್, ದುಶಾರ ವಿಜಯನ್, ಜಿಎಂ ಸುಂದರ್, ಅಭಿರಾಮಿ, ರೋಹಿಣಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mollywood: 13 ವರ್ಷದ ಬಳಿಕ ರೀ- ರಿಲೀಸ್ ಆಗಲಿದೆ ಸೂಪರ್ ಹಿಟ್ ʼಉಸ್ತಾದ್ ಹೊಟೇಲ್ʼ
Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್ ಡ್ರಾ
Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್
Contracter Case: ಸಚಿನ್ ಪಾಂಚಾಳ್ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ
Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.