![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 19, 2024, 12:40 PM IST
ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರು ವಿಡಿಯೋವೊಂದಕ್ಕೆ ಮಾಡಿರುವ ರಿಪ್ಲೈವೊಂದು ವೈರಲ್ ಆಗಿದೆ.
ʼಅರ್ಜುನ್ ರೆಡ್ಡಿʼ ನಟನಿಗೆ ದೊಡ್ಡ ಅಭಿಮಾನಿಗಳ ವಲಯವಿದೆ. ಇದರಲ್ಲಿ ಯುವ ಜನತೆಯೇ ಹೆಚ್ಚು. ಅಭಿಮಾನಿಗಳು ತನ್ನ ನೆಚ್ಚಿನ ನಟ- ನಟಿಯರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು. ಅವರ ಆಟೋಗ್ರಾಫ್ ಪಡೆದುಕೊಳ್ಳಬೇಕೆನ್ನುವ ಆಸೆಗಳನ್ನು ಹೊಂದಿರುತ್ತಾರೆ. ಆದರೆ ಇಲ್ಲಿಬ್ಬರು ಯುವತಿಯರು ವಿಜಯ್ ದೇವರಕೊಂಡ ಬಳಿ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಆ ಬೇಡಿಕೆಯ ವಿಡಿಯೋ ವೈರಲ್ ಆಗಿದೆ.
ಇಬ್ಬರು ಯುವತಿಯರು ವಿಡಿಯೋವೊಂದನ್ನು ಹಾಕಿದ್ದು, ಅದರಲ್ಲಿ “ವಿಜಯ್ ದೇವರಕೊಂಡ ಅವರು ಈ ವಿಡಿಯೋಗೆ ಕಮೆಂಟ್ ಮಾಡಿದರೆ ನಾವು ಪರೀಕ್ಷೆಗೆ ಸಿದ್ದತೆಯನ್ನು ಆರಂಭಿಸುತ್ತೇವೆ” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ 3 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.
ಇದಕ್ಕೆ ಕಾರಣ ನಟ ವಿಜಯ್ ದೇವರಕೊಂಡ ಅವರು ಕೊಟ್ಟ ಪ್ರತಿಕ್ರಿಯೆ. ಹೌದು ಯುವತಿಯ ಬೇಡಿಕೆಗೆ ಸ್ಪಂದಿಸಿದ ದೇವರಕೊಂಡ ಅವರು, “ಪರೀಕ್ಷೆಯಲ್ಲಿ 90% ದಷ್ಟು ಅಂಕಗಳಿಸಿ, ನಾನು ನಿಮ್ಮನ್ನು ಭೇಟಿ ಆಗುತ್ತೇನೆ” ಎಂದು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸದ್ಯ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
View this post on Instagram
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.