Telugu; ಪಾತ್ರದ ಕುರಿತು ಆಕ್ರೋಶ: ನಟನಿಗೆ ಮಹಿಳೆಯಿಂದ ಚಿತ್ರ ಮಂದಿರದಲ್ಲೇ ಹಲ್ಲೆ!!
ಪಾತ್ರವನ್ನು ಕಂಡು ಭಾವೋದ್ರೇಕಕ್ಕೊಳಗಾಗಿ ಕೃತ್ಯ!!...ವಿಡಿಯೋ ವೈರಲ್
Team Udayavani, Oct 26, 2024, 5:39 PM IST
ಹೈದರಾಬಾದ್: ಇತ್ತೀಚೆಗೆ ಬಿಡುಗಡೆಯಾದ ‘ಲವ್ ರೆಡ್ಡಿ’ ಚಿತ್ರದ ಥಿಯೇಟ್ರಿಕಲ್ ಸ್ಕ್ರೀನಿಂಗ್ ವೇಳೆ ತೆಲುಗು ನಟ ಎನ್.ಟಿ.ರಾಮಸ್ವಾಮಿ ಅವರಿಗೆ ಮಹಿಳೆಯೊಬ್ಬರು ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಕಾರಣವಾಗಿದ್ದು ಅವರು ಮಾಡಿದ ನೆಗೆಟಿವ್ ಶೇಡ್ ಇದ್ದ ಪಾತ್ರ!.
ರಾಮಸ್ವಾಮಿ ಅವರು ಖಳ ಸ್ವರೂಪದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಂಜನ್ ರಾಮಚಂದ್ರ ಮತ್ತು ಶ್ರಾವಣಿ ಕೃಷ್ಣವೇಣಿ ಜೋಡಿಯ ‘ಲವ್ ರೆಡ್ಡಿ’ ಚಿತ್ರತಂಡವು ಥಿಯೇಟರ್‌ಗೆ ಭೇಟಿ ನೀಡಿದಾಗ, ಖಳನಟನನ್ನು ನೋಡಿ ಕುಪಿತಳಾದ ಮಹಿಳೆ, ಆನ್-ಸ್ಕ್ರೀನ್ ಚಿತ್ರಣವನ್ನು ದ್ವೇಷಿಸಿ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿಯೇ ಬಿಟ್ಟಿದ್ದಾಳೆ.ಸದ್ಯ ಚಿತ್ರ ಅಷ್ಟೇನೂ ಸದ್ದು ಮಾಡದಿದ್ದರೂ ವಿಡಿಯೋ ಮಾತ್ರ ವೈರಲ್ ಆಗುತ್ತಿದೆ.
ನಟ ಎನ್‌ಟಿ ರಾಮಸ್ವಾಮಿ ಅವರ ಪಾತ್ರ ಮಗಳ ಪಾತ್ರಧಾರಿಗೆ ಕಲ್ಲಿನಿಂದ ತಲೆಗೆ ಹೊಡೆಯುವ ದೃಶ್ಯವಿದೆ. ಇದರಿಂದ ಕುಪಿತಳಾಗಿದ್ದ ಮಹಿಳೆ, ಚಿತ್ರದ ಪಾತ್ರವರ್ಗವು ಥಿಯೇಟರ್‌ನಲ್ಲಿ ಪ್ರೇಕ್ಷಕರನ್ನು ಭೇಟಿಯಾಗಲು ಬಂದಿದ್ದ ವೇಳೆ ಆಕ್ರೋಶಿತಳಾಗಿ ಹಲ್ಲೆ ಮಾಡಿಯೇ ಬಿಟ್ಟಿದ್ದಾಳೆ. ಸಹನಟರು ರಾಮಸ್ವಾಮಿಯ ರಕ್ಷಣೆಗೆ ಬಂದರೂ ಮಹಿಳೆ ಪದೇ ಪದೇ ರಾಮಸ್ವಾಮಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ನಟ ರಾಮ ಸ್ವಾಮಿ ಅವರು ಏನಾಗುತ್ತಿದೆ ಎಂದು ತಿಳಿಯದೆ ಆಘಾತಕ್ಕೊಳಗಾದರು. ಹಠಾತ್ ಮತ್ತು ಅನಗತ್ಯ ದಾಳಿಯಿಂದ ಅಸಮಾಧಾನಗೊಂಡಿದ್ದಾರೆ.
Emotional Viewer Attacks Actor NT Ramaswamy After Watching Love Reddy
An emotional viewer reportedly attacked actor NT Ramaswamy after watching the intense scenes in Love Reddy. Some believe this was staged as part of the movie’s promotion, while others claim it was real.… pic.twitter.com/CGZZ2d3NbH
— TopTeluguNews (@TheSPRWorld) October 25, 2024
ವಿಡಿಯೋದಲ್ಲಿ ಕಂಡು ಬಂದಂತೆ , ಚಿತ್ರದಲ್ಲಿ ಪ್ರೇಮಿಗಳನ್ನು ಪ್ರತ್ಯೇಕಿಸುವ ಪಾತ್ರದ ಉದ್ದೇಶದ ಬಗ್ಗೆ ಮಹಿಳೆ ಪ್ರಶ್ನೆಗಳನ್ನು ಎತ್ತಿದ್ದನ್ನು ಕಾಣಬಹುದು.’ಲವ್ ರೆಡ್ಡಿ’ ಸ್ಮರಣ್ ರೆಡ್ಡಿ ಬರೆದು ನಿರ್ದೇಶಿಸಿದ ರೋಮ್ಯಾಂಟಿಕ್ ಚಲನಚಿತ್ರವಾಗಿದೆ. ಅಕ್ಟೋಬರ್ 18 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆಯನ್ನು ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.