Kannappa: ಇದೇ ವರ್ಷ ತೆರೆಗೆ ಬರಲಿದೆ ವಿಷ್ಣು ಮಂಚು ಪ್ಯಾನ್ ಇಂಡಿಯಾ ʼಕಣ್ಣಪ್ಪʼ
Team Udayavani, Jul 18, 2024, 7:04 PM IST
ಹೈದರಾಬಾದ್: ಟಾಲಿವುಡ್ ನಟ ವಿಷ್ಣು ಮಂಚು (Vishnu Manchu) ಅವರ ಬಿಗ್ ಬಜೆಟ್, ಪ್ಯಾನ್ ಇಂಡಿಯಾ ʼಕಣ್ಣಪ್ಪʼ (Kannappa) ಸಿನಿಮಾ ಯಾವ ತಿಂಗಳಿನಲ್ಲಿ ರಿಲೀಸ್ ಆಗಲಿದೆ ಎನ್ನುವುದನ್ನು ಚಿತ್ರತಂಡ ಅನೌನ್ಸ್ ಮಾಡಿದೆ. ಆ ಮೂಲಕ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.
ʼಕಣ್ಣಪ್ಪʼ ಸಿನಿಮಾದಲ್ಲಿ ದಕ್ಷಿಣದ ಖ್ಯಾತ ಕಲಾವಿದರು ನಟಿಸಲಿದ್ದಾರೆ ಎನ್ನುವ ವಿಚಾರದಿಂದ ಆರಂಭದಿಂದಲೇ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೇ ವರ್ಷದ ಮೇ ತಿಂಗಳಿನಲ್ಲಿ ಪೌರಾಣಿಕ ಕಥಾಹಂದರದ ʼಕಣ್ಣಪ್ಪʼ ಚಿತ್ರದ ಟೀಸರ್ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದಲ್ಲಿ ರಿಲೀಸ್ ಆಗಿ, ಆ ಬಳಿಕ ಭಾರತದಲ್ಲಿ ರಿಲೀಸ್ ಆಗಿತ್ತು.
ಗುರುವಾರ(ಜು.18ರಂದು) ನಟ ವಿಷ್ಣು ಮಂಚು ʼಕಣ್ಣಪ್ಪʼ ಸಿನಿಮಾ 2024ರ ಡಿಸೆಂಬರ್ ತಿಂಗಳಿನಲ್ಲಿ ರಿಲೀಸ್ ಆಗಲಿದೆ ಎಂದು ʼಎಕ್ಸ್ʼ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಿರುತೆರೆಯಲ್ಲಿ ʼಮಹಾಭಾರತʼವನ್ನು ನಿರ್ದೇಶನ ಮಾಡಿರುವ ಮುಕೇಶ್ ಕುಮಾರ್ ʼಕಣ್ಣಪ್ಪʼವನ್ನು ನಿರ್ದೇಶನ ಮಾಡಲಿದ್ದಾರೆ.
ಈಗಾಗಲೇ ನ್ಯೂಜಿಲೆಂಡ್ ನಲ್ಲಿ ಚಿತ್ರದ ಕೆಲ ಭಾಗದ ಶೂಟಿಂಗ್ ನಡೆದಿದೆ. ಅವಾ ಎಂಟರ್‌ಟೈನ್‌ಮೆಂಟ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ನಿರ್ಮಿಸಿರುವ ಈ ಚಿತ್ರಕ್ಕೆ ಮಣಿ ಶರ್ಮಾ ಮತ್ತು ಸ್ಟೀಫನ್ ದೇಸಿ ಸಂಗೀತ ಸಂಯೋಜನೆ ಮಾಡಲಿದ್ದಾರೆ.
ದಕ್ಷಿಣ ಭಾರತದ ಖ್ಯಾತ ಕಲಾವಿದರಾಗಿರುವ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಮತ್ತು ಕಾಜಲ್ ಅಗರ್ವಾಲ್ ಸೇರಿದಂತೆ ಮೋಹನ್ ಬಾಬು, ಶರತ್‌ಕುಮಾರ್, ಮುಖೇಶ್ ರಿಷಿ, ಬ್ರಹ್ಮಾನಂದಂ, ಮಧು ಮತ್ತು ಪ್ರೀತಿ ಮುಕುಂದನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ʼಕಣ್ಣಪ್ಪʼ ರಿಲೀಸ್ ಡೇಟ್ ಇನ್ನೂ ಅನೌನ್ಸ್ ಆಗಿಲ್ಲ. ಡಿಸೆಂಬರ್ ತಿಂಗಳಿನಲ್ಲಿ ಟಾಲಿವುಡ್ ನಲ್ಲಿ ʼಪುಷ್ಪ-2ʼ ,ʼಗೇಮ್ ಚೇಂಜರ್ʼ ʼಹರಿಹರ ವೀರ ಮಲ್ಲುʼ ಕೂಡ ತೆರೆ ಕಾಣಲಿದೆ ಎನ್ನಲಾಗುತ್ತಿದೆ.
December 2024 #Kannappa 🙏 #HarHarMahadev
— Vishnu Manchu (@iVishnuManchu) July 18, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Video: ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.