Thalapathy Vijay: ಕೊನೆಯ ಸಿನಿಮಾಕ್ಕೆ ವಿಜಯ್ ಪಡೆಯುವ ಸಂಭಾವನೆ ಎಷ್ಟು?
ಶಾರುಖ್,ರಜಿನಿಗಿಂತಲೂ ದುಬಾರಿಯಾದ ʼಗೋಟ್ʼ ವಿಜಯ್
Team Udayavani, Sep 14, 2024, 5:45 PM IST
ಚೆನ್ನೈ: ದಳಪತಿ ವಿಜಯ್(Thalapathy Vijay) ಅವರ ʼಗೋಟ್ʼ ಸಿನಿಮಾಕ್ಕಾಗಿ ದೊಡ್ಡ ಮಟ್ಟದ ಸಂಭಾವನೆ ಪಡೆದ ವಿಚಾರ ಕಾಲಿವುಡ್ ನಲ್ಲಿ ಸುದ್ದಿಯಾಗಿತ್ತು. ಇದೀಗ ಅವರ ಕೊನೆಯ ಸಿನಿಮಾವೆಂದು ಹೇಳಲಾಗುತ್ತಿರುವ ‘Thalapathy 69’ ಗಾಗಿ ಪಡೆಯುವ ಸಂಭಾವನೆ ಕೇಳಿ ಕಾಲಿವುಡ್ ಶಾಕ್ ಆಗಿದೆ.
ರಾಜಕೀಯ ರಂಗಕ್ಕೆ ಪ್ರವೇಶ ಆಗಿರುವ ನಟ ದಳಪತಿ ವಿಜಯ್ 2026ರ ತಮಿಳುನಾಡು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಒಂದು ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾಕ್ಕೆ ಕನ್ನಡದ ಪ್ರತಿಷ್ಠಿತ ‘ಕೆವಿಎನ್ ಪ್ರೊಡಕ್ಷನ್ಸ್’ (Kvn Productions) ಬಂಡವಾಳ ಹಾಕಲಿದೆ.
ಇದನ್ನೂ ಓದಿ: Thalapathy 69: ಕ್ರೀಡಾ ಜ್ಯೋತಿ ಹಿಡಿದ ದಳಪತಿ; 69ನೇ ಸಿನಿಮಾದ ಸ್ಪೆಷೆಲ್ ಅಪ್ಡೇಟ್ ಔಟ್
ʼThalapathy 69’ ಸಿನಿಮಾವನ್ನು ಎಚ್ ವಿನೋದ್ (H. Vinoth) ಅವರು ನಿರ್ದೇಶನ ಮಾಡಲಿದ್ದು, ಕೈಯಲ್ಲಿ ಕ್ರೀಡಾ ಜ್ಯೋತಿಯೊಂದನ್ನು ಹಿಡಿದಿರುವ ಪೋಸ್ಟರ್ ರಿಲೀಸ್ ಮಾಡಿ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಲಾಗಿದೆ. ಪ್ರಜಾಪ್ರಭುತ್ವದ ಜ್ಯೋತಿ ಹೊತ್ತವರು 2025ಕ್ಕೆ ಆಗಮಿಸುತ್ತಿದ್ದಾರೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. 2025ರ ಅಕ್ಟೋಬರ್ ನಲ್ಲಿ ಸಿನಿಮಾ ಬರಲಿದೆ ಎಂದು ಹೇಳಲಾಗಿದೆ. ಆದರೆ ಸಿನಿಮಾದ ಟೈಟಲ್ ರಿವೀಲ್ ಮಾಡಿಲ್ಲ.
ಈ ಸಿನಿಮಾಕ್ಕೆ ದಳಪತಿ ಎಷ್ಟು ಸಂಭಾವನೆ ಪಡೆಯಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ.
ʼಗೋಟ್ʼ ಗಾಗಿ ವಿಜಯ್ 200 ಕೋಟಿ ರೂ. ಸಂಭಾವನೆ ಪಡೆದಿದ್ದರು. ಅವರು ತನ್ನ 69ನೇ ಸಿನಿಮಾಕ್ಕಾಗಿ ಸಂಭಾವನೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಬರೋಬ್ಬರಿ 275 ಕೋಟಿ ರೂ. ಪಡೆಯಲಿದ್ದಾರೆ ಎಂದು ʼಟೈಮ್ಸ್ ನೌʼ ವರದಿ ತಿಳಿಸಿದೆ.
ಆ ಮೂಲಕ ಅವರು ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಆಗಲಿದ್ದಾರೆ. ಶಾರುಖ್ ಖಾನ್, ರಜಿನಿಕಾಂತ್ ಅವರನ್ನೂ ಮೀರಿಸಲಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಈ ವಿಚಾರ ಅಧಿಕೃತವಾಗಿಲ್ಲದಿದ್ದರೂ ಈ ಬಗ್ಗೆ ಕಾಲಿವುಡ್‌ನಲ್ಲಿ ಮಾತುಗಳು ಜೋರಾಗಿಯೇ ಹರಿದಾಡುತ್ತಿದೆ.
ಅನಿರುದ್ಧ್ ರವಿಚಂದರ್ ಸಿನಿಮಾಕ್ಕೆ ಮ್ಯೂಸಿಕ್ ನೀಡಲಿದ್ದಾರೆ. ದಳಪತಿ ವಿಜಯ್ ಅವರ ರಾಜಕೀಯ ಜೀವನಕ್ಕೆ ಹತ್ತಿರವಾಗುವ ಸಿನಿಮಾವಿದು ಎನ್ನಲಾಗಿದೆ.
We are beyond proud & excited to announce that our first Tamil film is #Thalapathy69, directed by the visionary #HVinoth, with music by the sensational Rockstar @anirudhofficial 🔥
Super happy to collaborate with the one and only #Thalapathy @actorvijay ♥️
The torch bearer of… pic.twitter.com/Q2lEq7Lhfa
— KVN Productions (@KvnProductions) September 14, 2024
ಎಚ್ ವಿನೋದ್ ನಿರ್ದೇಶನದ ʼThalapathy 69’ ಸಿನಿಮಾದಲ್ಲಿ ಬಾಬಿ ಡಿಯೋಲ್ (Bobby Deol) ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಪೂಜಾ ಹೆಗ್ಡೆ, ಮೋಹನ್ ಲಾಲ್ ಮತ್ತು ಮಮಿತಾ ಬೈಜು ಮುಂತಾದವರು ನಟಿಸಲಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
Pushpa 2: ಕಾಲ್ತುಳಿತದ ಗಾಯಾಳು ಬಾಲಕನ ಭೇಟಿಯಾದ ಅಲ್ಲು ಅರ್ಜುನ್
Car Crash: ಕಾರು ರೇಸ್ ತರಬೇತಿ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತ!
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.