Yatra 2 ರಿಲೀಸ್: ಥಿಯೇಟರ್‌ನಲ್ಲಿ ಪವನ್ ಕಲ್ಯಾಣ್- ವೈಎಸ್ ಜಗನ್ ಅಭಿಮಾನಿಗಳ ನಡುವೆ ಮಾರಾಮಾರಿ
Team Udayavani, Feb 8, 2024, 6:25 PM IST
ಹೈದರಾಬಾದ್: ಟಾಲಿವುಡ್ ನಲ್ಲಿ ಪ್ರೇಕ್ಷಕರ ಮನಗೆದ್ದು, ರಾಜಕೀಯವಾಗಿಯೂ ಸದ್ದು ಮಾಡಿದ್ದ ʼಯಾತ್ರಾʼ ಸಿನಿಮಾದ ಸೀಕ್ವೆಲ್ ಗುರುವಾರ(ಫೆ.8 ರಂದು) ರಿಲೀಸ್ ಆಗಿದೆ. ನಿರೀಕ್ಷೆಯಂತೆ ಆಂಧ್ರದ ಹಲವು ಕಡೆ ಸಿನಿಮಾಕ್ಕೆ ಭರ್ಜರಿ ಆರಂಭ ಸಿಕ್ಕಿದೆ.
ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಥಿಯೇಟರ್ ವೊಂದರಲ್ಲಿ ಅಭಿಮಾನಿಗಳ ನಡುವೆ ವಾಗ್ವಾದ ಉಂಟಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟ ಕಂ ರಾಜಕಾರಣಿ ಪವನ್ ಕಲ್ಯಾಣ್ ಹಾಗೂ ಆಂಧ್ರ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಅಭಿಮಾನಿಗಳ ನಡುವೆ ಈ ಜಗಳ ನಡೆದಿದೆ.
ಹೈದರಾಬಾದ್‌ನ ಪ್ರಸಾದ್ ಥಿಯೇಟರ್‌ನಲ್ಲಿ ಈ ಮಾರಾಮಾರಿ ನಡೆದಿದೆ. ಎರಡೂ ಕಡೆ ಅಭಿಮಾನಿಗಳ ನಡುವೆ ವಾಗ್ವಾದ ಉಂಟಾಗಿದೆ. ಪರಿಣಾಮ ಒಬ್ಬರನ್ನೊಬ್ಬರು ದೂಡಿಕೊಂಡಿದ್ದಾರೆ. ಗಲಾಟೆಗೆ ಏನು ಕಾರಣ ಎನ್ನುವುದು ಇದುವರೆಗೆ ತಿಳಿದು ಬಂದಿಲ್ಲ.
ರಾಜಕೀಯವಾಗಿ ಜಗನ್ ಹಾಗೂ ಪವನ್ ಕಲ್ಯಾಣ್ ನಡುವೆ ಪೈಪೋಟಿ ಇದೆ. ಈ ಎರಡು ನಾಯಕರ ನಡುವಿನ ಪೈಪೋಟಿ ಆಂಧ್ರ ರಾಜಕೀಯದಲ್ಲಿ ಹೊಸದೇನಲ್ಲ.
ಮಹಿ ವಿ ರಾಘವ್ ನಿರ್ದೇಶನದಲ್ಲಿ 2019 ರಲ್ಲಿ ʼಯಾತ್ರಾʼ ಸಿನಿಮಾ ಬಂದಿತ್ತು. ಈ ಸಿನಿಮಾ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರ ಜೀವನವನದ ಕಥೆಯನ್ನೊಳಗೊಂಡಿದೆ. ಈಗ ಬಂದಿರುವ ʼಯಾತ್ರಾ-2ʼ ಸಿನಿಮಾ ಆಂಧ್ರ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಬಯೋಪಿಕ್ ಆಗಿದೆ. ಈ ಸಿನಿಮಾದಲ್ಲಿ ಜೀವಾ ಮತ್ತು ಮಮ್ಮುಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.
ಈ ಎರಡೂ ಸಿನಿಮಾಗಳು ಆಂಧ್ರಪ್ರದೇಶದ ರಾಜಕೀಯದಲ್ಲಿನ ಈ ಪ್ರಭಾವಿ ವ್ಯಕ್ತಿಗಳ ರಾಜಕೀಯ ಪ್ರಯಾಣ ಮತ್ತು ಜೀವನದ ಪ್ರಮುಖ ಘಟನೆಗಳನ್ನು ಒಳಗೊಂಡಿದ್ದು, ರಾಜಕೀಯವಾಗಿಯೂ ಸದ್ದು ಮಾಡಿದೆ.
ಈ ನಡುವೆ 2012 ರಲ್ಲಿ ತೆರೆಕಂಡು ರಾಜಕೀಯವಾಗಿ ಭಾರೀ ವಿವಾದಕ್ಕೆ ಕಾರಣವಾಗಿದ್ದ, ಪವನ್ ಕಲ್ಯಾಣ್ ಅವರ ʼಕ್ಯಾಮೆರಾಮ್ಯಾನ್ ಗಂಗತೋ ರಾಂಬಾಬುʼ ಸಿನಿಮಾವನ್ನು ಆಂಧ್ರದ ಕೆಲವಡೆ ಮರು ಬಿಡುಗಡೆ ಮಾಡಲಾಗಿದೆ. ಈ ಸಿನಿಮಾ ಅಂದು ಸಿಎಂ ವೈಎಸ್ ರಾಜಶೇಖರ ರೆಡ್ಡಿ ಅವರ ಅಧಿಕಾರದ ಅವಧಿಯಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಇಲ್ಲಿ ಹೇಳಿದ ಕೆಲ ವಿಚಾರಗಳು ಸಿಎಂ ಅವರಿಗೆ ಅಪಮಾನ ಮಾಡಿದ್ದಂತೆ ಇತ್ತು ಎನ್ನುವ ಕಾರಣಕ್ಕೆ ಸಿನಿಮಾ ಬ್ಯಾನ್ ಗೆ ಕೂಗು ಕೇಳಿ ಬಂದಿತ್ತು. ಕೊನೆಗೂ ಒಂದಷ್ಟು ಸೀನ್ ಹಾಗೂ ಡೈಲಾಗ್ ಗಳ ಕಡಿತದಿಂದ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು.
Reportedly, Fans of #YSJagan and #PawanKalyan clashed during the screening of #Yatra2 at Prasads, Hyderabad. pic.twitter.com/USWM6BsUxK
— Gulte (@GulteOfficial) February 8, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.