Mollywood: ಚಿತ್ರದ ಬಗ್ಗೆ ನೆಗೆಟಿವ್ ರಿವ್ಯೂ ಕೊಟ್ಟ ಯುವಕನಿಗೆ ಖ್ಯಾತ ನಟನಿಂದ ಬೆದರಿಕೆ
Team Udayavani, Nov 3, 2024, 4:06 PM IST
ತಿರುವನಂತಪುರಂ: ಮಾಲಿವುಡ್ ನಟ ಜೋಜು ಜಾರ್ಜ್ (Malayalam actor Joju George) ಅವರ ಮೇಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇತ್ತೀಚೆಗಷ್ಟೇ(ಅ.24ರಂದು) ಜೋಜು ಜಾರ್ಜ್ ನಟಿಸಿ ನಿರ್ದೇಶನ ಮಾಡಿರುವ ʼಪಾನಿʼ(Pani Movie) ಎನ್ನುವ ಸಿನಿಮಾ ರಿಲೀಸ್ ಆಗಿದೆ. ಇದು ಜೋಜು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಸಿನಿಮಾ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣುತ್ತಿದೆ.
ಸಿನಿಮಾವನ್ನು ವೀಕ್ಷಿಸಿದ ಆದರ್ಶ್ ಎಚ್ ಎಸ್ ಎಂಬ ನೆಟ್ಟಿಗ ಸಿನಿಮಾದಲ್ಲಿ ತನಗೆ ಯಾವ ಸನ್ನಿವೇಶ ಇಷ್ಟವಾಗಿಲ್ಲವೆನ್ನುವುದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾನೆ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಸಿನಿಮಾದಲ್ಲಿ ಅತ್ಯಂತ ಕೆಟ್ಟದಾಗಿ ತೋರಿಸಲಾಗಿದೆ ಎಂದು ಆದರ್ಶ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?
ಇದೇ ವಿಚಾರವಾಗಿ ಜೋಜು ಜಾರ್ಜ್ ಆದರ್ಶ್ ಅವರಿಗೆ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
“ನನ್ನನ್ನು ಎದುರಿಸುವ ಧೈರ್ಯವಿದೆಯೇ?” ಎಂದು ಆದರ್ಶ್ ಬಳಿ ಹೇಳಿದಾಗ, ಸಿನಿಮಾದಲ್ಲಿ ಅತ್ಯಾಚಾರದ ದೃಶ್ಯಗಳನ್ನು ಆ ರೀತಿಯಾಗಿ ಚಿತ್ರೀಕರಿಸಬಾರದಿತ್ತು ಎಂದಿದ್ದಾರೆ. ಇದಕ್ಕೆ ಗರಂ ಆದ ಚಾರ್ಜ್ “ದಯವಿಟ್ಟು ನನಗೆ ಕಲಿಸಿ. ನಾನು ನಿಮ್ಮ ಬಳಿಗೆ ಬರುತ್ತೇನೆ. ನೀವು ನಾಳೆ ಎಲ್ಲಿರುವಿರಿ?” ಎಂದಿದ್ದಾರೆ.
ಒಂದು ನೆಗೆಟಿವ್ ರಿವ್ಯೂನಿಂದ ನೀವ್ಯಾಕೆ ಇಷ್ಟು ಪ್ರಚೋದನೆಗೊಳ್ಳುತ್ತೀರಿ ಎಂದ ಆದರ್ಶ್ ಗೆ “ಮಗು, ನಾನು ನಿಜವಾಗಿಯೂ ಪ್ರಚೋದನೆಗೆ ಒಳಗಾಗಿದ್ದರೆ, ನೀನು ನಿನ್ನ ಪ್ಯಾಂಟ್ ಅಲ್ಲೇ ಮೂತ್ರ ಮಾಡಿಕೊಳ್ಳುತ್ತೀಯ” ಎಂದು ಸಿಟ್ಟಿನಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.
ಚಾರ್ಜ್ ಅವರ ಈ ಮಾತನ್ನು ಆದರ್ಶ್ ರೆಕಾರ್ಡ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆಡಿಯೋ ವೈರಲ್ ಆಗಿದೆ.
ಇದಾದ ಬಳಿಕ ಈ ಕುರಿತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲೈವ್ ಬಂದು ಚಾರ್ಜ್ ಸ್ಪಷ್ಟನೆ ನೀಡಿದ್ದಾರೆ. ನಾನು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ. ಆದರೆ ಆದರ್ಶ್ ಇಡೀ ಸಿನಿಮಾದ ಕಥೆಯನ್ನೇ ಬಹಿರಂಗ ಮಾಡಿದ್ದಾನೆ. ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷಗಳಿಲ್ಲ. ಈ ಬಗ್ಗೆ ನಾನು ಕಾನೂನು ಕ್ರಮಕ್ಕ ಮುಂದಾಗುತ್ತೇನೆ ಎಂದಿದ್ದಾರೆ.
‘ಪಾನಿʼಯಲ್ಲಿ ಅಭಿನಯ, ಸಾಗರ್ ಸೂರ್ಯ, ಜುನೈಜ್ ವಿಪಿ, ಬಾಬಿ ಕುರಿಯನ್, ಅಭಯ ಹಿರಣ್ಮಯಿ, ಪ್ರಶಾಂತ್ ಅಲೆಕ್ಸಾಂಡರ್ ಮತ್ತು ಸುಜಿತ್ ಶಂಕರ್ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.