‘ದಿ ಕಾಶ್ಮೀರ್ ಫೈಲ್ಸ್”..ಕಾಶ್ಮೀರಿ ಪಂಡಿತರ ನೋವಿನ ನೈಜ ಕಥಾನಕ ಅನಾವರಣ

ಸೂಪರ್ ಹಿಟ್ ಚಿತ್ರದಲ್ಲಿ ಅಂತಹದ್ದೇನಿದೆ ?

Team Udayavani, Mar 14, 2022, 8:21 PM IST

1-sddsa

ದೇಶದ ಮುಕುಟ ಮಣಿಯಾಗಿರುವ ಕಾಶ್ಮೀರದಲ್ಲಿ ನಡೆದ ನೈಜ ಘಟನೆ ಆಧಾರಿತ ‘ಕಾಶ್ಮೀರ್ ಫೈಲ್ಸ್’ ಚಿತ್ರ ಸದ್ಯ ಎಲ್ಲಾ ಬಿಗ್ ಬಜೆಟ್, ಸೂಪರ್ ಸ್ಟಾರ್ ಗಳ ಚಿತ್ರಗಳಿಗಿಂತ ಜನಪ್ರಿಯತೆ ಪಡೆಯುತ್ತಿದೆ. ಚಿತ್ರಕ್ಕೆ ಈಗಾಗಲೇ ಕರ್ನಾಟಕ ಸೇರಿ ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳು ತೆರಿಗೆ ವಿನಾಯಿತಿ ನೀಡಿವೆ.

ಹಾಸ್ಯವೋ , ಭರ್ಜರಿ ಸಾಹಸವೋ , ಸೂಪರ್ ಹಿಟ್ ಹಾಡುಗಳು ಯಾವುದೂ ಇಲ್ಲದೆ ಕೇವಲ ಕಥಾ ವಸ್ತು ಹಲವರನ್ನು ಚಿತ್ರಮಂದಿರದತ್ತ ಸೆಳೆದ ಇತ್ತೀಚಿಗಿನ ಚಿತ್ರ ಇದಾಗಿದೆ. ಬಿಜೆಪಿ ನಾಯಕರು ಸೇರಿ ಹಲವಾರು ಮಂದಿ ಚಿತ್ರ ವೀಕ್ಷಿಸಿ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. ಇನ್ನೊಂದೆಡೆ ಚಿತ್ರದ ಕುರಿತು ಟೀಕೆಗಳು ಕೇಳಿ ಬಂದಿದ್ದು, ಮಾಧ್ಯಮಗಳಲ್ಲಿ ಮತ್ತು ಚಿತ್ರ ಮಂದಿರಗಳಲ್ಲಿ ಸಣ್ಣ ಮಟ್ಟಿಗಿನ ಸಂಘರ್ಷಕ್ಕೂ ಕಾರಣವಾಗಿಸಲು ಪ್ರಯತ್ನಗಳು ನಡೆಯುತ್ತಿವೆ.

ರಾಷ್ಟ್ರೀಯತೆಯನ್ನು ಮೂಲ ಉದ್ದೇಶವಾಗಿಟ್ಟುಕೊಂಡು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಕಥೆಯನ್ನು ಸಿದ್ದಪಡಿಸಿ, ಚಿತ್ರವನ್ನು ಜನರ ಮುಂದಿಟ್ಟು ಯಶಸ್ಸು ಕಂಡು ಕೊಂಡಿದ್ದಾರೆ. 1990 ರಲ್ಲಿ ಕಾಶ್ಮೀರ ಕಣಿವೆಯಲ್ಲಿದ್ದ ಎಲ್ಲವನ್ನೂ ಬಿಟ್ಟು ಹೋದ ಐದು ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರ ದುಸ್ಥಿತಿಯನ್ನು ಹೊರತಂದಿರುವ ಪ್ರಯತ್ನಕ್ಕಾಗಿ ಚಲನಚಿತ್ರವನ್ನು ವ್ಯಾಪಕವಾಗಿ ಪ್ರಶಂಸಿಸಲಾಗುತ್ತಿದೆ.

ಚಿತ್ರದ ತಾರಾಗಣದ ಕುರಿತು ಗಮನಿಸುವುದಾದರೆ, ಹಿರಿಯ ನಟ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಪಲ್ಲವಿ ಜೋಶಿ , ದರ್ಶನ್ ಕುಮಾರ್ , ಪ್ರಕಾಶ್​ ಬೆಳವಾಡಿ, ಪುನೀತ್​ ಇಸಾರ್ ಮೊದಲಾದವರು ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಅಂತಹದ್ದೇನಿದೆ ?

ಬಿಡುಗಡೆಗೂ ಮುನ್ನ ಕಥೆಯ ಮೂಲಕವೇ ಭಾರಿ ಕುತೂಹಲ ಕೆರಳಿಸಿದ್ದ ಚಿತ್ರ ಆರಂಭವಾಗುವುದು ಮುಸ್ಲಿಂ ಹುಡುಗನ ಜತೆ ಹಿಂದೂ ಬಾಲಕ ನೊಬ್ಬ ಕ್ರಿಕೆಟ್​ ಆಡುವ ಮೂಲಕ, ರೇಡಿಯೋದಲ್ಲಿ ಕ್ರಿಕೆಟ್​ ವೀಕ್ಷಕ ವಿವರಣೆ ಕೇಳಿ ಹಿಂದೂ ಬಾಲಕ ಘೋಷಣೆ ಕೂಗಿ ಸಂಭ್ರಮಿಸುತ್ತಾನೆ, ಅದಾಗುತ್ತಲೇ ಸುತ್ತಲಿದ್ದ ಮುಸ್ಲಿಂ ಯುವಕರು ಬಾಲಕನ ಮೇಲೆ ಹಲ್ಲೆ ಮಾಡುತ್ತಾರೆ. ನಂತರ ಗುಂಡಿನ ಮೊರೆತ ಕೇಳಿಬರುತ್ತದೆ.

ಒಂದೋ ಮತಾಂತರಗೊಳ್ಳಿ, ಇಲ್ಲವಾದಲ್ಲಿ ಓಡಿಹೋಗಿ ಎಂದು ದೊಂಬಿಗಳನ್ನು ಎಬ್ಬಿಸಿ ಜನರನ್ನು ಭಯಭೀತರನ್ನಾಗಿಸಲಾಗುತ್ತದೆ. ಕಾಶ್ಮೀರಿ ಪಂಡಿತರ ಮೇಲೆ ದ್ವೇಷ ಸಾಧಿಸಿದ್ದಾದರೂ ಯಾಕೆ ? ಪರಿಸ್ಥಿತಿ ಎದುರಿಸುವಲ್ಲಿ ಸರಕಾರ ಎಡವಿದ್ದು ಎಲ್ಲಿ? ಹಲವು ಪ್ರಶ್ನೆಗಳಿಗೆ ಚಿತ್ರದ ಮೂಲಕ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ.

ಸಿನಿಮಾದಲ್ಲಿ ರಂಜನೆಯ ಉದ್ದೇಶ ಕಂಡು ಬರುವುದಿಲ್ಲ.ನೋಡುಗರಿಗೆ ಮೂರು ದಶಕದ ಹಿಂದಿನ ಘೋರ ದೃಶ್ಯಗಳನ್ನು ಕಾಣಿಸುವಲ್ಲಿ ಹೆಚ್ಚು ಮಹತ್ವ ನೀಡಲಾಗಿದ್ದು, ಆಗಿನ ಕರಾಳತೆಯನ್ನು ಅನುಭವಿಸಿದ ಯಾತನೆಯ ಬದುಕನ್ನು ಮನಮುಟ್ಟುವಂತೆ ತೋರಿಸಲಾಗಿದೆ.

ಚಿತ್ರದಲ್ಲಿ ಪುಷ್ಕರ್ ನಾಥ್ ಪಂಡಿತ್ (ಅನುಪಮ್ ಖೇರ್) ಮತ್ತು ಅವರ ಕುಟುಂಬ ಮತ್ತು ಅವರು ಹೇಗೆ ನಿರಾಶ್ರಿತರಾಗಿದ್ದರು ಎಂಬುದನ್ನು ವಿವರಿಸಲಾಗಿದೆ. ಮೊದಲಾರ್ಧದಲ್ಲಿ ಹಿನ್ನೆಲೆಯನ್ನು ತೋರಿಸಿದರೆ, ದ್ವಿತೀಯಾರ್ಧದಲ್ಲಿ ಇಂದಿನ ಯುವ ಪೀಳಿಗೆ ಹೇಗೆ ಮತ್ತು ಏಕೆ ತಮ್ಮ ಹಿಂದಿನದನ್ನು ಮರೆಯಬಾರದು ಮತ್ತು ಯಾಕೆ ನೆನಪಿಸಿಕೊಳ್ಳಬೇಕು ಎನ್ನುವುದನ್ನು ಸಾರಿದೆ.

ಮುಗ್ಧ ಜೀವಗಳ ಮೇಲೆ ನಡೆದ ಹಿಂಸಾಚಾರ, ಕ್ರೌರ್ಯ, ಹತ್ಯಾಕಾಂಡ, ಶಾಂತಿ, ಮಾನವ ಹಕ್ಕುಗಳು ಮತ್ತು ರಾಜಕೀಯ ಕಾರ್ಯಸೂಚಿಗಳು ಸಂಘರ್ಷದ ಸಿದ್ಧಾಂತಗಳು ಚಲನಚಿತ್ರವನ್ನು ಹೆಚ್ಚು ಚಿಂತನಶೀಲವಾಗಿಸಿವೆ. ಕಾಶ್ಮೀರಿ ಪಂಡಿತರ ಮೇಲಿನ ಶ್ರಮದಾಯಕ ಸಂಶೋಧನೆ ಮತ್ತು ಹಿಂದಿನ ಆರು ನರಮೇಧಗಳ ನಂತರ ಅವರ ಬದುಕುಳಿಯುವಿಕೆಯ ಕುರಿತು ಚಿತ್ರ ಮಹತ್ವಿಕೆ ತೋರಿದೆ.

ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮತ್ತು ದರ್ಶನ್ ಕುಮಾರ್ ಅವರ ಪಾತ್ರಗಳು ಪರಕಾಯ ಪ್ರವೇಶ ಮಾಡಿ, ಎಲ್ಲರನ್ನೂ ಬೆರಗು ಮೂಡಿಸಿದ್ದಾರೆ.

ಟಾಪ್ ನ್ಯೂಸ್

Ullal: ಗಾಂಜಾ ಮಾರಾಟ: ಜೋಡಿ ಬಂಧನ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Mangaluru: ವಕೀಲರ ಮೇಲೆ ಹಲ್ಲೆ: ದೂರು

Mangaluru: ವಕೀಲರ ಮೇಲೆ ಹಲ್ಲೆ: ದೂರು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CELEBRITIES: ಶಾರುಖ್‌ ಟು ಸಲ್ಮಾನ್;‌ ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು

CELEBRITIES: ಶಾರುಖ್‌ ಟು ಸಲ್ಮಾನ್;‌ ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು

Bollywood: ವರುಣ್‌ ಧವನ್ ʼಬೇಬಿ ಜಾನ್‌ʼ ಟೀಸರ್‌ ನೋಡಿ ʼಜವಾನ್‌ʼ ಕಾಪಿ ಎಂದ ನೆಟ್ಟಿಗರು

Bollywood: ವರುಣ್‌ ಧವನ್ ʼಬೇಬಿ ಜಾನ್‌ʼ ಟೀಸರ್‌ ನೋಡಿ ʼಜವಾನ್‌ʼ ಕಾಪಿ ಎಂದ ನೆಟ್ಟಿಗರು

1-ree

Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್‌’

aishwarya rai b

Aishwarya Rai Bachchan ಬರ್ತ್‌ಡೇಗೆ ಶುಭಕೋರದ ಪತಿ, ಮಾವ: ನೆಟ್ಟಿಗರು ಕೆಂಡ!

Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Mangaluru: ವಕೀಲರ ಮೇಲೆ ಹಲ್ಲೆ: ದೂರು

Mangaluru: ವಕೀಲರ ಮೇಲೆ ಹಲ್ಲೆ: ದೂರು

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.