Interview: ಚಿತ್ರ ಒಳ್ಳೆಯದಿದ್ರೆ ಪ್ರೇಕ್ಷಕರು ಕೈಹಿಡಿಯುತ್ತಾರೆ; ದಸ್ಕತ್ ನಿರ್ದೇಶಕ ಅನೀಶ್
ತುಳು ಚಿತ್ರರಂಗದಲ್ಲಿ ಭರವಸೆಯ ʼದಸ್ಕತ್ʼ ಹಾಕಿದ ಯುವ ನಿರ್ದೇಶಕ
Team Udayavani, Jan 4, 2025, 1:07 PM IST
ಮಣಿಪಾಲ: ಡಿಸೆಂಬರ್ 13ರಂದು ಕರಾವಳಿಯಲ್ಲಿ ತೆರೆಕಂಡ ʼದಸ್ಕತ್ʼ ಸಿನಿಮಾ (Daskath Cinema) ತುಳು ಚಿತ್ರರಂಗದಲ್ಲಿ ಹೊಸ ಭರವಸೆ ಹುಟ್ಟು ಹಾಕಿದೆ. ಈ ಸಿನಿಮಾ ಮೂಲಕ ಅನೀಶ್ ಪೂಜಾರಿ ವೇಣೂರು (Aneesh Poojary Venur) ಎಂಬ ಪ್ರತಿಭಾನ್ವಿತ ನಿರ್ದೇಶಕ ತುಳು ಚಿತ್ರರಂಗಕ್ಕೆ ದೊರಕಿದ್ದಾರೆ. ಸಿದ್ದಸೂತ್ರಗಳನ್ನು ಮೀರಿದ ಕಥೆ, ನಿರೂಪಣೆ ಶೈಲಿಯೊಂದಿಗೆ ಬಂದ ರಾಘವೇಂದ್ರ ಕುಡ್ವ ನಿರ್ಮಾಣದ ಸಿನಿಮಾ ಇದೀಗ ತುಳು ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ʼದಸ್ಕತ್ʼ ಹಾಕಿದೆ.
ಕಾಮಿಡಿ ಕಿಲಾಡಿ ಶೋನಲ್ಲಿ ಮಿಂಚಿದ್ದ ಅನೀಶ್ ಇದೀಗ ನಿರ್ದೇಶಕನ ಕ್ಯಾಪ್ ತೊಟ್ಟು ಭರವಸೆ ಮೂಡಿಸಿದ್ದಾರೆ. ತುಳುವಿನಲ್ಲಿ ಕಾಮಿಡಿ ಹೊರತಾದ ಚಿತ್ರ ಯಶಸ್ಸು ಕಾಣಬೇಕು ಎಂಬ ಹಲವು ಸಮಯದ ಕೂಗಿಗೆ ದಸ್ಕತ್ ನ್ಯಾಯ ಒದಗಿಸಿದೆ.
25 ದಿನಗಳ ಯಶಸ್ಸಿನತ್ತ ಸಾಗುತ್ತಿರುವ ʼದಸ್ಕತ್ʼ ಚಿತ್ರದ ನಿರ್ದೇಶಕ ಅನೀಶ್ ವೇಣೂರು ಉದಯವಾಣಿ ವೆಬ್ ಸೈಟ್ ನೊಂದಿಗೆ ಮಾತಿಗೆ ಸಿಕ್ಕರು. ಅವರೊಂದಿಗಿನ ಸಂದರ್ಶನ ಇಲ್ಲಿದೆ.
ಕಾಮಿಡಿ ಕಿಲಾಡಿ ಹಿನ್ನೆಲೆಯಿಂದ ಬಂದ ನೀವು ಇಂತಹ ಗಂಭೀರ ಕಥೆಯ ಚಿತ್ರ ಮಾಡಿದ್ದು ಹೇಗೆ?
ನಾನು ಮೂಲತಃ ಅಧ್ಯಾಪಕ. ಖಾಸಗಿ ಶಾಲೆಯ ಹೆಡ್ ಮಾಸ್ಟರ್ ಆಗಿದ್ದೆ. ಇದರ ನಡುವೆ ಸ್ಟೇಜ್ ಶೋಗಳನ್ನು ಮಾಡುತ್ತಿದ್ದೆ. ಗಂಭೀರ ಕಥೆ ಆಧಾರಿತ ನಾಟಕಗಳನ್ನು ಮಾಡುತ್ತಿದ್ದೆ. ಇದರ ನಡುವೆ ಕಾಮಿಡಿ ಕಿಲಾಡಿ ಅವಕಾಶ ದೊರೆದಿತ್ತು. ಬಳಿಕವೂ ನಾಟಕ ಮುಂತಾದ ಕಥಾನಕಗಳನ್ನು ನಿರೂಪಣೆ ಮಾಡುವ ಕೆಲಸ ಮುಂದುವರಿದಿತ್ತು. ಸಿನಿಮಾ ಮಾಡುವುದಾದರೆ ಇಂತಹದೇ ಕಂಟೆಂಟ್ ಮಾಡಬೇಕು ಎಂಬ ಕನಸಿತ್ತು. ಹೀಗಾಗಿ ಪ್ರಯತ್ನ ಮಾಡಿದೆ.
ತುಳು ಸಿನಿಮಾ ಸಿದ್ದಸೂತ್ರಗಳನ್ನು ಬಿಟ್ಟು ಚಿತ್ರ ಮಾಡುವ ಧೈರ್ಯ ಹೇಗೆ ಬಂತು?
ಸಿನಿಮಾ ಒಳ್ಳೆಯದಿದ್ದರೆ ಖಂಡಿತ ಯಶಸ್ಸು ಪಡೆಯಬಹುದು ಎಂಬ ನಂಬಿಕೆಯಿತ್ತು. ತುಳುವಿನಲ್ಲಿ ಹಾಸ್ಯದ ಹೊರತಾಗಿಯೂ ಒಳ್ಳೆಯ ಸಿನಿಮಾಗಳು ಬಂದಿದೆ. ಕಾಮಿಡಿಯಲ್ಲೂ ಕೂಡ ಉತ್ತಮ ಚಿತ್ರಗಳಿವೆ. ಆದರೆ ನಮ್ಮ ತುಳುನಾಡಿನ ಪ್ರಕೃತಿಯ ಬಗ್ಗೆ ಚಿತ್ರ ಮಾಡಬೇಕು ಎಂಬ ಕನಸಿತ್ತು. ಇದು ನಮ್ಮಲ್ಲಿ ಹೆಚ್ಚಾಗಿ ಬಳಕೆಯಾಗಿಲ್ಲ. ದಸ್ಕತ್ ನಮ್ಮ ಸಂಸ್ಕೃತಿ – ಪ್ರಕೃತಿ – ಸಂಘರ್ಷದ ಮಿಶ್ರಣ. ಆ ಧೈರ್ಯದಲ್ಲಿ ಮಾಡಿದೆ. ಆದರೆ ಸಣ್ಣ ಹೆದರಿಕೆಯೂ ಇತ್ತು.
ಮಲಯಾಳಂ ಚಿತ್ರಗಳನ್ನು ಈಗೀಗ ಹೆಚ್ಚಾಗಿ ಉಲ್ಲೇಖ ಮಾಡುತ್ತಾರೆ. ಈಗ ದಸ್ಕತ್ ಚಿತ್ರ ನೋಡಿದವರೂ ಮಲಯಾಳಂ ಚಿತ್ರಗಳ ನೆನಪು ಮಾಡುತ್ತಿದ್ದಾರೆ. ತುಳುನಾಡಿನಲ್ಲಿ ಬೇಕಾದಷ್ಟು ಕಥೆಯಿದೆ. ಆದರೆ ಸಿನಿಮಾ ಮಾಡುವ ಪ್ರಯತ್ನ ಮಾಡಿಲ್ಲ. ಇಲ್ಲಿನ ಸಂಸ್ಕೃತಿ, ಮಣ್ಣಿನ ಸೊಗಡು, ಪ್ರಾಕೃತಿಕ ಸೌಂದರ್ಯ ಮುಟ್ಟುವ ಪ್ರಯತ್ನ ಮಾಡಿಲ್ಲ. ಮಾಡಿದರೂ ಕಮರ್ಷಿಯಲ್ ಪ್ರಯತ್ನ ಮಾಡಿಲ್ಲ. ಹೀಗಾಗಿ ನಾವು ಮುಂದಾದೆವು.
ಹೆಚ್ಚು ಪ್ರಸಿದ್ದರಲ್ಲ, ಹೊಸ ಕಲಾವಿದರು ಚಿತ್ರದಲ್ಲಿದ್ದರು. ಈ ನಿರ್ಧಾರ ಯಾಕೆ?
ತುಳು ರಂಗದಲ್ಲಿ ಹೆಸರು ಮಾಡಿದ ಕಲಾವಿದರನ್ನು ನೋಡಿ ಬೆಳೆದವನು ನಾನು. ಅವರೇ ನಮಗೆ ಸ್ಪೂರ್ತಿ. ಆದರೆ ಈ ಚಿತ್ರದಲ್ಲಿ ನಮಗೆ ನಟರಿಗಿಂತ ಪಾತ್ರಕ್ಕೆ ಹೊಂದುವವರು ಬೇಕಿತ್ತು. ಹೀಗಾಗಿಯೇ ಈ ನಿರ್ಧಾರ. ಕಥೆಯಲ್ಲಿ ರಾಜಿ ಮಾಡಿಕೊಂಡು ದೊಡ್ಡ ನಟರನ್ನು ಹಾಕಲು ಮನಸ್ಸಿರಲಿಲ್ಲ. ಚಿತ್ರ ನೋಡಿ ಬಂದವರು ಪಾತ್ರದ ಹೆಸರು ಹೇಳಿ ಕಲಾವಿದರನ್ನು ಗುರುತು ಹಿಡಿಯುತ್ತಿದ್ದಾರೆ. ಚಿತ್ರದ ಗುಣಪಾಲ, ಶೇಖರ, ಭಾಗಿ, ಕೇಶವ ಮುಂತಾದ ಪಾತ್ರಗಳನ್ನು ಜನರು ಗುರುತಿಸುತ್ತಿದ್ದಾರೆ.
ತುಳು ಪ್ರೇಕ್ಷಕರ ಬೆಂಬಲ ಹೇಗಿದೆ?
ತೃಪ್ತಿಯಿದೆ. ಪ್ರೇಕ್ಷಕರು ಕೈ ಹಿಡಿದರು. ಸದ್ಯ ನಾಲ್ಕನೇ ವಾರದಲ್ಲಿಯೂ ಚಿತ್ರಮಂದಿರಗಳಲ್ಲಿ ಜನ ಸೇರುತ್ತಿದ್ದಾರೆ. ದಸ್ಕತ್ ಟೈಟಲ್ ಎಲ್ಲರಿಗೂ ರೀಚ್ ಆಗಬೇಕು. ಮನೆ ಮನೆಗೆ ಇನ್ವಿಟೇಶನ್ ಹಂಚಿ ಪ್ರಚಾರ ಮಾಡಿದ್ದೆವು. ಎರಡನೇ ವಾರದಿಂದ ಕುಟುಂಬ ಸಮೇತ ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚಾಯಿತು. ಇದು ಸಾರ್ಥಕ ಕ್ಷಣ. ಗುಣಮಟ್ಟದಲ್ಲಿ ಕಡಿಮೆ ಮಾಡಲಿಲ್ಲ. ಉತ್ತಮ ಚಿತ್ರವನ್ನು ನೀಡಿದೆವು. ಜನರು ಹಿಟ್ ಮಾಡಿದರು. ಇದರಿಂದಾಗಿ ಒಂದು ತಂಡವಾಗಿ ನಾವು ಗುರುತಿಸಲ್ಪಟ್ಟೆವು. ನಮ್ಮ ಮುಂದಿನ ಸಿನಿಮಾಗೆ ಜನರು ವಿಶ್ವಾಸ, ಧೈರ್ಯ ನೀಡಿದ್ದಾರೆ.
ಯಶಸ್ಸಿನ ಬಳಿಕ ಇಂಡಸ್ಟ್ರಿ ಹಿರಿಯರ ಬೆಂಬಲ ಹೇಗಿದೆ?
ಹೌದು, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಸಿನಿಮಾ ನೋಡಿ ಉತ್ತಮ ಪ್ರೋತ್ಸಾಹ ನೀಡಿದರು. ʼಇಂತಹ ಸಿನಿಮಾ ನಮಗೆ ಬೇಕಿತ್ತು, ನಿಮ್ಮ ಪ್ರಯತ್ನ ಕಂಡು ಸಂತಸವಾಯಿತುʼ ಎಂದರು. ಅವರೇ ಪತ್ರಿಕೆ ಜಾಹೀರಾತು ನೀಡಿ ಬೆಂಬಲಿಸಿದರು. ಅಲ್ಲದೆ ಹಲವು ಕಲಾವಿದರು ತಂತ್ರಜ್ಞರು ಚಿತ್ರ ನೋಡಿ ಪ್ರೋತ್ಸಾಹ ನೀಡಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಪ್ರದರ್ಶನ ಕಾಣಲಿದೆ. ಅಲ್ಲಿಯೂ ಬೆಂಬಲ ಸಿಗುವ ನಿರೀಕ್ಷೆಯಿದೆ.
ನಿಮ್ಮ ಮುಂದಿನ ಪ್ರಾಜೆಕ್ಟ್ ?
ಸದ್ಯ ʼದಸ್ಕತ್ʼ ಚಿತ್ರವನ್ನು ಬೆಂಗಳೂರು, ಮುಂಬೈ ಮತ್ತು ದುಬೈನಲ್ಲಿ ರಿಲೀಸ್ ಮಾಡುವ ಪ್ರಯತ್ನದಲ್ಲಿದ್ದೇವೆ. ಇದಾದ ಬಳಿಕ ಮುಂದೆ ಕನ್ನಡದಲ್ಲಿ ಚಿತ್ರ ಮಾಡುವ ಯೋಚನೆಯಿದೆ. ಅದರ ಬಳಿಕ ತುಳು ಚಿತ್ರ ಮಾಡುತ್ತೇವೆ.
ಸಂದರ್ಶನ: ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Tulu Cinema: ತುಳುನಾಡಿನ ಗ್ರಾಮೀಣ ಕಥಾನಕ ತೆರೆದಿಟ್ಟ “ದಸ್ಕತ್’
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Tulu Movie Review; ಹೇಗಿದೆ ಈ ವಾರ ತೆರೆಗೆ ಬಂದ ತುಳು ಸಿನಿಮಾ ʼದಸ್ಕತ್ʼ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Andhra: ʼಗೇಮ್ ಚೇಂಜರ್ʼ ಈವೆಂಟ್‌ನಿಂದ ಮರಳುತ್ತಿದ್ದ ಅಭಿಮಾನಿಗಳು ರಸ್ತೆ ಅಪಘಾತಕ್ಕೆ ಬಲಿ
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಅಮಾನತು
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
South Korea: ಅಧ್ಯಕ್ಷ ಯೂನ್ ರನ್ನು ಕೂಡಲೇ ಬಂಧಿಸಿ: ಪೊಲೀಸರಿಗೆ ದಕ್ಷಿಣ ಕೊರಿಯಾ!
ಕಾರ್ಕಳ ನಗರದಲ್ಲೂ ನೆಟ್ ಕಿರಿಕಿರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.