Middle Class Family: ಮತ್ತೆ ರಂಜಿಸಲು ಬರುತ್ತಿದ್ದಾರೆ ಸೌಂಡ್ ಲೈಟ್ಸ್ ಹುಡುಗರು
Team Udayavani, Oct 24, 2024, 6:57 PM IST
ಈ ಹಿಂದೆ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ (Raj Sounds & Lights) ಚಿತ್ರದ ಮೂಲಕ ತುಳು ಸಿನಿಮಾ ರಂಗದಲ್ಲಿ ದೊಡ್ಡ ಹಿಟ್ ನೀಡಿದ್ದ ತಂಡ ಇದೀಗ ಮತ್ತೊಂದು ಚಿತ್ರದೊಂದಿಗೆ ಬರುತ್ತಿದೆ. ಅದುವೆ ʼಮಿಡಲ್ ಕ್ಲಾಸ್ ಫ್ಯಾಮಿಲಿʼ (Middle Class Family)
ರಾಹುಲ್ ಅಮೀನ್ ನಿರ್ದೇಶನದ ‘ಮಿಡಲ್ ಕ್ಲಾಸ್ ಫ್ಯಾಮಿಲಿ’ ಚಿತ್ರವು 2025ರ ಜನವರಿಯಲ್ಲಿ ತೆರೆಗೆ ಬರಲಿದೆ. ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರದ ಮೂಲಕ ಯಶಸ್ಸು ಕಂಡಿದ್ದ ರಾಹುಲ್ ಅಮೀನ್- ವಿನೀತ್ ಕುಮಾರ್ ಜೋಡಿ ಮತ್ತೆ ʼಮಿಡಲ್ ಕ್ಲಾಸ್ ಫ್ಯಾಮಿಲಿʼ ಮೂಲಕ ತುಳು ಚಿತ್ರ ಪ್ರೇಮಿಗಳನ್ನು ರಂಜಿಸಲು ಬರುತ್ತಿದ್ದಾರೆ.
ವಿನೀತ್ ಕುಮಾರ್ ಗೆ ಸಮತಾ ಅಮೀನ್ ಅವರು ನಾಯಕಿಯಾಗಿದ್ದಾರೆ. ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ, ರವಿ ರಾಮಕುಂಜ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ವಿನೀತ್ ಕುಮಾರ್ ಅವರ ಕಥೆ, ಪ್ರಸನ್ನ ಶೆಟ್ಟಿ ಬೈಲೂರು ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದು, ವಿಷ್ಣು ಪ್ರಸಾದ್ ಕ್ಯಾಮರಾ ಕೈಚಳಕವಿದೆ.
ಆನಂದ್ ಎನ್ ಕುಂಪಲಾ ನಿರ್ಮಾಣದಲ್ಲಿ ಮೂಡಿ ಬಂದಿರುವ ʼಮಿಡಲ್ ಕ್ಲಾಸ್ ಫ್ಯಾಮಿಲಿʼ ಚಿತ್ರದಿಂದ ಈಗಾಗಲೇ ನಕಾನೆ ನಕಾನೆ ಎಂಬ ಹಾಡೊಂದು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TuluFilm: ಜ.24ರಂದು ರಿಲೀಸ್ ಆಗುತ್ತಿಲ್ಲ ಮಿಡಲ್ ಕ್ಲಾಸ್ ಫ್ಯಾಮಿಲಿ: ಹೊಸ ದಿನಾಂಕ ಘೋಷಣೆ
Tulu Movie; ಆರ್ ಜೆ ಪ್ರೊಡಕ್ಷನ್ ನಿರ್ಮಾಣದ ತುಳು ಸಿನಿಮಾಕ್ಕೆ ಮುಹೂರ್ತ
Mangaluru: ತುಳು ಸಿನೆಮಾಕ್ಕೂ ಜಾಗತಿಕ ಮಟ್ಟಕ್ಕೇರುವ ಶಕ್ತಿ: ಸುನಿಲ್ ಶೆಟ್ಟಿ
Meera Movie: ತೆರೆಗೆ ಬರಲು ಸಜ್ಜಾದ ಮಹಿಳಾ ಪ್ರಧಾನ ತುಳು ಚಿತ್ರ ʼಮೀರಾʼ
Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್ ನಟ ಸುನೀಲ್ ಶೆಟ್ಟಿ