IFFI: ಪಾಪ್ ಸಂಗೀತಗಾರ ರಾಬಿ ವಿಲಿಯಮ್ಸ್ ಬೆಟರ್ ಮ್ಯಾನ್ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ
Team Udayavani, Nov 19, 2024, 8:16 PM IST
ಪಣಜಿ: “ನಾನು ಪ್ರದರ್ಶನ ನೀಡುವಾಗ ನನಗೆ ಮಂಗವೊಂದು ಪ್ರದರ್ಶನ ಕೊಟ್ಟಂತೆ ಅನಿಸುತ್ತದೆ!” ಹೀಗೆ ಯಾವುದಾದರೂ ಒಬ್ಬ ಕಲಾವಿದ ಅಥವಾ ಗಾಯಕ ತನ್ನ ಬಗೆಯೇ ಅಂದುಕೊಂಡರೆ ಹೇಗನ್ನಿಸಬಹುದು?
ವಿಚಿತ್ರ ವ್ಯಕ್ತಿಯಂತೆ ತೋರಬಹುದು. ಆದರೆ ಆ ಮಾತನ್ನೇ ಬುನಾದಿಯಾಗಿಟ್ಟುಕೊಂಡು ಸಿನಿಮಾವೊಂದರಲ್ಲಿ ಆ ಕಲ್ಪನೆಯನ್ನೇ ನಿಜವೆನ್ನುವಂತೆ ಮಾಡಿದರೆ? ಇನ್ನೂ ವಿಚಿತ್ರ ಎನಿಸಬಹುದಲ್ಲವೇ?
ಹಾಗೆ ಎನಿಸುವುದು ಬೆಟರ್ ಮ್ಯಾನ್ ಸಿನಿಮಾ ನೋಡಿದ ಮೇಲೆ. ದಿ ಗ್ರೇಟೆಸ್ಟ್ ಶೋ ಮ್ಯಾನ್ ಸಿನಿಮಾದ ನಿರ್ದೇಶಕ ಮೈಕೆಲ್ ಗ್ರೇಸಿ ನಿರ್ದೇಶಿಸಿರುವ ಚಿತ್ರ ಬೆಟರ್ ಮ್ಯಾನ್. ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ದ 55 ನೇ ಆವೃತ್ತಿಯಲ್ಲಿ ನ. 20 ರಂದು ಉದ್ಘಾಟನಾ ಚಿತ್ರವಾಗಿ ಪ್ರದರ್ಶಿತವಾಗುತ್ತಿರುವುದು ಇದೇ ಬೆಟರ್ ಮ್ಯಾನ್.
ಪ್ರಖ್ಯಾತ ಬ್ರಿಟಿಷ್ ಪಾಪ್ ಸಿಂಗರ್ ರಾಬಿ ವಿಲಿಯಮ್ಸ್ ರ ಜೀವನಗಾಥೆಯ ಹಿನ್ನೆಲೆಯಲ್ಲಿ ರೂಪಿಸಲಾದ ಚಿತ್ರ. ಸಿನಿಮಾದಲ್ಲಿ ಬರುವ ಎಲ್ಲ ಪ್ರಸಂಗಗಳೂ ರಾಬಿ ವಿಲಿಯಮ್ಸ್ ರ ಜೀವನಕ್ಕೆ ಹೊಂದುವಂಥದ್ದಲ್ಲ. ಆದರೆ ಕೆಲವು ವಿಶೇಷ ಎನಿಸುವಂಥ, ಸಾಮಾನ್ಯವಾಗಿ ಆತ್ಮಕಥನ, ಜೀವನ ಚರಿತ್ರೆ ಆಧರಿತ ಸಿನಿಮಾಗಳಲ್ಲಿ ಪ್ರಸ್ತಾಪಿಸಲು ಇಷ್ಟಪಡದಂಥ ಸಂಗತಿಗಳನ್ನೂ ಇಲ್ಲಿ ಪ್ರಸ್ತಾಪಿಸಿರುವುದು ವಿಶೇಷ. ಈ ಸಿನಿಮಾದಲ್ಲಿ ವಿಲಿಯಮ್ಸ್ ರನ್ನು ಅವರೇ ಹೇಳಿಕೊಂಡದ್ದಕ್ಕೆ ದೃಶ್ಯದ ಹೂರಣ ತುಂಬಲು ಪ್ರಯತ್ನಿಸಿದ್ದಾನೆ.
ಜಾನೊ ಡೇವಿಸ್ ಅಭಿನಯಿಸಿರುವ ಚಿತ್ರವಿದು. ವಿಶೇಷವೆಂದರೆ ರಾಬಿ ವಿಲಿಯಮ್ಸ್ ಸಹ ಕೆಲವು ಭಾಗಗಳಲ್ಲಿ ಜಾನೊ ಡೇವಿಸ್ ಜತೆ ಅಭಿನಯಿಸಿದ್ದಾರೆ.
ಈ ಚಿತ್ರ ಮೊದಲಿಗೆ ಟೆಲ್ಯುರೈಡ್ ಸಿನಿಮೋತ್ಸವದಲ್ಲಿ ಪ್ರೀಮಿಯರ್ ಪ್ರದರ್ಶನ ಕಂಡಿತ್ತು. ಬಳಿಕ ಟೊರೊಂಟೊ ಸಿನಿಮೋತ್ಸವದಲ್ಲೂ ಪ್ರದರ್ಶಿತವಾಯಿತು.
ಸಿನಿಮಾ ರಾಬಿನ್ ವಿಲಿಯಮ್ಸ್ ರ ಬದುಕಿನ ಮೂರು ದಶಕಗಳನ್ನು ಮರು ನಿರ್ಮಿಸುವ ಪ್ರಯತ್ನ ಮಾಡಿದೆ. ಮೊದಲ ಯಶಸ್ಸಿನಿಂದ ಆರಂಭಿಸಿ ಕ್ಷೇತ್ರದಲ್ಲಿನ ಪ್ರಸಿದ್ಧಿ ಹಾಗೂ ಪತನದವರೆಗೂ ಭಿನ್ನ ಭಿನ್ನ ನೆಲೆಗಳನ್ನು ಚಿತ್ರಿಸಲು ಪ್ರಯತ್ನಿಸಿದೆ. ಇದಕ್ಕಾಗಿ ರಾಬಿನ್ ವಿಲಿಯಮ್ಸ್ ಹಾಡಿದ ಹಲವು ಹಾಡುಗಳನ್ನು ಮರು ವ್ಯಾಖ್ಯಾನಕ್ಕೆ ಒಳಪಡಿಸಲಾಗಿದೆ.
ರಾಬಿಯ ಬಹಳ ಪ್ರಮುಖ ಎನ್ನುವ ಗೀತೆಗಳನ್ನೆಲ್ಲ ಈ ಚಿತ್ರದಲ್ಲಿ ಪೋಣಿಸಿರುವುದು ವಿಶೇಷ.
ನಾನೇ ವಿಲನ್
ಇತ್ತೀಚಿನ ಒಂದು ಸಂದರ್ಶನದಲ್ಲೂ ಚಿತ್ರದಲ್ಲಿನ ತನ್ನ ಬದುಕಿನ ವಿವಾದಿತ ಅಂಶಗಳ ಕುರಿತು ಪ್ರತಿಕ್ರಿಯಿಸಿ, ಅವುಗಳ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ. ಈ ಸಿನಿಮಾದಲ್ಲಿ ನಾವೇ ಇಂಥವರು ವಿಲನ್ ಎಂದು ಹೇಳುವ ಮೊದಲು ಹಲವು ವಿಲನ್ ಗಳಿದ್ದಾರೆ ಎಂದು ಗ್ರಹಿಸಬಹುದು. ಆದರೆ ನಾನೇ ಇದರಲ್ಲಿನ ನಿಜವಾದ ವಿಲನ್. ನನ್ನ ಸಿನಿಮಾದಲ್ಲಿ ನಾನೇ ಮುಖ್ಯ ವಿಲನ್ ಗಾಗಿ ಬಿಂಬಿಸಿಕೊಳ್ಳಲು ಬೇಸರವಿಲ್ಲʼ ಎಂದು ಹೇಳಿದ್ದರು. ಪ್ರಮುಖವಾಗಿ ಅವರ ಮಾದಕ ವ್ಯಸನ ಹಾಗೂ ಸಂಬಂಧಗಳ ಬಗ್ಗೆಯೂ ಈ ಚಿತ್ರದಲ್ಲಿ ಪ್ರಸ್ತಾಪವಾಗಿದೆ.
ಈ ಬಾರಿ ಚಿತ್ರೋತ್ಸವದಲ್ಲಿ ಆಸ್ಟ್ರೇಲಿಯಾವನ್ನು ಕಂಟ್ರಿ ಫೋಕಸ್ ವಿಭಾಗದಲ್ಲಿ ಪರಿಗಣಿಸಲಾಗಿದ್ದು, ಆಸ್ಟ್ರೇಲಿಯದಲ್ಲಿ ನಿರ್ಮಿತವಾದ ಚಿತ್ರವೇ ಉದ್ಘಾಟನಾ ಚಿತ್ರವಾಗಿದೆ.
ಈ ಸಿನಿಮಾವು ಡಿಸೆಂಬರ್ 26 ರಂದು ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಗಲಿದೆ. ಬಳಿಕ ಅಮೆರಿಕದ ಸಿನಿಮಾ ಮಂದಿರಗಳಲ್ಲೂ ವೀಕ್ಷಣೆಗೆ ಲಭ್ಯವಾಗಲಿದ್ದು, 2025 ರ ಜನವರಿ 17 ರಂದು ವಿವಿಧೆಡೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್ ಇರಾನಿವರೆಗೆ
IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!
Cast Away: ಫೆಸಿಪಿಕ್ ಮಹಾಸಾಗರದೊಳಗಿನ ಜೀವನ ಕಥಾನಕದ ಚಿತ್ರ “ಕಾಸ್ಟ್ ಅವೇ”
UV Fusion: ಮನಕಲಕುವ ಸಿನಿಮಾ Departure…
World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?
MUST WATCH
ಹೊಸ ಸೇರ್ಪಡೆ
ಮಣಿಪುರವನ್ನು ರಕ್ಷಿಸಿ: ರಾಷ್ಟ್ರಪತಿಗೆ ಖರ್ಗೆ ಪತ್ರ
Chennai: ಕೃಷ್ಣಗೆ ಎಂ.ಎಸ್.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್ ಹೈಕೋರ್ಟ್ ತಡೆ
Savarkar defamation case:: ಡಿ.2ರಂದು ಖುದ್ದು ಹಾಜರಾಗಲು ರಾಹುಲ್‌ಗೆ ಆದೇಶ
Hunsur: ಶಬರಿಮಲೆ ಯಾತ್ರಿಗಳಿದ್ದ ಬಸ್ ಪಲ್ಟಿ: ನಾಲ್ವರಿಗೆ ಗಾಯ
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.