IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

ಅಜ್ಞಾತ ಸ್ಥಿತಿಯಲ್ಲಿರುವ ಹಲವರ ಕಥೆಗಳನ್ನು ಹೇಳಬೇಕಿದೆ...

Team Udayavani, Nov 22, 2024, 7:31 PM IST

1veer

ಪಣಜಿ: ಯಾವುದೋ ರಾಜಕೀಯ ಕಾರಣಗಳಿಗಾಗಿ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್‌ ಗೆ ಸಿಗಬೇಕಾದಷ್ಟು ಮನ್ನಣೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲೇ ಅವರ ಸಾಹಸವನ್ನು ಜನರಿಗೆ ತಿಳಿಸುವ ಕಾಲ ಬಂದಿದೆ ಎಂದಿದ್ದಾರೆ ವೀರ ಸಾವರ್ಕರ್‌ ಸಿನಿಮಾದ ನಿರ್ದೇಶಕ ಹಾಗು ನಟ ರಣದೀಪ್‌ ಹೂಡಾ.

ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ೫೫ ನೇ ಆವೃತ್ತಿಯಲ್ಲಿ ತಮ್ಮ ಚಿತ್ರ ಸ್ವಾತಂತ್ರ್ಯ ವೀರ ಸಾವರ್ಕರ್‌ ನ ಪ್ರದರ್ಶನದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ವಿವರಿಸುತ್ತಾ, “ಇಂಥ ಹಲವಾರು ಸ್ವಾತಂತ್ರ್ಯ ಯೋಧರ ಕಥೆಗಳು ತೆರೆ ಮರೆಗೆ ಸರಿದಿವೆ. ಅಜ್ಞಾತ ಸ್ಥಿತಿಯಲ್ಲಿರುವ ಹಲವರ ಕಥೆಗಳನ್ನು ಹೇಳಬೇಕಿದೆʼ ಎಂದರು.

ಸಾವರ್ಕರ್‌ ಕುರಿತ ಸಿನಿಮಾದ ಬಗ್ಗೆ ವಿವರಿಸಿ, ಸಾರ್ವಜನಿಕ ಚರ್ಚೆಯಲ್ಲಿ ಆಗಾಗ್ಗೆ ಪ್ರಸ್ತಾಪವಾಗುತ್ತಿದ್ದ ಸಿನಿಮಾ ಮಾಡಬೇಕೆಂದೆನಿಸಿತ್ತು. ಮೊದಲು ಇದಕ್ಕೆ ನಾನು ಸಾವರ್ಕರ್‌ ಪಾತ್ರಕ್ಕೆ ಆಯ್ಕೆಯಾಗಿದ್ದೆ. ನಟನೆಗೆ ಪೂರಕವಾಗಿ ಅವರ ಕುರಿತಾದ ಕೃತಿಗಳನ್ನು ಓದುತ್ತಾ ಹೋದಂತೆ, ಹೆಚ್ಚಿನ ಮಾಹಿತಿ ಶೋಧದಲ್ಲಿ ತೊಡಗಿದಂತೆ ವಿಶೇಷ ಎನಿಸಿತು. ನಾನೇ ನಿರ್ದೇಶನ ಮಾಡಲು ನಿರ್ಧರಿಸಿದೆ. ಜನರಿಗೆ ತಿಳಿಯದ ಸಾಕಷ್ಟು ಸಂಗತಿಗಳನ್ನು ಹಾಗೂ ಒಬ್ಬ ತೆರೆ ಮರೆಯಲ್ಲಿರುವ ನಾಯಕನನ್ನು ತಿಳಿಸಲು ಸಿಕ್ಕ ಅವಕಾಶʼ ಎಂದವರು ಹೂಡಾ.

ಅಹಿಂಸೆಯೊಂದೇ ಕಾರಣವಲ್ಲ
ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ನಮಗೆ ಅಹಿಂಸಾ ಚಳವಳಿಯ ಮಾರ್ಗವೊಂದೇ ಸಾಧನವಾಗಿರಲಿಲ್ಲ. ಅದರೊಂದಿಗೆ ಕ್ರಾಂತಿಕಾರಿಗಳ ಪ್ರಯತ್ನವೂ ಸಾಕಷ್ಟಿದೆ. ಖುದೀರಾಮ ಬೋಸ್‌, ಭಗತ್‌ ಸಿಂಗ್‌ ರಿಂದ ಹಿಡಿದು ವೀರ ಸಾವರ್ಕರ್‌ ವರೆಗೂ ಸಾಕಷ್ಟು ಕ್ರಾಂತಿಕಾರಿಗಳು ತಮ್ಮ ಬಲಿದಾನವನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬರೀ ಅಹಿಂಸಾ ಮಾರ್ಗದಿಂದಲೇ ನಾವು ಸ್ವಾತಂತ್ರ್ಯವನ್ನು ಪಡೆದೆವು ಎಂದು ಬಿಂಬಿಸುವುದು ಸರಿ ಎನಿಸದು. ಪ್ರಾಕ್ಟಿಕಲ್‌ ಸಹ ಎನಿಸದು ಎಂದು ಅಭಿಪ್ರಾಯಪಟ್ಟರು.

ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ವೀರರ ಬಗ್ಗೆ ಸಿನಿಮಾ ಮಾಡಬೇಕೆಂದಿದೆ. ಆದರೆ ಸದ್ಯಕ್ಕೆ ಈ ಇತಿಹಾಸದ ನೆಲೆಯಿಂದ ಹೊರಬಂದು ಆಕ್ಷನ್‌ ಚಿತ್ರ ಮಾಡಬೇಕೆಂದಿರುವೆ ಎಂದ ಹೂಡಾ, ನಮ್ಮ ಚರಿತ್ರೆಯ ಬಗ್ಗೆ, ಸ್ವಾತಂತ್ರ್ಯ ಯೋಧರ ಬಗ್ಗೆ ಸಿನಿಮಾಗಳನ್ನು ಮಾಡುವುದಕ್ಕೆ ಸಂಬಂಧಿಸಿ ಇದು ಆರಂಭ. ಅಂತ್ಯ ಎಂದು ತಿಳಿಯಬೇಡಿ ಎಂದರು.

ಸಾವರ್ಕರ್‌ ಅವರ ಬದುಕಿನ ಕಥೆಯಲ್ಲಿ ಬಹಳ ಪ್ರಮುಖ ಅಧ್ಯಾಯವಾದ ಅಂಡಮಾನ್‌ ನ ಸೆಲ್ಯುಲಾರ್‌ ಜೈಲಿನ ಬಗ್ಗೆ ವಿವರಿಸುತ್ತಾ, ಚಿತ್ರದ ಆ ಭಾಗವನ್ನು ಅಲ್ಲಿಯೇ ಚಿತ್ರೀಕರಿಸಿದ್ದೇವೆ ಎಂದರು.

ಚಿತ್ರದಲ್ಲಿ ಮೇಡಂ ಕಾಮಾ ಪಾತ್ರವನ್ನು ನಿರ್ವಹಿಸಿರುವ ನಟಿ ಡಾ.ಅಂಜಲಿ ಹೂಡಾ ಸಾಂಗ್ವಾನ್ ಮಾತನಾಡಿ, ನನ್ನ ಪಾತ್ರವಾದ ಮೇಡಂ ಕಾಮಾರ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಪಾತ್ರ ಸಿಕ್ಕಿ ಅದರ ಬಗ್ಗೆ ಅಧ್ಯಯನ ಮಾಡಿದಾಗ ನನಗೇ ನಾಚಿಕೆ ಎನಿಸಿತು. ಒಬ್ಬಳು ವೀರ ಮಹಿಳೆ ಬಗ್ಗೆ ತಿಳಿದೇ ಇಲ್ಲವಲ್ಲ ಎನಿಸಿತು. ಇದಕ್ಕೆ ನಮಗೆ ಇತಿಹಾಸವನ್ನು ಬೋಧಿಸಿದವರನ್ನು ದೂರಬೇಕು. ಎಷ್ಟೋ ನೈಜ ಇತಿಹಾಸ ತಿಳಿದೇ ಇಲ್ಲ ಎಂದು ವಿವರಿಸಿದರು.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.