55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Team Udayavani, Nov 23, 2024, 6:16 PM IST
ಪಣಜಿ: ಕೇಂದ್ರ ಸರಕಾರಿ ಸ್ವಾಮ್ಯದ ಪ್ರಸಾರ ಭಾರತಿ ಸಹ ಈಗ ಒಟಿಟಿ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 55ನೇ ಆವೃತ್ತಿಯಲ್ಲಿ ಪ್ರಸಾರ ಭಾರತಿಯ ಒಟಿಟಿ ವೇದಿಕೆ ʼವೇವ್ಸ್ʼ ಅನ್ನು ಲೋಕಾರ್ಪಣೆಗೊಳಿಸಲಾಗಿದೆ.
ವೇವ್ಸ್ – ಮನರಂಜನೆಯ ಹೊಸ ಅಲೆ ಎಂಬ ಘೋಷಣೆಯಡಿ ಪ್ರಸಾರ ಭಾರತಿ ಈಗ ಒಟಿಟಿ ಕ್ಷೇತ್ರಕ್ಕೆ ಕಾಲಿಟ್ಟಿದೆ. ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಚಾಲನೆ ನೀಡಿದರು.
ಪ್ರಸಾರ ಭಾರತಿಯ ಅಧ್ಯಕ್ಷ ನವನೀತ್ ಕುಮಾರ್ ಸೆಹಗಾಲ್ ಈ ಕುರಿತು ಮಾತನಾಡಿ, ಸರಕಾರಿ ಸ್ವಾಮ್ಯದ ಪ್ರಸಾರ ಮಾಧ್ಯಮವಾಗಿ ಸ್ವಚ್ಛ ಹಾಗೂ ಅರೋಗ್ಯಕರವಾದ ಕೌಟುಂಬಿಕ ಮನರಂಜನೆಯನ್ನು ಸಮಾಜದ ಎಲ್ಲ ವರ್ಗಗಳಿಗೆ ಒದಗಿಸಬೇಕಾದುದು ನಮ್ಮ ಹೊಣೆಗಾರಿಕೆಯೂ ಸಹ. ಈ ಹಿನ್ನೆಲೆಯಲ್ಲಿ ವೇವ್ಸ್ ಅನ್ನು ರೂಪಿಸಲಾಗಿದೆʼ ಎಂದು ತಿಳಿಸಿದ್ದಾರೆ.
ವೇವ್ಸ್ ವೈವಿಧ್ಯಮಯ ವಿಷಯಗಳನ್ನು ಹೊಂದಿರಲಿದೆ. ಕೇವಲ ಮನರಂಜನೆಯಷ್ಟೇ ಆಲ್ಲದೇ, ಗೇಮ್ಸ್ ಗಳನ್ನೂ ಹೊಂದಿರಲಿದೆ. ಭಾರತದ ಇತಿಹಾಸ ಮತ್ತು ಶ್ರೀಮಂತ ಸಂಸ್ಕೃತಿಯ ಪ್ರಚಾರಕ್ಕೂ ಈ ಒಟಿಟಿ ವೇದಿಕೆಯಾಗಲಿದೆ.
ಪ್ರಸಾರ ಭಾರತಿಯ ಸಿಇಒ ಗೌರವ್ ದ್ವಿವೇದಿ ಪ್ರಕಾರ, ದೇಶದ ಉದ್ದಗಲಕ್ಕೂ ಮನರಂಜನೆ ಲಭ್ಯವಾಗಬೇಕೆಂಬುದು ವೇವ್ಸ್ ನ ಉದ್ದೇಶ ಎಂದರು.
ಫೌಜಿ, 2. 20, ರಾಮಾಯಣ ಸೇರಿದಂತೆ ಹಲವಾರು ವಿಷಯಗಳು ವೇವ್ಸ್ ನಲ್ಲಿ ಲಭ್ಯವಿವೆ. ಇದರೊಂದದಿಗೆ ವೀಡಿಯೋ ಅನ್ ಡಿಮ್ಯಾಂಡ್ ಆಯ್ಕೆಯೂ ಇದೆ. 65 ಟಿವಿ ಚಾನೆಲ್ ಗಳು, ರೇಡಿಯೋ ಸ್ಟೇಷನ್ ಗಳು, ಉಚಿತ ಗೇಮ್ ಗಳು, ಮಲ್ಟಿ ಮೀಡಿಯಾ ಸೇವೆಯೂ ಸೇರಿದಂತೆ ಹಲವು ಸೌಲಭ್ಯಗಳು ವೇವ್ಸ್ ನಲ್ಲಿ ಲಭ್ಯ. ಇದರೊಂದಿಗೆ ಇ ಕಾಮರ್ಸ್ ವೇದಿಕೆಯೂ ವೇವ್ಸ್ ಆಗಲಿದೆ.
ಬೇಡಿಕೆಯ ಮೇಲೆ ವಿಡಿಯೋ:
ವಿಡಿಯೋ ಅನ್ ಡಿಮ್ಯಾಂಡ್ ಸೇವೆ ಉಳಿದ ಎಲ್ಲ ಒಟಿಟಿ ಗಳಿಗಿಂತ ವೇವ್ಸ್ ಅನ್ನು ವಿಭಿನ್ನವಾಗಿಸಬಹುದು. ಪ್ರಸಾರ ಭಾರತಿ ರಾಮಾಯಣ, ಮಹಾಭಾರತದಿಂದ ಹಿಡಿದು ಅಸಂಖ್ಯಾತ ಲಕ್ಷಾಂತರ ಗಂಟೆಗಟ್ಟಲೆ ನೋಡಬಹುದಾದ, ಆಲಿಸಬಹುದಾದ ಅಮೂಲ್ಯ ವಿಡಿಯೋ, ಆಡಿಯೋ ಕಂಟೆಂಟ್ ಗಳ ಸಂಗ್ರಹವನ್ನು ಹೊಂದಿದೆ. ಇವೆಲ್ಲವೂ ವೇವ್ಸ್ ನ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಯಿದೆ. ಇದನ್ನು ವೀಡಿಯೊ ಆನ್ ಡಿಮ್ಯಾಂಡ್ ನಡಿ ಒದಗಿಸುವ ಆಲೋಚನೆ ವೇವ್ಸ್ ನದ್ದು.
ವೇವ್ಸ್ ಡೌನ್ ಲೋಡ್ ಗೆ ಪ್ಲೇ ಸ್ಟೋರ್ ಗಳಲ್ಲಿ ಲಭ್ಯವಿದೆ. ಡೌನ್ ಲೋಡ್ ಉಚಿತವಾಗಿರಲಿದ್ದು, ಬಹುತೇಕ ಕಂಟೆಂಟ್ ಗಳು ಉಚಿತವಾಗಿರಲಿದೆ. ಕೆಲವು ವಿಶೇಷ (ಪ್ರೀಮಿಯಂ) ಎನ್ನುವ ಕಂಟೆಂಟ್ ಗಳಿಗ ಮಾತ್ರ ದರ ನಿಗದಿಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.