ಮಂಡ್ಯದಲ್ಲಿಂದು 195 ಜನರಿಗೆ ಕೋವಿಡ್ ದೃಢ; 314 ಮಂದಿ ಗುಣಮುಖ, 1 ಸಾವು
Team Udayavani, Sep 24, 2020, 7:53 PM IST
ಮಂಡ್ಯ: ಜಿಲ್ಲೆಯಲ್ಲಿ ಗುರುವಾರ 195 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 314 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.
ಮದ್ದೂರು ತಾಲ್ಲೂಕಿನ 63 ವರ್ಷದ ವೃದ್ಧರೊಬ್ಬರು ಕೋವಿಡ್, ನ್ಯುಮೋನಿಯಾ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 97ಕ್ಕೇರಿದೆ.
195 ಮಂದಿಗೆ ಸೋಂಕು:
ಗುರುವಾರ 195 ಮಂದಿಗೆ ಸೋಂಕು ದೃಢಪಟ್ಟಿದೆ. ಮಂಡ್ಯ 56, ಮದ್ದೂರು 36, ಮಳವಳ್ಳಿ 30, ಪಾಂಡವಪುರ 12, ಶ್ರೀರಂಗಪಟ್ಟಣ 8, ಕೆ.ಆರ್.ಪೇಟೆ 59 ಹಾಗೂ ನಾಗಮಂಗಲದ 8 ಮಂದಿಗೆ ಕೋವಿಡ್ ಸುತ್ತಿಕೊಂಡಿದೆ. ಇದುವರೆಗೂ 9788 ಪ್ರಕರಣಗಳು ದಾಖಲಾಗಿವೆ.
ಸರ್ಕಾರಿ ಆಸ್ಪತ್ರೆಗಳ ಐಸೋಲೇಷನ್‌ನಲ್ಲಿ 401, ಖಾಸಗಿ ಆಸ್ಪತ್ರೆಗಳ ಐಸೋಲೇಷನ್‌ನಲ್ಲಿ 90, ಕೋವಿಡ್ ಕೇರ್ ಸೆಂಟರ್‌ನಲ್ಲಿ 71 ಹಾಗೂ ಹೋಂ ಐಸೋಲೇಷನ್‌ನಲ್ಲಿ 657 ಮಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
1811 ಪರೀಕ್ಷೆ:
ಜಿಲ್ಲೆಯಾದ್ಯಂತ ಗುರುವಾರ 1811 ಮಂದಿ ಕೋವಿಡ್ ಪರೀಕ್ಷಗೊಳಪಟ್ಟಿದ್ದರು. ಇದರಲ್ಲಿ 63 ರ್ಯಾಪಿಡ್ ಹಾಗೂ 1748 ಮಂದಿ ಆರ್‌ಟಿಪಿಸಿಆರ್‌ಗೆ ಒಳಪಟ್ಟಿದ್ದರು.
314 ಮಂದಿ ಗುಣಮುಖ:
ಗುರುವಾರ 314 ಮಂದಿಗೆ ಕೋವಿಡ್ ನಿಂದ ಮುಕ್ತರಾಗಿದ್ದಾರೆ. ಮಂಡ್ಯ 57, ಮದ್ದೂರು 33, ಮಳವಳ್ಳಿ 26, ಪಾಂಡವಪುರ 32, ಶ್ರೀರಂಗಪಟ್ಟಣ 12, ಕೆ.ಆರ್.ಪೇಟೆ 148, ನಾಗಮಂಗಲ 4 ಹಾಗೂ ಹೊರ ಜಿಲ್ಲೆಯ 2 ಇಬ್ಬರು ಸೇರಿದ್ದಾರೆ. ಇದುವರೆಗೂ 8471 ಪ್ರಕರಣಗಳು ಬಿಡುಗಡೆಯಾಗಿದ್ದು, 1219 ಸಕ್ರಿಯ ಪ್ರಕರಣಗಳಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.