Covid19ಗೆ 200 ದಿನ: ದ್ವಿಶತಕದ ಹಾದಿಯಲ್ಲೇ ಶೇ.99ರಷ್ಟು ಪ್ರಕರಣಗಳು ಪತ್ತೆ!

ದ್ವಿಶತಕದ ದಿನಗಳ ದುರ್ಗಮ ಹಾದಿ

Team Udayavani, Sep 25, 2020, 12:37 AM IST

ಕೋವಿಡ್ 19ಗೆ 200 ದಿನ: ಶತಕದ ದ್ವಿತಿಯಾರ್ಧದಲ್ಲೇ ಶೇ.99 ಪ್ರಕರಣಗಳು ಪತ್ತೆ!

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

– ಜಯಪ್ರಕಾಶ್ ಬಿರಾದಾರ್

ಬೆಂಗಳೂರು: ರಾಜ್ಯಕ್ಕೆ ಕೋವಿಡ್ 19 ಸೋಂಕು ಬಾಧೆ ವಕ್ಕರಿಸಿ 200 ದಿನ ಕಳೆದಿದೆ.

ಈ ಅವಧಿಯಲ್ಲಿ ದಾಖಲಾದ ಒಟ್ಟಾರೆ ಪ್ರಕರಣಗಳು ಮತ್ತು ಸೋಂಕಿತರ ಸಾವಿನ ಪೈಕಿ ಶೇ.99ರಷ್ಟು ಪತ್ತೆಯಾಗಿದ್ದು, 101 ರಿಂದ 200 ದಿನಗಳ ನಡುವೆ!

ಈ ಮೂಲಕ ಅನ್‌ಲಾಕ್ ಜಾರಿಯಾದ ನಂತರದ ದಿನಗಳು ರಾಜ್ಯಕ್ಕೆ ಅತ್ಯಂತ ದುರ್ಗಮವಾಗಿವೆ.

ಸದ್ಯ ಒಟ್ಟಾರೆ ಸೋಂಕು ಪ್ರಕರಣಗಳು 5.4ಲಕ್ಷಕ್ಕೆ, ಸೋಂಕಿತರ ಸಾವು 8331 ಕ್ಕೆ ತಲುಪಿವೆ. ಈ ಪೈಕಿ ಮೊದಲ ನೂರು ದಿನಗಳಲ್ಲಿ ಅಂದರೆ, ರಾಜ್ಯಕ್ಕೆ ಸೋಂಕು ಕಾಲಿಟ್ಟ ಮಾರ್ಚ್ 9 ರಿಂದ ಜೂನ್ 16ರವರೆಗೆ ಕೇವಲ 7018 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು, 75 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದರು.

ಆ ನಂತರ ಎರಡನೇ ಶತಕದ ಹಾದಿ ಜೂನ್ 17 ರಿಂದ ಸೆಪ್ಟೆಂಬರ್ 24ರವರೆಗೂ ಬರೋಬ್ಬರಿ 5,41,027 ಮಂದಿ ಸೋಂಕಿತರಾಗಿದ್ದು, 8256 ಮಂದಿ ಮೃತಪಟ್ಟಿದ್ದಾರೆ. ಈ ರೀತಿ ಭಾರೀ ಪ್ರಮಾಣದಲ್ಲಿ ಸೋಂಕು ಹೆಚ್ಚಳಕ್ಕೆ ಸೋಂಕು ಪರೀಕ್ಷೆಗಳು ಹೆಚ್ಚಳವಾಗಿರುವುದು ಮತ್ತು ಜೂನ್ 30 ರಿಂದ ಜಾರಿಯಾದ ಅನ್‌ಲಾಕ್ ಪ್ರಕ್ರಿಯೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಅಂದು ಮಾದರಿಯಾಗಿದ್ದವು!
ಜೂನ್ ಅಂತ್ಯದವರೆಗೂ ಸೋಂಕು ನಿರ್ವಹಣೆಯಲ್ಲಿ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರು ಮುಂಚೂಣಿ ಸ್ಥಾನದಲ್ಲಿದ್ದವು. ನಿರ್ವಹಣೆ ಕುರಿತು ಕೇಂದ್ರ ಸರ್ಕಾರದಿಂದಲೂ ಉತ್ತಮ ಅಭಿಪ್ರಾಯಗಳು ಕೇಳಿ ಬಂದಿದ್ದವು. ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಟಾಪ್ 10ರೊಳಗೂ ಬಂದಿರಲಿಲ್ಲ.

ಸದ್ಯ ಪರಿಸ್ಥಿತಿ ಸಂಪೂರ್ಣ ಉಲ್ಟಾ ಆಗಿದೆ. ರಾಜ್ಯವು ಸೋಂಕು ಪ್ರಕರಣಗಳಲ್ಲಿ ನಾಲ್ಕು, ಸೋಂಕಿತರ ಸಾವಿನಲ್ಲಿ ಮೂರನೇ ಸ್ಥಾನಕ್ಕೇರಿದೆ. ಅಲ್ಲದೆ, ಎರಡನೇ ಅತಿ ಹೆಚ್ಚು ಸಕ್ರಿಯ ಪ್ರಕರಣ (ಪಾಸಿಟಿವ್ ಕೇಸ್) ಇಲ್ಲಿವೆ.

ಇನ್ನು, ಆರಂಭದಲ್ಲಿ ಸೋಂಕು ನಿರ್ವಹಣೆಯಲ್ಲಿ ಬೆಂಗಳೂರು ದೇಶದ ಮಹಾನಗರಗಳಿಗೆ ಮಾದರಿಯಾಗಿತ್ತು. ಆದರೆ, ಇಂದು ಬೆಂಗಳೂರು, ಮುಂಬೈಯನ್ನೇ ಮೀರಿಸಿದೆ.  ದೇಶದಲ್ಲಿಯೇ ಮೂರನೇ ಅತಿ ಹೆಚ್ಚು ಪ್ರಕರಣಗಳು (2.1 ಲಕ್ಷ) ಇಲ್ಲಿ ವರದಿಯಾಗಿವೆ.

ಪೂನಾ ಬಿಟ್ಟರೆ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು (ಪಾಸಿಟಿವ್ ಕೇಸ್ -40285) ಅನ್ನು ಬೆಂಗಳೂರು ಹೊಂದಿದೆ. ಇನ್ನು ಇಲ್ಲಿ ಸ್ಥಾಪನೆಯಾಗಿದ್ದ ಪ್ರಪಂಚದ ದೊಡ್ಡ ಆರೈಕೆ ಕೇಂದ್ರವನ್ನೂ (ಕೋವಿಡ್ ಕೇರ್ ಸೆಂಟರ್) ಬಂದ್ ಮಾಡಲಾಗಿದೆ.

ಅನ್‌ಲಾಕ್ ಆದಂತೆ ವೈರಸ್ ಅಲಕ್ಷ್ಯ!
ಅನ್‌ಲಾಕ್ ಜಾರಿಯಾಗುತ್ತಿದ್ದಂತೆ ಜನರೂ ಕೂಡಾ ಕೋವಿಡ್ 19 ಸೋಂಕನ್ನು ಅಲಕ್ಷ್ಯದಿಂದ ಕಾಣಲಾರಂಭಿಸಿದ್ದಾರೆ ಎನ್ನುತ್ತಾರೆ ಆರೋಗ್ಯ ವಲಯದ ತಜ್ಞರು. ಸಾರ್ವಜನಿಕ ಸ್ಥಳದಲ್ಲಿ ಜನದಟ್ಟಣೆ ಕೋವಿಡ್ 19 ಪೂರ್ವದಂತೆಯೇ ಮುಂದುವರೆದಿದೆ.

ಜನ ಪೂರ್ಣ ಪ್ರಮಾಣದಲ್ಲಿ ಮಾಸ್ಕ್ ಹಾಕುವುದಿಲ್ಲ. ಸೋಂಕು ಲಕ್ಷಣ ಕಾಣಿಸಿಕೊಂಡ ನಂತರವೂ ಮನೆಯಲ್ಲಿದ್ದು, ಅಂತಿಮ ಹಂತದಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಸೋಂಕು ದೃಢಪಟ್ಟವರು ಕ್ವಾರಂಟೈನ್ ನಿಯಮಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ, ಸೋಂಕು ಪ್ರಕರಣಗಳು ಮತ್ತು ಸೋಂಕಿತರ ಸಾವು ಹೆಚ್ಚಳವಾಗಿವೆ ಎನ್ನುವುದು ತಜ್ಞರ ಅಭಿಪ್ರಾಯ.

ಅಂಕಿ ಅಂಶಗಳು ಅದನ್ನೇ ಹೇಳುತ್ತಿದ್ದು, ಅನ್‌ಲಾಕ್ 1ರಲ್ಲಿ 30 ಸಾವಿರ, ಅನ್‌ಲಾಕ್ 2ರಲ್ಲಿ 3.07 ಲಕ್ಷ, ಅನ್‌ಲಾಕ್ 3ರಲ್ಲಿ 1.82 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿವೆ. ಸದ್ಯ ಸೆ.21 ರಿಂದ ಅನ್‌ಲಾಕ್ ನಾಲ್ಕು ಆರಂಭವಾಗಿದ್ದು, ಸೋಂಕು ಪ್ರಕರಣಗಳು ಉಲ್ಬಣವಾಗುತ್ತಲೇ ಇವೆ. ಹೀಗಾಗಿಯೇ ಸೋಂಕು ನಿಗ್ರಹಕ್ಕೆ ಸೂಕ್ತ ಕ್ರಮ ಜಾರಿಗೊಳಿಸಲು ಕೇಂದ್ರದಿಂದ ಸಲಹೆಗಳು ಬಂದಿವೆ. ಸೋಂಕು ಪರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಲು ತಜ್ಞರ ಸಮಿತಿಯೂ ಶಿಫಾರಸ್ಸು ಮಾಡಿದೆ.

ಕೆಲ ಜಿಲ್ಲಾ ಕೇಂದ್ರಗಳಲ್ಲಿ ಭಾರೀ ಹೆಚ್ಚಳ
ನೂರು ದಿನಗಳಾದ ಸಂದರ್ಭದಲ್ಲಿ ಟಾಪ್ 10 ರೊಳಗೆ ಸ್ಥಾನ ಪಡೆಯದ ಮೈಸೂರು, ಬಳ್ಳಾರಿಯಲ್ಲಿ ಪ್ರಕರಣಗಳು 300 ಪಟ್ಟು ಹೆಚ್ಚಳವಾಗಿವೆ. ಧಾರವಾಡ ಶಿವಮೊಗ್ಗದಲ್ಲಿ ನೂರು ಪಟ್ಟು ಹೆಚ್ಚಳವಾಗಿದೆ. ಸದ್ಯ ಬೆಂಗಳೂರಿನ ನಂತರದ ಮೂರು ಸ್ಥಾನದಲ್ಲಿ ಮೈಸೂರು (31092) ಬಳ್ಳಾರಿ (29652) ದಕ್ಷಿಣ ಕನ್ನಡ (20,764) ಇವೆ. ಉಳಿದಂತೆ 10 ಜಿಲ್ಲೆಗಳಲ್ಲಿ 10 ಸಾವಿರಕ್ಕೂ ಹೆಚ್ಚು, 13 ಜಿಲ್ಲೆಗಳಲ್ಲಿ ಐದು ಸಾವಿರಕ್ಕೂ ಹೆಚ್ಚು, ಮೂರು ಜಿಲ್ಲೆಗಳಲ್ಲಿ ಐದು ಸಾವಿರಕ್ಕೂ ಕಡಿಮೆ ಸೋಂಕು ಪ್ರಕರಣಗಳು ಕಾಣಿಸಿಕೊಂಡಿವೆ.

ಸೋಂಕಿಗೆ ಬಲಿಯಾದ ರಾಜ್ಯದ ಗಣ್ಯರು: ಬಿಜೆಪಿ ರಾಜ್ಯ ಸಭಾ ಸದಸ್ಯ ಅಶೋಕ್ ಗಸ್ತಿ, ಕೇಂದ್ರ ಸಚಿವ ಸುರೇಶ್ ಅಂಗಡಿ, ಬಸವಕಲ್ಯಾಣ ಶಾಸಕ ನಾರಾಯಣ ರಾವ್.

50 ದಿನಗಳ ಹಾದಿ           – ಸೋಂಕು ಪ್ರಕರಣಗಳು – ಸೋಂಕಿತರ ಸಾವು – ಸೋಂಕು ಪರೀಕ್ಷೆ

ಮಾರ್ಚ್ 9  – ಏಪ್ರಿಲ್ 27  –         512                             –               19                 –            45,685

ಏಪ್ರಿಲ್ 28 – ಜೂನ್ 16      –      7,018                            –               75                 –            3,93,969

ಜೂನ್ 17- ಆಗಸ್ಟ್ 5           –       1,43,919                      –                2710            –            10,75,387

ಆಗಸ್ಟ್ 6 – ಸೆಪ್ಟೆಂಬರ್ 24  –      397108                        –                5527            –            2,92,6350

 

ಒಟ್ಟಾರೆ ಸೋಂಕು ಪ್ರಕರಣಗಳು – 5,48,557

ಗುಣಮುಖ – 4,44,658 (ಶೇ.81)

ಸೋಂಕಿತರ ಮರಣ – 8331 (ಶೇ.1.5)

ಸಕ್ರಿಯ ಪ್ರಕರಣಗಳು – 95549 (ಶೇ.17.5)

ಒಟ್ಟಾರೆ ಸೋಂಕು ಪರೀಕ್ಷೆ – 44.5 ಲಕ್ಷ

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

Devegowda

Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್‌.ಡಿ.ದೇವೇಗೌಡ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.