ಕೋವಿಡ್ ರೂಪಾಂತರ ಭೀತಿ: ಇಂಗ್ಲೆಂಡ್ ನಿಂದ ಬಂದ 22 ಜನರಿಗೆ ಸೋಂಕು ದೃಢ
Team Udayavani, Dec 24, 2020, 9:23 AM IST
ಹೊಸದಿಲ್ಲಿ: ಕಳೆದ ಕೆಲವು ದಿನಗಳಿಂದ ಇಂಗ್ಲೆಂಡ್ ನಿಂದ ಬಂದಿರುವ ಜನರಲ್ಲಿ ಕನಿಷ್ಠ 22 ಮಂದಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದೆ ಎಂದು ವರದಿಯಾಗಿದೆ. ಇಂಗ್ಲೆಂಡ್ ನಲ್ಲಿ ರೂಪಾಂತರಿತ ಕೋವಿಡ್ ವೈರಸ್ ಪತ್ತೆಯಾಗಿರುವ ಕಾರಣ ಆ ದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ.
ಯು.ಕೆ ನಿಂದ ದಿಲ್ಲಿಗೆ ಆಗಮಿಸಿರುವ 11 ಮಂದಿ ಸೋಂಕು ಕಾಣಿಸಿಕೊಂಡಿದ್ದು, ಅಮೃತಸರಕ್ಕೆ ಬಂದಿಳಿದ ಎಂಟು ಮಂದಿಗೆ, ಕೋಲ್ಕತ್ತಾದಲ್ಲಿ ಎರಡು ಮತ್ತು ಚೆನ್ನೈ ನಲ್ಲಿ ಒಂದು ಸೋಂಕು ಪ್ರಕರಣ ಕಂಡುಬಂದಿದೆ ಎಂದು ವರದಿ ತಿಳಿಸಿದೆ. ಆದರೆ ರೂಪಾಂತರಿತ ಕೋವಿಡ್ ಸೋಂಕು ಪ್ರಕರಣದ ಬಗ್ಗೆ ದೇಶದಲ್ಲಿ ಇದುವರಗೆ ಯಾವುದೇ ಪ್ರಕರಣಗಳಲ್ಲಿ ದೃಢವಾಗಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಕೋವಿಡ್ ಪರಿಹಾರ ಪ್ಯಾಕೇಜ್ ಮಸೂದೆಗೆ ಸಹಿಹಾಕದಿರಲು ಟ್ರಂಪ್ ನಿರ್ಧಾರ
ಕೋವಿಡ್ ಪಾಸಿಟಿವ್ ಕಂಡುಬಂದವರ ಮಾದರಿಗಳನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಂತಹ ವಿಶೇಷ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಅಧಿಕಾರಿಗಳು ಕಳೆದ ನಾಲ್ಕು ವಾರಗಳಲ್ಲಿ ಯುಕೆ ಯಿಂದ ಬಂದ ಪ್ರತಿ ಪ್ರಯಾಣಿಕರನ್ನು ಪತ್ತೆಹಚ್ಚುತ್ತಿದ್ದಾರೆ. ಕಳೆದ ಎರಡು ವಾರಗಳಲ್ಲಿ ಬಂದವರಿಗೆ ಕಟ್ಟುನಿಟ್ಟಾದ ಸ್ವಯಂ-ಮೇಲ್ವಿಚಾರಣೆ ನಡೆಸಬೇಕೆಂದು ಸೂಚನೆ ನೀಡುತ್ತಿದ್ದಾರೆ.
ಭಾರತವು ಇಂಗ್ಲೆಂಡ್ ನಿಂದ ಬರುವ ಎಲ್ಲಾ ವಿಮಾನಗಳನ್ನು ಡಿಸೆಂಬರ್ 31 ರವರೆಗೆ ಸ್ಥಗಿತಗೊಳಿಸಿದೆ. ಎರಡನೇ ಅಲೆ ಭೀತಿಯ ಕಾರಣದಿಂದ ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…