ಅದೊಂದು ಕಾರಣಕ್ಕೆ 2ನೇ ಬಾರಿ ಲಾಕ್‌ಡೌನ್!
2ನೇ ಲಾಕ್‌ಡೌನ್‌ನಿಂದಾಗಿ ಮೆಲ್ಬರ್ನ್ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಿದೆ
Team Udayavani, Jul 9, 2020, 11:46 AM IST
ಮೆಲ್ಬರ್ನ್: ಆಸ್ಟ್ರೇಲಿಯಾದ ಅತೀ ದೊಡ್ಡ ನಗರಗಳಲ್ಲಿ ಒಂದಾದ ಮೆಲ್ಬರ್ನ್ ಕೋವಿಡ್ ವಿಚಾರದಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸುತ್ತಿದ್ದರೆ ಈ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ. ಆಸ್ಟ್ರೇಲಿಯಾದ ಹೆಚ್ಚಿನ ನಗರಗಳು ಲಾಕ್‌ಡೌನ್ ಬಳಿಕ ತೆರೆದುಕೊಂಡು ಯಥಾಸ್ಥಿತಿಗೆ ಮರಳಿದ್ದರೆ ಮೆಲ್ಬರ್ನ್ ಮಾತ್ರ ಜನರನ್ನು ಮನೆಯೊಳಗೇ ಕೂರುವಂತೆ ಹೇಳಿ ಮತ್ತೆ ಲಾಕ್‌ಡೌನ್ ಘೋಷಿಸಬೇಕಾಯಿತು.
ಇದಕ್ಕೆ ಕಾರಣವಾಗಿದ್ದು ವಿದೇಶಗಳಿಂದ ಬಂದ ಆಸ್ಟ್ರೇಲಿಯಾ ಪ್ರಜೆಗಳನ್ನು ನಿರ್ವಹಣೆ ಮಾಡುವಲ್ಲಿ ಎಡವಿದ್ದು! ಕಳೆದೊಂದು ತಿಂಗಳಲ್ಲಿ ವಿಕ್ಟೋರಿಯಾ ರಾಜ್ಯದ ರಾಜಧಾನಿ ಮೆಲ್ಬರ್ನ್ನಲ್ಲಿ ಅತೀ ಹೆಚ್ಚು ಕೇಸುಗಳು ದಾಖಲಾಗಿವೆ. ಈ ಕಾರಣ ಅನಿವಾರ್ಯವಾಗಿ ಲಾಕ್‌ಡೌನ್ ಘೋಷಿಸಲಾಗಿದೆ. 6 ವಾರಗಳ ಲಾಕ್‌ಡೌನ್ ಘೋಷಣೆಯಿಂದ ಆರ್ಥಿಕವಾಗಿ ತೀವ್ರವಾಗಿ ಪೆಟ್ಟು ಬೀಳಬಹುದು ಎಂದು ತಿಳಿದಿದ್ದರೂ, ಲಾಕ್‌ಡೌನ್ ಮಾಡಲೇಬೇಕಾಗಿದೆ. ಆದರೂ ಜನಜೀವನ, ಆರ್ಥಿಕ ದೃಷ್ಟಿಯಿಂದ ರಾಜ್ಯದ ಮುಖ್ಯಮಂತ್ರಿ ಡೇನಿಯಲ್ ಆಂಡ್ರೂಸ್ ಅವರು ಅಗತ್ಯ ಕೆಲಸ, ಓದು, ವೈದ್ಯಕೀಯ ಕೆಲಸಗಳಿಗೆ ಜನರು ಹೊರಗೆ ಹೋಗಬಹುದು ಎಂದು ಅನುಮತಿ ನೀಡಿದ್ದಾರೆ.
ವಿದೇಶಗಳಿಂದ ಬಂದವರನ್ನು ಸೂಕ್ತವಾಗಿ ಕ್ವಾರಂಟೈನ್‌ಗೆ ಒಳಪಡಿಸುವುದರಲ್ಲಿ, ಸೋಂಕು ಪೀಡಿತರನ್ನು ನಿರ್ವಹಣೆ ಮಾಡುವುದರಲ್ಲಿ ಸ್ಥಳೀಯಾಡಳಿತ ಎಡವಿದೆ ಎನ್ನಲಾಗಿದೆ. ಇದರೊಂದಿಗೆ ಕೋವಿಡ್ ಪೀಡಿತರನ್ನು ರವಾನಿಸುವಾಗ ಸೂಕ್ತ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳದಿರುವುದು, ಅವರ ಕುಟುಂಬಸ್ಥರಿಗೆ ಭೇಟಿಗೆ ಅವಕಾಶ ನೀಡಿದ್ದು, ಕೆಲವೊಂದು ಕೇಂದ್ರಗಳಲ್ಲಿ ಕೋವಿಡ್ ರೋಗಿಗಳು, ಜನಸಾಮಾನ್ಯರಿಗೆ ಮುಖಾಮುಖೀಯಾಗಿರುವಂತೆ ಆಗಿದ್ದು ಇತ್ಯಾದಿ ಕಾರಣಗಳನ್ನು ಆಸ್ಟ್ರೇಲಿಯಾದ ಹೆರಾಲ್ಡ್ ಸನ್ ಪತ್ರಿಕೆ ಬೊಟ್ಟು ಮಾಡಿದೆ.
ಇದರೊಂದಿಗೆ ಕೋವಿಡ್ ಕೇಂದ್ರಗಳಲ್ಲಿ ಕರ್ತವ್ಯ ನಿರತರಾಗಿದ್ದ ಗಾರ್ಡ್‌ಗಳು ಸಿಗರೆಟ್ ಲೈಟರ್‌ಗಳನ್ನು ಹಂಚಿಕೊಂಡಿದ್ದು, ಒಟ್ಟಿಗೆ ಕಾರುಗಳಲ್ಲಿ ಹೋಗಿ ಬರುತ್ತಿದ್ದುದರಿಂದ ಸೋಂಕು ಅವರ ಸಮುದಾಯದಲ್ಲೂ ಹಬ್ಬಲು ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Kollywood: ಯೂಟ್ಯೂಬ್ ವಿಮರ್ಶೆ ಬ್ಯಾನ್ ಮಾಡಲು ತಮಿಳು ನಿರ್ಮಾಪಕರ ಸಂಘ ಆಗ್ರಹ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.