5,007 ಮಂದಿಗೆ ಸೋಂಕು ; ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಗುಣಮುಖ
ವಾರದ ಬಳಿಕ ಮೂರಂಕಿ ಸಾವು
Team Udayavani, Jul 25, 2020, 5:56 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ಶುಕ್ರವಾರ 5,007 ಮಂದಿಗೆ ಸೋಂಕು ತಗಲಿದ್ದು, 110 ಮಂದಿ ಸಾವಿಗೀಡಾಗಿದ್ದಾರೆ.
ವಾರದ ಬಳಿಕ ಸಾವಿನ ಸಂಖ್ಯೆ ಮೂರಂಕೆಗೇರಿದೆ. ಜತೆಗೆ 2,000ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.
ಒಟ್ಟಾರೆ ಸೋಂಕು ಪ್ರಕರಣಗಳು 85,870, ಸಾವು 1,724 ಹಾಗೂ ಚೇತರಿಕೆ 31,347ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು 50 ಸಾವಿರ ಗಡಿ ದಾಟಿದೆ.
52,791 ಸೋಂಕಿತರು ಆಸ್ಪತ್ರೆ, ಕೋವಿಡ್ 19 ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ಆಸ್ಪತ್ರೆಯಲ್ಲಿರುವವರ ಪೈಕಿ 611 ಮಂದಿ ಐಸಿಯುನಲ್ಲಿದ್ದು, 8,000ಕ್ಕೂ ಹೆಚ್ಚು ಸೋಂಕಿತರನ್ನು ಹೈ ರಿಸ್ಕ್ ಎಂದು ಗುರುತಿಸಲಾಗಿದೆ.
ಜುಲೈ 17ಕ್ಕೆ 115 ಸಾವು ಸಂಭವಿಸಿತ್ತು. ಜುಲೈ 18ರಿಂದ 22ರವರೆಗೆ ಕ್ರಮವಾಗಿ 93, 91, 72, 61, 55ಕ್ಕೆ ಇಳಿಕೆಯಾಗುತ್ತಾ ಸಾಗಿತ್ತು. ಗುರುವಾರ ಮತ್ತೆ ಏರಿಕೆಯಾಗಿ 97 ಮಂದಿ ಸಾವಿಗೀಡಾಗಿದ್ದರು.
ಶುಕ್ರವಾರ 110 ಮಂದಿ ಮೃತಪಟ್ಟಿದ್ದು, ಇದು ದೇಶದಲ್ಲಿಯೇ ಎರಡನೇ ಅತಿ ಹೆಚ್ಚಿನ ಸಾವಿನ ಸಂಖ್ಯೆಯಾಗಿದೆ. ಬೆಂಗಳೂರು 50, ಮೈಸೂರು, ದಕ್ಷಿಣ ಕನ್ನಡ ತಲಾ 6, ಧಾರವಾಡ, ಕಲಬುರಗಿ ಹಾಗೂ ತುಮಕೂರು ತಲಾ 5 ಸಾವು ಸಂಭವಿಸಿದೆ.
ಸಾವಿನಲ್ಲಿ ಬೆಂಗಳೂರು ಪ್ರಥಮ, ಮೈಸೂರು (99) ಎರಡನೇ ಸ್ಥಾನದಲ್ಲಿದೆ. ಶುಕ್ರವಾರ ಮೃತಪಟ್ಟವರ ಪೈಕಿ 8 ಮಂದಿಗೆ ಸೋಂಕಿನ ಲಕ್ಷಣ ವಿರಲಿಲ್ಲ ಹಾಗೂ 22 ಮಂದಿಗೆ ಬೇರೆ ಕಾಯಿಲೆಗಳಿರಲಿಲ್ಲ.
2ನೇ ದಿನವೂ 5000ಕ್ಕೂ ಹೆಚ್ಚು ಕೇಸ್
ಗುರುವಾರ 5,030 ಮಂದಿಗೆ ಸೋಂಕು ಖಚಿತಪಟ್ಟಿತ್ತು. ಆರ್‌ಟಿಪಿಸಿಆರ್ 22,408 ಮತ್ತು ರ್ಯಾಪಿಡ್ ಆ್ಯಂಟಿಜನ್ 7,411 ಸೇರಿ ಒಟ್ಟು 29,819 ಪರೀಕ್ಷೆ ನಡೆದಿದ್ದು, ಶುಕ್ರವಾರ 5,007 ಮಂದಿಗೆ ಪಾಸಿಟಿವ್ ಬಂದಿದೆ. ಪಾಸಿಟಿವಿಟಿ ದರ ಶೇ.16ರಷ್ಟಿದ್ದು, ಪರೀಕ್ಷೆಗೊಳಪಟ್ಟ ನೂರು ಮಂದಿಯಲ್ಲಿ 16 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
11 ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಕೇಸ್
ಬೆಂಗಳೂರು, ಮೈಸೂರಿನಲ್ಲಿ 200ಕ್ಕೂ ಹೆಚ್ಚು, ಉಡುಪಿ, ಬಾಗಲಕೋಟೆ, ದಕ್ಷಿಣ ಕನ್ನಡ, ಧಾರವಾಡ, ಕಲಬುರಗಿ, ವಿಜಯಪುರ, ಬಳ್ಳಾರಿ, ಹಾಸನ, ಬೆಳಗಾವಿ, ಗದಗ ಹಾಗೂ ರಾಯಚೂರು ಸೇರಿ ಒಟ್ಟು 11 ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.
ಶೇ. 75ರಷ್ಟು ಸಕ್ರಿಯ
ಶುಕ್ರವಾರ ಪತ್ತೆಯಾದ ಪ್ರಕರಣ ಹಾಗೂ ಸಾವಿನಲ್ಲಿ ಅರ್ಧದಷ್ಟು ರಾಜಧಾನಿಯದ್ದಾಗಿದೆ. ಬೆಂಗಳೂರಿ ನಲ್ಲಿ 2,267 ಮಂದಿ ಸೋಂಕಿತರಾಗಿದ್ದು, 50 ಮಂದಿ ಸಾವಿಗೀಡಾಗಿದ್ದಾರೆ. 746 ಸೋಂಕಿತರು ಗುಣಮುಖರಾಗಿದ್ದಾರೆ. ಬೆಂಗಳೂರಿನ ಒಟ್ಟಾರೆ ಪ್ರಕರಣಗಳು 41 ಸಾವಿರಕ್ಕೇರಿದ್ದು, ಈ ಪೈಕಿ 30,561 ಮಂದಿ (ಶೇ.75ಕ್ಕೂ ಹೆಚ್ಚು) ಇಂದಿಗೂ ಚಿಕಿತ್ಸೆಯಲ್ಲಿದ್ದಾರೆ.
2,000ಕ್ಕೂ ಹೆಚ್ಚು ಸೋಂಕುಮುಕ್ತ
ಎರಡನೇ ದಿನವೂ 2,000ಕ್ಕೂ ಹೆಚ್ಚು ಚೇತರಿಸಿಕೊಂಡಿದ್ದಾರೆ. ಗುರುವಾರ 2,071 ಮಂದಿ, ಶುಕ್ರ ವಾರ 2,037 ಮಂದಿ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯ ಗುಣಮುಖ ದರ ಶೇ.36.5, ಮರಣ ದರ ಶೇ.2, ಸೋಂಕು ಬೆಳವಣಿಗೆ ದರ ಶೇ.8ರಷ್ಟಿದೆ.
ದ.ಕ., ಉಡುಪಿ: 370 ಪಾಸಿಟಿವ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 180 ಮತ್ತು ಉಡುಪಿ ಜಿಲ್ಲೆಯಲ್ಲಿ 190 ಮಂದಿಗೆ ಶುಕ್ರವಾರ ಕೋವಿಡ್ 19 ಸೋಂಕು ದೃಢಪಟ್ಟಿದೆ. ದ.ಕ.ದಲ್ಲಿ ಕಳೆದ ಎರಡು ದಿನಗಳಲ್ಲಿ ಮೃತಪಟ್ಟ 8 ಮಂದಿಯ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ದ.ಕ.ದಲ್ಲಿ 125 ಮತ್ತು ಉಡುಪಿಯಲ್ಲಿ 88 ಮಂದಿ ಶುಕ್ರವಾರ ಗುಣ ಹೊಂದಿದ್ದಾರೆ.
ಜಾಗತಿಕ ಸೋಂಕು ಪೀಡಿತರ ಸಂಖ್ಯೆ: 1,57,84,177
ಒಟ್ಟು ಸಾವು (ಜಗತ್ತು): 6,38,976
ಭಾರತ (ಸೋಂಕು): 13,23,471
ಚೇತರಿಕೆ: 8,47,803
ಸಾವು (ಭಾರತ): 31,112
ಕರ್ನಾಟಕ (ಸೋಂಕು): 85,870
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.