ಕೋವಿಡ್ ಕಳವಳ – July 29: 5503 ಹೊಸ ಪ್ರಕರಣಗಳು ; 2397 ಡಿಸ್ಚಾರ್ಜ್ ; 92 ಸಾವು
ಬೆಂಗಳೂರು ನಗರ 2270, ಬಳ್ಳಾರಿ 338, ಬೆಳಗಾವಿ 279, ದಾವಣಗೆರೆ 225, ದಕ್ಷಿಣ ಕನ್ನಡ 208 ಮತ್ತು ಉಡುಪಿ 173 ಸೋಂಕು ಪ್ರಕರಣಗಳು ವರದಿ
Team Udayavani, Jul 29, 2020, 6:04 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ಮಂಗಳವಾರ ಸಾಯಂಕಾಲದಿಂದ ಬುಧವಾರ ಸಾಯಂಕಾಲದವರೆಗಿನ ಕೋವಿಡ್ 19 ಸೋಂಕು ಪ್ರಕರಣಗಳ ವರದಿಯ ಪ್ರಕಾರ, ಈ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 5503 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ.
ಈ ನಿರ್ಧಿಷ್ಟ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 2397 ಸೋಂಕಿತರು ಗುಣಮುಖರಾಗಿದ್ದಾರೆ. ಮತ್ತು ಈ ಅವಧಿಯಲ್ಲಿ 92 ಸೋಂಕಿತರು ಮೃತಪಟ್ಟಿದ್ದಾರೆ.
ಇದೀಗ ರಾಜ್ಯದಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ 112504 ಆಗಿದೆ. 42901 ಸೊಂಕಿತರು ಚೇತರಿಸಿಕೊಂಡಿದ್ದಾರೆ ಹಾಗೂ ರಾಜ್ಯದಲ್ಲಿ ಕೋವಿಡ್ 19 ಸೊಂಕು ಸಂಬಂಧಿ 2147 ಸಾವಿನ ಪ್ರಕರಣಗಳು ದಾಖಲಾಗಿವೆ ಹಾಗೂ 08 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 639 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇದೀಗ ಒಟ್ಟು 67448 ಸಕ್ರಿಯ ಕೋವಿಡ್ 19 ಸೋಂಕು ಪ್ರಕರಣಗಳಿವೆ.
ಈ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 2270 ಕೋವಿಡ್ 19 ಸೊಂಕು ಪ್ರಕರಣಗಳು ವರದಿಯಾಗುವ ಮೂಲಕ ಸೋಂಕು ಪ್ರಕರಣಗಳಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಆ ಬಳಿಕದ ಸ್ಥಾನಗಳಲ್ಲಿ ಬೆಂಗಳೂರು ನಗರ (2270), ಬಳ್ಳಾರಿ (338), ಬೆಳಗಾವಿ (279), ದಾವಣಗೆರೆ (225), ದಕ್ಷಿಣ ಕನ್ನಡ (208), ಮೈಸೂರು (200), ಧಾರವಾಡ (175), ಉಡುಪಿ (173), ಕಲಬುರಗಿ (168), ಶಿವಮೊಗ್ಗ (131), ತುಮಕೂರು (128) ಮತ್ತು ಯಾದಗಿರಿ (114) ಜಿಲ್ಲೆಗಳಿವೆ.
ಇನ್ನುಳಿದಂತೆ, ಚಿಕ್ಕಬಳ್ಳಾಪುರ – 96, ಹಾಸನ – 95, ಬೀದರ್ – 91, ವಿಜಯಪುರ – 90, ಕೊಪ್ಪಳ – 84, ಉತ್ತರ ಕನ್ನಡ – 75, ರಾಯಚೂರು – 73, ಮಂಡ್ಯ – 70, ಗದಗ – 61, ಬಾಗಲಕೋಟೆ – 57, ರಾಮನಗರ – 56, ಚಿತ್ರದುರ್ಗ – 52, ಹಾವೇರಿ – 50, ಬೆಂಗಳೂರು ಗ್ರಾಮಾಂತರ – 49, ಕೋಲಾರ – 34, ಚಿಕ್ಕಮಗಳೂರು – 33 ಮತ್ತು ಚಾಮರಾಜನಗರ – 20 ಸೇರಿದಂತೆ ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ ಇಂದು ಮೂರಂಕಿ ಹಾಗೂ ಎರಡಂಕಿಯ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕೊಡಗು ಜಿಲ್ಲೆಯಲ್ಲಿ 08 ಕೋವಿಡ್ 19 ಸೋಂಕು ಪ್ರಕರಣಗಳು ಇಂದು ವರದಿಯಾಗಿದೆ.
ಇಂದು ರಾಜ್ಯದಲ್ಲಿ ಒಟ್ಟು 16995 Rapid ಆ್ಯಂಟಿಜೆನ್ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದ್ದು ಈ ಮೂಲಕ Rapid ಆ್ಯಂಟಿಜೆನ್ ಸೋಂಕು ಪತ್ತೆ ಪರೀಕ್ಷೆಗಳ ಸಂಖ್ಯೆ ರಾಜ್ಯದಲ್ಲಿ 104603ಕ್ಕೆ ಏರಿಕೆಯಾಗಿದೆ. ಇನ್ನುಳಿದಂತೆ RT PCR ಮತ್ತು ಇನ್ನಿತರೇ ವಿಧಾನಗಳ ಮೂಲಕ 15995 ಸೋಂಕು ಪತ್ತೆ ಪರೀಕ್ಷೆಗಳನ್ನು ಈ ಅವಧಿಯಲದಲಿ ನಡೆಸಲಾಗಿದೆ.
ಒಟ್ಟಾರೆಯಾಗಿ ಒಂದೇ ದಿನದಲ್ಲಿ 32,990 ಸೋಂಕು ಪತ್ತೆ ಪರೀಕ್ಷೆಗಳನ್ನು ರಾಜ್ಯದಲ್ಲಿ ನಡೆಸಲಾಗಿದ್ದು, ಇಲ್ಲಿಯವರೆಗೆ ಒಟ್ಟು 12,75,761 ಜನರಿಗೆ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು ಕೋವಿಡ್ 19 ಸೋಂಕಿತ ಪ್ರಕರಣಗಳ ಸಂಖ್ಯೆ 51091ಕ್ಕೆ ಏರಿಕೆಯಾಗಿದ್ದು, 13879 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 36224ಕ್ಕೆ ಏರಿಕೆಯಾಗಿದೆ. ಇಲ್ಲಿ ಕೋವಿಡ್ ಸಂಬಂಧಿತ 987 ಸಾವು ಸಂಭವಿಸಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 5720 ಕೋವಿಡ್ 19 ಸೋಂಕಿನ ಪ್ರಕರಣಗಳು ದಾಖಲಾಗಿದ್ದು 2229 ಜನ ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು 3417 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಇಲ್ಲಿ ಕೋವಿಡ್ 19 ಸಂಬಂಧಿತ 74 ಸಾವು ಸಂಭವಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 5306ಕ್ಕೆ ಏರಿಕೆಯಾಗಿದ್ದು ಇವರಲ್ಲಿ 2456 ಸೋಂಕಿತರು ಗುಣಮುಖರಾಗಿದ್ದಾರೆ. 2725 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಹಾಗೂ ಇಲ್ಲಿ ಕೋವಿಡ್ ಸಂಬಂಧಿತ 123 ಸಾವು ಸಂಭವಿಸಿದೆ. ಬೆಂಗಳೂರು ನಗರ (987) ಹಾಗೂ ಮೈಸೂರು (128) ಜಿಲ್ಲೆಗಳ ಬಳಿಕ ಕೋವಿಡ್ 19 ಸಂಬಂಧಿ ಅತೀ ಹೆಚ್ಚಿನ ಸಾವು ಸಂಭವಿಸಿರುವ ಜಿಲ್ಲೆ ಇದಾಗಿದೆ.
ಕಲಬುರಗಿಯಲ್ಲಿ ಒಟ್ಟು 4946 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 2429 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 2435 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಹಾಗೂ ಇಲ್ಲಿ 82 ಜನರು ಈ ಸೋಂಕಿಗೆ ಮೃತಪಟ್ಟಿದ್ದಾರೆ.
ಇನ್ನು ಉಡುಪಿ ಜಿಲ್ಲೆಯಲ್ಲಿ 3894 ಕೋವಿಡ್ 19 ಸೋಂಕಿನ ಪ್ರಕರಣಗಳು ದಾಖಲಾಗಿದ್ದು 2311 ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಹಾಗೂ ಜಿಲ್ಲೆಯಲ್ಲಿ 1558 ಸಕ್ರಿಯ ಪ್ರಕರಣಗಳಿವೆ. ಇಲ್ಲಿ ಕೋವಿಡ್ 19 ಸೋಂಕು ಸಂಬಂಧಿ 25 ಸಾವಿನ ಪ್ರಕರಣಗಳು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.