6ಲಕ್ಷ ದಾಟಿದ ಪ್ರಕರಣ,ಕೋಟಿ ಸನಿಹ ಪರೀಕ್ಷೆ ಪ್ರಮಾಣ
Team Udayavani, Jul 3, 2020, 6:20 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭಾರತದಲ್ಲೀಗ ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ 6 ಲಕ್ಷದ ಗಡಿ ದಾಟಿದೆ.
ಇದೇ ವೇಗದಲ್ಲೇ ಸೋಂಕಿತರ ಸಂಖ್ಯೆ ಏರುತ್ತಾ ಹೋದರೆ, ಇನ್ನೂ 3-4 ದಿನಗಳಲ್ಲೇ ಭಾರತವು ಜಾಗತಿಕ ಹಾಟ್‌ಸ್ಪಾಟ್‌ಗಳಲ್ಲಿ ಮೂರನೇ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ.
ಇದೇ ವೇಳೆಯಲ್ಲೇ ಗಮನಾರ್ಹ ಸಂಗತಿಯೆಂದರೆ, ದೇಶದಲ್ಲೀಗ ಒಟ್ಟು ಪರೀಕ್ಷೆಗಳ ಸಂಖ್ಯೆ 90 ಲಕ್ಷ ದಾಟಿದ್ದು, ಈ ಪ್ರಮಾಣದಲ್ಲೇ ಪರೀಕ್ಷೆಗಳು ನಡೆದರೆ ಇನ್ನೈದು ದಿನಗಳಲ್ಲಿ ಒಟ್ಟು ಪರೀಕ್ಷೆಗಳ ಸಂಖ್ಯೆ ಒಂದು ಕೋಟಿ ತಲುಪಲಿದೆ.
ವೇಗ ನಿಲ್ಲಿಸದ ನಿತ್ಯ ಪ್ರಕರಣಗಳ ಸಂಖ್ಯೆ
ಒಂದೆಡೆ ದೇಶದಲ್ಲಿ ಕೋವಿಡ್-19 ಸೋಂಕಿತರ ಚೇತರಿಕೆ ಪ್ರಮಾಣ 59.37 ಪ್ರತಿಶತ ತಲುಪಿರುವುದು ಸಮಾಧಾನದ ವಿಷಯವಾದರೂ ಇನ್ನೊಂದೆಡೆ ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇರುವುದು ಆತಂಕದ ಸಂಗತಿ.
ಜೂನ್ 25ರಿಂದ ದೇಶದಲ್ಲಿ ಪ್ರತಿ ನಿತ್ಯ 18 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ಜೂನ್ 27ರಂದು ಮೊದಲ ಬಾರಿಗೆ ನಿತ್ಯ ಸೋಂಕಿತರ ಸಂಖ್ಯೆ 20 ಸಾವಿರದ ಗಡಿ ದಾಟಿತ್ತು. ಆದರೆ ಈಗಲೂ ಇವುಗಳಲ್ಲಿ 50 ಪ್ರತಿಶತಕ್ಕೂ ಅಧಿಕ ಪ್ರಕರಣಗಳು, ಟಾಪ್ ಮೂರು ಹಾಟ್‌ಸ್ಪಾಟ್‌ಗಳಲ್ಲಿ, ಅಂದರೆ ಮಹಾರಾಷ್ಟ್ರ, ತಮಿಳುನಾಡು ಮತ್ತು ದಿಲ್ಲಿಯಲ್ಲಿ ವರದಿಯಾಗುತ್ತಿವೆ.
ಆತಂಕದ ವಿಷಯವೆಂದರೆ, ಕೆಲ ಸಮಯದಿಂದ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲೂ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದು, ದೇಶದಲ್ಲಿ ಸೋಂಕಿತ ರಾಜ್ಯಗಳ ಪಟ್ಟಿಯಲ್ಲೀಗ ಕರ್ನಾಟಕ 9ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಜೂನ್ 27ರಿಂದ ಜುಲೈ 1ರ ವರೆಗೆ, ಅಂದರೆ ಕೇವಲ 5 ದಿನಗಳಲ್ಲೇ 5,509 ಹೊಸ ಪ್ರಕರಣಗಳು ಪತ್ತೆಯಾಗಿವೆ.
5 ದಿನದಲ್ಲೇ 1 ಲಕ್ಷ ಸೋಂಕಿತರು!
ದೇಶದಲ್ಲಿ ಮೊದಲ ಕೋವಿಡ್ 19 ಪ್ರಕರಣ ಪತ್ತೆಯಾದದ್ದು ಜನವರಿ 30 ರಂದು, ತದನಂತರ ಸೋಂಕಿತರ ಸಂಖ್ಯೆ 1 ಲಕ್ಷಕ್ಕೆ ತಲುಪಲು 109 ದಿನಗಳು ಹಿಡಿದವು. ಮೇ 18ರಂದು ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕೆ ಏರಿತು.
ಗಮನಾರ್ಹ ಸಂಗತಿಯೆಂದರೆ, ಅದೇ ದಿನವೇ ಮೊದಲ ಬಾರಿ ದೇಶದಲ್ಲಿ ನಿತ್ಯ ಪರೀಕ್ಷೆಗಳ ಸಂಖ್ಯೆಯೂ 1 ಲಕ್ಷ ತಲುಪಿತ್ತು. ಆ ಅವಧಿಯಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ಜಾರಿಯಲ್ಲಿದ್ದ ಕಾರಣ ರೋಗ ದ್ವಿಗುಣಗೊಳ್ಳುವ ದರವೂ ವೇಗ ಪಡೆದಿರಲಿಲ್ಲ. ಆದರೆ ಲಾಕ್‌ಡೌನ್ ನಿರ್ಬಂಧಗಳು ಸಡಿಲವಾಗುತ್ತಿದ್ದಂತೆಯೇ, ಸೋಂಕಿತರ ಸಂಖ್ಯೆ ನೋಡನೋಡುತ್ತಿದ್ದಂತೆಯೇ ಏರಿಕೆ ಕಾಣಲಾರಂಭಿಸಿತು.
ಚೀನ 9 ಕೋಟಿ ಪರೀಕ್ಷೆಗಳು ಎಷ್ಟು ಸತ್ಯ?
ಇದುವರೆಗೂ ಅತಿಹೆಚ್ಚು ಟೆಸ್ಟ್‌ಗಳನ್ನು ನಡೆಸಿದ ರಾಷ್ಟ್ರಗಳಲ್ಲಿ ಮೊದಲ ಸ್ಥಾನದಲ್ಲಿ ಚೀನ ಇದೆ ಎಂದು ವಲ್ಡೋಮೀಟರ್‌ನ ಅಂಕಿಸಂಖ್ಯೆಗಳು ಹೇಳುತ್ತವೆ. ಇದುವರೆಗೂ ಜಿನ್‌ಪಿಂಗ್ ಆಡಳಿತವು ತಮ್ಮ ದೇಶದಲ್ಲಿ 9 ಕೋಟಿಗೂ ಅಧಿಕ ಟೆಸ್ಟಿಂಗ್‌ಗಳನ್ನು ನಡೆಸಲಾಗಿದೆ ಎಂದು ಹೇಳುತ್ತದೆ.
ಅದರಲ್ಲೂ ವುಹಾನ್ ನಗರವೊಂದರಲ್ಲೇ 1 ಕೋಟಿಗೂ ಅಧಿಕ ಟೆಸ್ಟಿಂಗ್‌ಗಳನ್ನು ನಡೆಸಿದ್ದೇವೆ ಎನ್ನುತ್ತದೆ ಆರೋಗ್ಯ ಇಲಾಖೆ. ಆದರೆ ಈ ವಿಚಾರವಾಗಿ ಸಾಂಕ್ರಾಮಿಕ ರೋಗತಡೆ ತಜ್ಞರು ಅನುಮಾನ ವ್ಯಕ್ತಪಡಿಸುತ್ತಾರೆ. ಚೀನ ಸೋಂಕಿತರ ಸಂಖ್ಯೆಯನ್ನು ಮುಚ್ಚಿಡುವ ಜತೆ
ಜತೆಗೇ ಟೆಸ್ಟಿಂಗ್‌ಗಳ ಸಂಖ್ಯೆಯನ್ನು ಬೇಕೆಂದೇ ಹೆಚ್ಚು ಹೇಳುತ್ತಿದೆ ಎನ್ನುವುದು ಅವರ ವಾದ. ಚೀನವನ್ನು ಬದಿಗೆ ಸರಿಸಿ ನೋಡಿದರೆ, ಅತಿ ಹೆಚ್ಚು ಟೆಸ್ಟಿಂಗ್‌ಗಳನ್ನು ನಡೆಸಿರುವುದು ಅಮೆರಿಕ. ಅಲ್ಲೀಗ 3 ಕೋಟಿ 48 ಲಕ್ಷಕ್ಕೂ ಅಧಿಕ ಜನರನ್ನು ಪರೀಕ್ಷಿಸಲಾಗಿದೆ. ಅತಿ ಹೆಚ್ಚು ಟೆಸ್ಟಿಂಗ್ ನಡೆಸಿದ ರಾಷ್ಟ್ರಗಳಲ್ಲಿ ಭಾರತವೀಗ 5ನೇ ಸ್ಥಾನದಲ್ಲಿದೆ.
90 ಲಕ್ಷ ಪರೀಕ್ಷೆಗಳನ್ನು ನಡೆಸಿದ ಭಾರತ
ಜುಲೈ 1ರ ವೇಳೆಗೆ ದೇಶದಲ್ಲಿ 90 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. ಗಮನಾರ್ಹ ಸಂಗತಿಯೆಂದರೆ ಕೆಲ ದಿನಗಳಿಂದ ಪ್ರತಿನಿತ್ಯ 2 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಮ್ಮಲ್ಲಿ ನಡೆಸಲಾಗುತ್ತಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟಿಂಗ್ ನಡೆಸುವುದೂ ಸಹ ಪ್ರಮುಖ ಅಸ್ತ್ರವಾಗಿದ್ದು, ಈ ನಿಟ್ಟಿನಲ್ಲಿ ಭಾರತ ಈ ತಿಂಗಳಾಂತ್ಯದ ವೇಳೆಗೆ ನಿತ್ಯ ಏನಿಲ್ಲವೆಂದರೂ ಕನಿಷ್ಠ 4 ಲಕ್ಷವಾದರೂ ಪರೀಕ್ಷೆಗಳನ್ನು ನಡೆಸುವಂತಾಗಬೇಕು ಎನ್ನುವುದು ಪರಿಣತರ ಅಭಿಪ್ರಾಯ.
ಇದುವರೆಗೂ ಭಾರತದಲ್ಲಿ ಅತಿಹೆಚ್ಚು ಟೆಸ್ಟ್‌ಗಳು ನಡೆದಿರುವುದು ನೆರೆಯ ತಮಿಳುನಾಡಿನಲ್ಲಿ, ಜುಲೈ 2ರ ವೇಳೆಗೆ ಆ ರಾಜ್ಯದಲ್ಲಿ 12 ಲಕ್ಷ 2 ಸಾವಿರ ಟೆಸ್ಟ್‌ಗಳು ನಡೆದಿವೆ. ಇನ್ನು ಅತ್ಯಂತ ವೇಗವಾಗಿ ಹಾಟ್‌ಸ್ಪಾಟ್ ಆಗುವ ಹಾದಿಯಲ್ಲಿ ಸಾಗುತ್ತಿರುವ ತೆಲಂಗಾಣದಲ್ಲಿ ಇದುವರೆಗೂ ಕೇವಲ 92 ಸಾವಿರ ಪರೀಕ್ಷೆಗಳನ್ನಷ್ಟೇ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.