ಸೋಂಕು ನಿವಾರಣೆಗಾಗಿ ನಾಲಿಗೆಯನ್ನೇ ಬಲಿ ಕೊಟ್ಟ ಭೂಪ
Team Udayavani, Apr 20, 2020, 7:05 AM IST
ಪಾಲನ್ಪುರ: ಕೋವಿಡ್ 19 ವೈರಸ್ ರಾಕೆಟ್ ವೇಗದಲ್ಲಿ ಹರಡುತ್ತಿರುವುದನ್ನು ತಡೆಯಲು ದೇವರ ಮೊರೆ ಹೋದ ವ್ಯಕ್ತಿಯೊಬ್ಬ, ಕೊನೆಗೆ ನಾಲಿಗೆಯನ್ನೇ ಬಲಿ ಕೊಟ್ಟಿದ್ದಾನೆ.
ಈ ಘಟನೆ ಗುಜರಾತ್ ರಾಜ್ಯದ ಬನಸ್ಕಂತ ಜಿಲ್ಲೆಯ ನಾದೇಶ್ವರಿಯಲ್ಲಿ ನಡೆದಿದೆ. ಈ ಹಳ್ಳಿ ಭಾರತ, ಪಾಕಿಸ್ಥಾನ ಗಡಿಗೆ ಕೇವಲ 18 ಕಿ.ಮಿ ದೂರದಲ್ಲಿದ್ದು, ಇಲ್ಲಿಗೆ ಮಧ್ಯಪ್ರದೇಶದಿಂದ ಕೆತ್ತನೆ ಕೆಲಸಕ್ಕಾಗಿ ವಲಸೆ ಬಂದಿದ್ದ ವಿವೇಕ್ ಶರ್ಮನೇ ತನ್ನ ನಾಲಿಗೆಯನ್ನು ಕತ್ತರಿಸಿಕೊಳ್ಳುವ ಮೂಲಕ ಕೋವಿಡ್ 19 ವೈರಸ್ ಸೋಂಕು ಕಡಿಮೆ ಮಾಡುವಂತೆ ಕೇಳಿಕೊಂಡ ಭೂಪ.
ಸೂಯಗಾಮದಲ್ಲಿರುವ ಭವಾನಿ ದೇವಾಲಯದಲ್ಲಿ ಕೆತ್ತನೆ ಕೆಲಸ ಮಾಡಲು ಬಂದಿದ್ದರು. ದೇವಿ ಆರಾಧಕನಾದ ವಿವೇಕ್, ಶನಿವಾರ ಬೆಳಗ್ಗೆ ಮಾರ್ಕೆಟ್ಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟವನು, ನಾದೇಶ್ವರಿ ದೇವಾಲಯದಲ್ಲಿ ನಾಲಿಗೆ ಕತ್ತರಿಸಿಕೊಂಡಿದ್ದಾರೆ. ಅವರ ಅಣ್ಣ ಕರೆ ಮಾಡಿದಾಗ, ಬೇರೆ ವ್ಯಕ್ತಿ ಕರೆ ಸ್ವೀಕಾರ ಮಾಡಿ, ಈ ವಿಷಯ ಮುಟ್ಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.