ವೈದ್ಯಕೀಯ ಸಾಧನ ದಾಸ್ತಾನು ಮಾಡಲು ಸಲಹೆ
Team Udayavani, May 22, 2020, 9:53 AM IST
ಸೇಂಟ್ ಪಾಲ್: ಇಲ್ಲಿನ ಯುನೈಟೆಡ್ ಆಸ್ಪತ್ರೆಯ ದಾದಿಯರು ತಮಗೆ ಇನ್ನಷ್ಟು ಸುರಕ್ಷೆಯನ್ನು ನೀಡಬೇಕು ಎಂದು ಪ್ರತಿಭಟನೆ ನಡೆಸುತ್ತಿರುವುದು.
ವಾಷಿಂಗ್ಟನ್: ಕೋವಿಡ್ ಹಾವಳಿಯನ್ನು ತಡೆಗಟ್ಟಲು ವಿಫಲರಾಗಿ ಎಲ್ಲೆಡೆಗಳಿಂದ ಟೀಕೆಯನ್ನು ಎದುರಿಸುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ದೇಶದ ಒಂಭತ್ತು ಪ್ರಮುಖ ವಿಜ್ಞಾನಿಗಳು ಹಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಏಳು ಪುಟಗಳ ವರದಿಯಲ್ಲಿ ಅವರು ಸಾಂಕ್ರಾಮಿಕ ರೋಗ ಘಟಸ್ಫೋಟಗೊಂಡಾಗ ಕೈಗೊಳ್ಳಬೇಕಾದ ತುರ್ತು ನಿರ್ಧಾರಗಳ ಬಗ್ಗೆ ಗಮನ ಸೆಳೆದಿದ್ದಾರೆ ಹಾಗೂ ವೈದ್ಯಕೀಯ ಸಾಧನಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇಟ್ಟುಕೊಳ್ಳಲು ಸಲಹೆ ಮಾಡಿದ್ದಾರೆ.
ಕೋವಿಡ್ ವೈರಸ್ ಹಾವಳಿ ಇನ್ನೂ ನಿಂತಿಲ್ಲ. ಇನ್ನು ಮೂರು ತಿಂಗಳ ಒಳಗಾಗಿ ಅಗತ್ಯವಿರುವ ವೈದ್ಯಕೀಯ ಸಾಧನಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಷಮಿಸಬಹುದು ಎಂಬ ಎಚ್ಚರಿಕೆಯನ್ನು ಈ ವಿಜ್ಞಾನಿಗಳು ನೀಡಿದ್ದಾರೆ.
ಎಲ್ಲ ಒಂಭತ್ತು ವಿಜ್ಞಾನಿಗಳು ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಎರಡೂ ಅವಧಿಯಲ್ಲಿ ವೈಜ್ಞಾನಿಕ ಸಲಹೆಗಾರರಾಗಿದ್ದವರು. ಒಬಾಮ ಮತ್ತು ಟ್ರಂಪ್ ನಡುವೆ ಕೋವಿಡ್ ವಿಚಾರವಾಗಿ ಚಕಮಕಿ ನಡೆಯುತ್ತಿರುವಾಗಲೇ ಈ ವಿಜ್ಞಾನಿಗಳು ತಂಡ ಸಲಹೆಗಳನ್ನು ನೀಡಿದೆ.
ಟೆಸ್ಟಿಂಗ್ ಕಿಟ್, ರಕ್ಷಣಾ ಉಡುಗೆ, ಎನ್ 95 ಮಾಸ್ಕ್, ಶಮನಕಾರಿ ಔಷಧಿ ಇತ್ಯಾದಿಗಳ ದಾಸ್ತಾನು ಪ್ರಕ್ರಿಯೆ ತಕ್ಷಣ ಶುರುವಾಗಬೇಕು. ಇನ್ನೊಂದು ಸುತ್ತಿನ ಕೋವಿಡ್ ತಾಂಡವ ಪ್ರಾರಂಭವಾಗಲು ಹೆಚ್ಚು ಸಮಯ ಬೇಕಾಗಿಲ್ಲ. ಹೀಗಾಗಿ ಸಮರೋಪಾದಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ವಿಜ್ಞಾನಿಗಳು ಹೇಳಿದ್ದಾರೆ.
ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಮಟ್ಟದಲ್ಲಿ ಈ ಕುರಿತು ಸಮಗ್ರವಾದ ಕಾರ್ಯಯೋಜನೆಯೊಂದನ್ನು ರಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಸತ್ತು ನೀಡಿರುವ ಸಲಹೆಗಳನ್ನು ಅಧ್ಯಕ್ಷರು ಪರಿಗಣಿಸಬೇಕೆಂದು ವಿಜ್ಞಾನಿಗಳು ಹೇಳಿದ್ದಾರೆ.
ವೆಂಟಿಲೇಟರ್, ಟೆಸ್ಟಿಂಗ್ ಕಿಟ್, ಮಾಸ್ಕ್, ಪಿಪಿಇ ಮತ್ತಿತರ ಸಾಧನಗಳ ಕೊರತೆಯಿಂದಲೇ ಕೋವಿಡ್ ಹಾವಳಿ ತೀವ್ರವಾಯಿತು ಹಾಗೂ ಅನೇಕ ಆರೋಗ್ಯ ಸಿಬಂದಿಗಳು ಪ್ರಾಣ ಕಳೆದುಕೊಂಡರು. ಈ ತಪ್ಪು ಪುನರಾವ ರ್ತನೆಯಾಗಬಾರದು ಎಂದು ವಿಜ್ಞಾನಿಗಳು ಕಳಕಳಿ ವ್ಯಕ್ತಪಡಿಸಿದ್ದಾರೆ.
ಮುಂಬರುವ ಶರದೃತುವಿನಲ್ಲಿ ಅಮೆರಿಕದಲ್ಲಿ ಎರಡನೇ ಸುತ್ತಿನ ಕೋವಿಡ್ ಹಾವಳಿ ಶುರುವಾಗುವ ಸಾಧ್ಯತೆಯಿದೆ ಎಂಬ ಆತಂಕವಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳ ಸಲಹೆ ಮಹತ್ವ ಪಡೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.