ಆಫ್ರಿಕದ ಕೋವಿಡ್ ಚಿತ್ರಣ : ಕೋವಿಡ್ ಸೋಂಕಿನ ಭೀತಿಯಲ್ಲಿ ಆಫ್ರಿಕದ 25 ಕೋಟಿ ಜನತೆ
Team Udayavani, May 22, 2020, 12:51 PM IST
ಹೊಸದಿಲ್ಲಿ: ಸರಕಾರಿ ಆಸ್ಪತ್ರೆಗೆ ಕೋವಿಡ್ ಸೋಂಕಿತ ರೋಗಿಯನ್ನು ಕರೆ ತಂದ ವೈದ್ಯರು.
ಕಿನ್‌ಶಾಸ: ಆಫ್ರಿಕದಲ್ಲಿ ಈ ವರ್ಷ ಸುಮಾರು 25 ಕೋಟಿ ಜನರಿಗೆ ಕೋವಿಡ್ -19 ಸೋಂಕು ತಗಲಬಹುದು ಮತ್ತು 1.50 ಲಕ್ಷದಿಂದ 1.90 ಲಕ್ಷದಷ್ಟು ಸಾವುಗಳು ಸಂಭವಿಸಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಎಚ್ಚರಿಸಿದೆ. ಆಫ್ರಿಕದಲ್ಲಿ ಈ ತನಕ 1 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ. ಆದರೆ ಮುಂದಿನ ವರ್ಷಗಳಲ್ಲಿ ಕೋವಿಡ್ ಸುದೀರ್ಘ ಕಾಲ ಆಫ್ರಿಕ ಖಂಡವನ್ನು ಕಾಡಬಹುದೆಂದು ತಜ್ಞರು ಎಚ್ಚರಿಸುತ್ತಾರೆ. ಆಫ್ರಿಕದ ಕೆಲ ಹಿಂದುಳಿದ ರಾಷ್ಟ್ರಗಳಲ್ಲಿನ ಸ್ಥಿತಿ ಕುರಿತು ಗಮನ ಹರಿಸಿದಾಗ ಅಲ್ಲಿ ಕೋವಿಡ್ ಅನ್ನು ನಿಯಂತ್ರಿಸಲಾಗಿದೆಯೇ ಅಥವಾ ಸೋಂಕು ಪ್ರಕರಣಗಳು ದಾಖಲಾಗುತ್ತಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಕೆಲ ರಾಷ್ಟ್ರಗಳ ಚಿತ್ರಣ ಇಲ್ಲಿದೆ.
ಡಿಆರ್ ಕಾಂಗೊ
ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಿ ಮಾರ್ಚ್‌ನಲ್ಲಿ ಮೊದಲ ಕೋವಿಡ್ ಪ್ರಕರಣ ದೃಢಪಟ್ಟಿತ್ತು. ಆದರೆ ಸೋಂಕು ಮೊದಲೇ ಬಂದಿರಬೇಕೆಂದು ಕಿನ್‌ಶಾಸದಲ್ಲಿನ ವೈದ್ಯರೊಬ್ಬರು ಅಭಿಪ್ರಾಯಪಡುತ್ತಾರೆ. ವೈದ್ಯಕೀಯ ಸಿಬಂದಿ ಗೊತ್ತಿಲ್ಲದೆ ಈಗಾಗಲೇ ಕೋವಿಡ್ ಅಪಾಯಕ್ಕೆ ತೆರೆದುಕೊಂಡಿದ್ದಾರೆ ಮತ್ತು ಅವರು ಒಂದು ಬಗೆಯ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿದ್ದಾರೆ ಎಂದವರು ಹೇಳುತ್ತಾರೆ. ಡಿಆರ್ ಕಾಂಗೊದಲ್ಲಿ ವೈದ್ಯಕೀಯ ಉಪಕರಣಗಳ ಕೊರತೆಯಿಂದಾಗಿ ಕೆಲವೇ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಮೇ 18ರ ತನಕ ಇಡೀ ದೇಶದಲ್ಲಿ ಕೇವಲ 4,493 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ದೇಶದಲ್ಲಿ ಈಗ 1,600ಕ್ಕಿಂತ ಅಧಿಕ ದೃಢಪಟ್ಟ ಪ್ರಕರಣಗಳಿದ್ದು 60ಕ್ಕಿಂತ ಹೆಚ್ಚು ಸಾವುಗಳು ಸಂಭವಿಸಿವೆ. ಆಫ್ರಿಕದ ರಾಷ್ಟ್ರಗಳ ಪೈಕಿ ಇದು 9ನೇ ಗರಿಷ್ಠ ಪೀಡಿತ ರಾಷ್ಟ್ರವಾಗಿದೆ. ಸರಕಾರ ಲಾಕ್‌ಡೌನ್ ಜಾರಿಗೊಳಿಸಿದ್ದು ದೇಶದ 26 ಪ್ರಾಂತಗಳ ಪೈಕಿ 7ರಲ್ಲಿ ಕೋವಿಡ್ ಸೋಂಕು ಹಬ್ಬಿದೆ.
ಕೀನ್ಯಾ
ಕೀನ್ಯಾ ರಾಜಧಾನಿ ನೈರೋಬಿಯ ದೊಡ್ಡ ಸಾರ್ವಜನಿಕ ಆಸ್ಪತ್ರೆಗೆ ಡಿಸೆಂಬರ್ ಮತ್ತು ಮಾರ್ಚ್‌ನಲ್ಲಿ ಕ್ಷಯ, ನ್ಯುಮೋನಿಯ ಮತ್ತು ಅಸ್ತಮಾದಂಥ ಉಸಿರಾಟ ಸಂಬಂಧಿ ಕಾಯಿಲೆಗಳಿಗಾಗಿ ಭರ್ತಿಯಾಗುವವರ ಸಂಖ್ಯೆ ಶೇ. 40ರಷ್ಟು ಏರಿಕೆಯಾಗಿತ್ತು. ರಾಷ್ಟ್ರವ್ಯಾಪಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ ಬಳಿಕ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಕಡಿಮೆಯಾಯಿತು. ಆದರೆ ಆಸ್ಪತ್ರೆಯ ಶವಾಗಾರಕ್ಕೆ ಬರುವ ಶವಗಳ ಸಂಖ್ಯೆ ಜಾಸ್ತಿಯಾಯಿತು.
ಕೀನ್ಯಾದಲ್ಲಿ ಈ ತನಕ 44,851 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಕೋವಿಡ್ ಪತ್ತೆಯಾದಲ್ಲಿ ತಮ್ಮನ್ನು ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಲಾಗುತ್ತದೆಯೆಂದು ಜನರು ಆಸ್ಪತ್ರೆಗಳಿಗೆ ತೆರಳಲು ಅಂಜುತ್ತಿದ್ದಾರೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಜನರು ತಮ್ಮ ಖರ್ಚನ್ನು ತಾವೇ ಭರಿಸಬೇಕಾಗುತ್ತದೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಮೂಲಸೌಕರ್ಯಗಳಿಲ್ಲದೆ ಸ್ಥಿತಿ ಶೋಚನೀಯವಾಗಿದೆ.
ನೈಜೀರಿಯ
ನೈಜೀರಿಯದಲ್ಲಿ ಕೋವಿಡ್ ಪತ್ತೆಗೆ ಬಹಳ ಕಡಿಮೆ ಪರೀಕ್ಷೆಗಳನ್ನು ನಡೆಸಲಾಗಿದೆ. ನೈಜೀರಿಯದ ಅತಿಹೆಚ್ಚು ಜನಬಾಹುಳ್ಯದ ಕಾನೊ ರಾಜ್ಯದಲ್ಲಿ ಮೂರು ತಿಂಗಳುಗಳಿಂದ ಹೆಚ್ಚು ಜನರು ಅಸ್ವಸ್ಥರಾಗುತ್ತಿರುವ ಮತ್ತು ಮೃತಪಡುತ್ತಿರುವ ವರದಿಗಳು ಬರುತ್ತಿವೆ. “ಇಷ್ಟೊಂದು ಸಂಖ್ಯೆಯಲ್ಲಿ ಶವಗಳು ಬರುತ್ತಿರುವುದನ್ನು ನಾನೆಂದೂ ನೋಡಿಲ್ಲ. ಸುಮಾರು 60 ವರ್ಷಗಳ ಹಿಂದೆ ಕಾಲರಾ ಸಾಂಕ್ರಾಮಿಕ ಹಬ್ಬಿದ್ದ ಸಂದರ್ಭವನ್ನು ನಮ್ಮ ಹೆತ್ತವರು ಹೇಳುತ್ತಿದ್ದರು’ ಎಂದು ನಗರದ ದಫನ ಭೂಮಿಯಲ್ಲಿ ಗೋರಿ ಅಗೆಯುವ ವ್ಯಕ್ತಿ ಹೇಳುತ್ತಾನೆ. ಅಸ್ತಮಾ, ನ್ಯುಮೋನಿಯ, ಟಿಬಿ, ಎದೆನೋವು, ಗಂಟಲು ಕೆರೆತ ಮುಂತಾದ ರೋಗಲಕ್ಷಣಗಳೊಂದಿಗೆ ಬರುವ ಜನರ ಸಂಖ್ಯೆ ಹೆಚ್ಚಿದೆಯೆಂದು ಆಸ್ಪತ್ರೆಯ ಔಷಧ ವಿಭಾಗದ ಮುಖ್ಯಸ್ಥ ಪ್ರೊ| ಮೂಸಾ ಬಾಬಾ-ಶಾನಿ ಹೇಳುತ್ತಾರೆ. 20 ಕೋಟಿ ಜನಸಂಖ್ಯೆಯೊಂದಿಗೆ ಆಫ್ರಿಕದ ಗರಿಷ್ಠ ಜನಸಂಖ್ಯೆಯುಳ್ಳ ರಾಷ್ಟ್ರವೆನಿಸಿರುವ ನೈಜೀರಿಯದಲ್ಲಿ ಈವರೆಗೆ 33,970 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ದೇಶದಲ್ಲಿ 6,000ಕ್ಕೂ ಅಧಿಕ ದೃಢಪಟ್ಟ ಪ್ರಕರಣಗಳಿವೆ.
ಇಥಿಯೋಪಿಯ
ಆಫ್ರಿಕದ ಎರಡನೆ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ (10 ಕೋಟಿ) ಇಥಿಯೋಪಿಯದಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ. ಅಲ್ಲಿ ಉಸಿರಾಟ ಸಂಬಂಧಿ ಸೋಂಕುಗಳು ಸಾಮಾನ್ಯವಾಗಿವೆ. ಇಥಿಯೋಪಿಯದಲ್ಲಿ ಈವರೆಗೆ 59,029 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಮತ್ತು 400ಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.
ಉಗಾಂಡ
ಉಗಾಂಡ ಪೂರ್ವ ಆಫ್ರಿಕದ ರಾಷ್ಟ್ರಗಳಲ್ಲೇ ಅತಿ ಹೆಚ್ಚು ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಿದೆ. ವ್ಯಾಪಾರಿಗಳು ತಮ್ಮ ಮನೆಗೆ ಕೋವಿಡ್ ಒಯ್ಯುವ ಅಪಾಯವನ್ನು ತಪ್ಪಿಸಲು ಮಾರುಕಟ್ಟೆಯಲ್ಲೇ ನಿದ್ರಿಸುವಂತೆ ಅವರಿಗೆ ಆದೇಶಿಸಲಾಗಿದೆ. ಉಗಾಂಡದಲ್ಲಿ ಕೇವಲ 260 ಪ್ರಕರಣಗಳು ವರದಿಯಾಗಿವೆ ಮತ್ತು ಯಾವುದೇ ಸಾವು ಸಂಭವಿಸಿಲ್ಲ. ದೇಶದಲ್ಲಿ ಈವರೆಗೆ 87,832 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಮುಂದಿನ ಎರಡು ವಾರಗಳಲ್ಲಿ 6 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲರಿಗೆ ಉಚಿತ ಮಾಸ್ಕ್ ವಿತರಿಸುವುದಾಗಿ ಸರಕಾರ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.